ಸೋಮವಾರಪೇಟೆ, ಅ. ೧೧: ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿ ಸಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕÀ ಡಾ. ಮಂಥರ್ಗೌಡ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲೆಯ ಮಡಿಕೇರಿ, ವೀರಾಜ ಪೇಟೆ, ಕುಶಾಲನಗರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಇದೀಗ ಪೊನ್ನಂ ಪೇಟೆಯೂ ಘೋಷಿಸಲ್ಪಟ್ಟಿದೆ.
ಆದರೆ ಸೋಮವಾರಪೇಟೆ ತಾಲೂಕನ್ನು ಭಾಗಶ: ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇದು ಸರಿಯಲ್ಲ ಎಂದು ರೈತ ಸಂಘದ ಪದಾಧಿಕಾರಿಗಳು ಆಕ್ಷೇಪಿಸಿದರು.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅರೇಬಿಕಾ ಕಾಫಿ, ಭತ್ತ, ಕಾಳುಮೆಣಸನ್ನು ಹೆಚ್ಚು ಬೆಳೆಯ ಲಾಗುತ್ತದೆ. ವಾಡಿಕೆ ಮಳೆಯಾಗದೇ ತಾಲೂಕಿನಲ್ಲಿ ಅತೀ ಹೆಚ್ಚು ಕೃಷಿ ಫಸಲು ಹಾನಿಯಾಗಿದೆ. ಕಾಫಿ ತೋಟಗಳು ರೋಗಪೀಡಿತವಾಗಿದೆ. ಶೇ.೪೦ರಿಂದ ೫೦ ರಷ್ಟು ಮಳೆ ಕೊರತೆಯಾಗಿದೆ. ಮುಂಗಾರಿನಲ್ಲಿ ಮಳೆ ಬೀಳದೆ, ಹಿಂಗಾರಿನಲ್ಲಿ ಮಳೆ ಬಿದ್ದರೆ, ಅಕಾಲಿಕ ಮಳೆಯಾಗುತ್ತದೆ. ಇದರಿಂದ ಫಸಲಿಗೆ ಹಾನಿಯೇ ಜಾಸ್ತಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಶಾಸಕ ಮಂಥರ್ ಗೌಡ ಮಾತನಾಡಿ, ಸೋಮವಾರಪೇಟೆ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಕ್ರಮಕೈಗೊಳ್ಳಬೇಕೆಂದು ಸಂಬAಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಶೇ. ೩೦ ರಿಂದ ೫೦ರಷ್ಟು ಬೆಳೆಹಾನಿಯಾಗಿರುವ ಬಗ್ಗೆ ವರದಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಮ್ಮೆ ಅಧಿಕಾರಿಗಳನ್ನು ಕಳುಹಿಸಿ ೧೦ ಕಡೆ ಮಣ್ಣಿನ ಪರೀಕ್ಷೆ ಮಾಡಿಸಲಾಗುವುದು ಎಂದು ಹಿರಿಯ ಅಧಿಕಾರಿ ಭರವಸೆ ನೀಡಿದ್ದಾರೆ. ಕಂದಾಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಸೋಮವಾರಪೇಟೆ ತಾಲೂಕು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದರು.
ಕಂದಾಯ ಮತ್ತು ಕೃಷಿ ಇಲಾಖೆಯ ಅವೈಜ್ಞಾನಿಕ ಸರ್ವೆಯಿಂದ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಐದಾರು ಕಿ.ಮೀ.ಗೆ ಮಳೆ ಹಾಗೂ ವಾತಾವರಣದಲ್ಲಿ ವ್ಯತ್ಯಾಸವಿರುತ್ತದೆ. ಮತ್ತೊಮ್ಮೆ ಬರಪೀಡಿತ ಗ್ರಾಮಗಳಲ್ಲಿ ಸರ್ವೆ ಮಾಡಬೇಕು. ತೋಟಗಾರಿಕೆ, ಕೃಷಿ, ಸಂಬಾರ ಮಂಡಳಿ, ಕಾಫಿ ಬೋರ್ಡ್ ಇಲಾಖಾಧಿಕಾರಿಗಳ ಸಭೆ ಕರೆದು, ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ರೈತ ಮುಖಂಡರಾದ ಯಡೂರು ನಾಗರಾಜ್, ಲಿಂಗೇರಿ ರಾಜೇಶ್, ಕೂತಿ ದಿವಾಕರ್ ಸೇರಿದಂತೆ ಇತರರು ಇದ್ದರು.