ಮಡಿಕೇರಿ, ಅ. ೧೧: ಕೊಡಗಿನ ಪವಿತ್ರ ಕ್ಷೇತ್ರ ಶ್ರೀ ತಲಕಾವೇರಿಯಲ್ಲಿ ಈ ಬಾರಿಯ ತೀರ್ಥೋದ್ಭವಕ್ಕಾಗಿ ದಿನಗಣಗೆ ಆರಂಭಗೊAಡಿದೆ. ಕರ್ಕಾಟಕ ಲಗ್ನದಲ್ಲಿ ಅಕ್ಟೋಬರ್ ೧೮ ರ ಬುಧವಾರದಂದು ಬೆಳಗಿನ ಜಾವ ೧ ಗಂಟೆ ೨೭ ನಿಮಿಷಕ್ಕೆ ಈ ವರ್ಷ ಶ್ರೀ ಕಾವೇರಿ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವ ಘಟಿಸಲಿದೆ. ಜಿಲ್ಲೆಯ ಈ ಪವಿತ್ರ ವೇಳೆಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಮೂಲಕ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜಿಲ್ಲಾಡಳಿತವೂ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿದೆ. ಇದು ಒಂದೆಡೆಯಾದರೆ ಇಲ್ಲಿನ ಸ್ಥಳೀಯ ಮೂಲನಿವಾಸಿ ಭಕ್ತಾದಿಗಳು ಕ್ಷೇತ್ರಕ್ಕೆ ಈ ಹಿಂದಿನ ಧಾರ್ಮಿಕ ವೈಭವದಂತೆ ತೆರಳಲು ಸಿದ್ಧತೆಯಲ್ಲಿದ್ದಾರೆ.
ಕಾವೇರಿಯನ್ನು ಕುಲದೇವಿಯನ್ನಾಗಿ ಪೂಜಿಸುವ ಇಲ್ಲಿನ ಪ್ರಮುಖ ಮೂಲನಿವಾಸಿಗಳಾಗಿರುವ ಕೊಡವ ಜನಾಂಗದ ಭಕ್ತರು ಕಳೆದ ಮೂರು - ನಾಲ್ಕು ವರ್ಷಗಳಿಂದ ಕ್ಷೇತ್ರಕ್ಕೆ ವಿಶೇಷ ಉತ್ಸುಕತೆಯಿಂದ ಧಾರ್ಮಿಕತೆಯ ಭಕ್ತಿ ಭಾವದೊಂದಿಗೆ ತೆರಳುತ್ತಿದ್ದಾರೆ.
ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ರಾಜ್ಯದ ಇತರೆಡೆಗಳಲ್ಲಿ ನೆಲೆಸಿರುವ ಜನಾಂಗದವರು ಭಾಗಮಂಡಲದಿAದ ತಲಕಾವೇರಿಯ ತನಕದ ಸಾಂಪ್ರದಾಯಿಕ ಉಡುಗೆ-ಪದ್ಧತಿಯೊಂದಿಗೆ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವುದು ವಿಶೇಷವಾಗಿದೆ. ಕೊಡಗಿನ ವಿವಿಧೆಡೆಗಳಿಂದ ಬೆಂಗಳೂರು, ಮೈಸೂರು ಭಾಗದಿಂದ ವಿಶೇಷ ಬಸ್ನಲ್ಲಿ ಆಗಮಿಸಿ ಭಾಗಮಂಡಲದಲ್ಲಿ ಒಟ್ಟಾಗಿ ಕಲೆತು ಅಲ್ಲಿಂದ ದುಡಿಕೊಟ್ಟ್ ಪಾಟ್ - ತಳಿಯತಕ್ಕಿ ಬೊಳಕ್ ಸಹಿತವಾಗಿ ಮಾತೆಯನ್ನು ಬರಮಾಡಿಕೊಳ್ಳಲು ತಲಕಾವೇರಿ ಸನ್ನಿಧಾನಕ್ಕೆ ತೆರಳುತ್ತಿರುವುದು ವರ್ಷಂಪ್ರತಿ ಹೆಚ್ಚಿನ ಭಕ್ತರನ್ನು ಸೆಳೆಯುತ್ತಿದೆ.
ಪ್ರತಿವರ್ಷದಂತೆ ಈ ಬಾರಿಯೂ ಇದಕ್ಕಾಗಿ ವಿವಿಧ ಸಂಘ-ಸAಸ್ಥೆಗಳ ಮೂಲಕ ಪ್ರಯತ್ನ ನಡೆದಿದ್ದು, ವಿವಿಧೆಡೆಗಳಿಂದ ಬಸ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಕೆಲವು ಸಂಘಟನೆಗಳು ಜನಜಾಗೃತಿಯ ಮೂಲಕವೂ ಭಕ್ತರನ್ನು ತೀರ್ಥೋದ್ಭವದ ಸಂದರ್ಭ ಈ ಹಿಂದಿನ ವರ್ಷಗಳಂತೆ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಬರುವಂತೆ ಮಾಡಲೂ ಯತ್ನಿಸುತ್ತಿವೆ. ಈ ಪ್ರಯತ್ನಕ್ಕೆ ಯುವ ಸಮೂಹ ಹೆಚ್ಚಿನ ಆಸಕ್ತಿ ತೋರುವ ಮೂಲಕ ಮುಂದೆ ಬರುತ್ತಿರುವುದು ಪ್ರಸ್ತುತದ ವಿದ್ಯಮಾನವಾಗಿದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಾ ಬರುತ್ತಿದ್ದಂತಿತ್ತು... ಆದರೆ ಹೊಸ ಬೆಳವಣಿಗೆಯಲ್ಲಿ ಇದೀಗ ಕೆಲವು ವರ್ಷಗಳಿಂದ ಈ ವೈಭವ ಮತ್ತೆ ಮರುಕಳಿಸುತ್ತಿರುವುದು ಗಮನಾರ್ಹವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕಾವೇರಿ ಕುರಿತಾದ ಭಕ್ತಿ ಗೀತೆಗಳು ಹರಿದಾಡುತ್ತಿದೆ. ಕೊಡವ ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಾ ಬರುತ್ತಿದ್ದಂತಿತ್ತು... ಆದರೆ ಹೊಸ ಬೆಳವಣಿಗೆಯಲ್ಲಿ ಇದೀಗ ಕೆಲವು ವರ್ಷಗಳಿಂದ ಈ ವೈಭವ ಮತ್ತೆ ಮರುಕಳಿಸುತ್ತಿರುವುದು ಗಮನಾರ್ಹವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕಾವೇರಿ ಕುರಿತಾದ ಭಕ್ತಿ ಗೀತೆಗಳು ಹರಿದಾಡುತ್ತಿದೆ. ಕೊಡವ ಜನಾಂಗದವರೊAದಿಗೆ ಇನ್ನಿತರ ಮೂಲನಿವಾಸಿಗಳು ಕಾವೇರಿಯನ್ನು ಆರಾಧ್ಯ ದೈವವಾಗಿ ಪೂಜಿಸುವ ಇನ್ನಿತರ ಎಲ್ಲಾ ಜಾತಿ-ಜನಾಂಗಗಳ ಭಕ್ತಾದಿಗಳೂ ಕ್ಷೇತ್ರದತ್ತ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಈ ಹಿಂದೆ ತೀರ್ಥೋದ್ಭವದ ಬಳಿಕ ಮುಂದಿನ ಒಂದು ತಿಂಗಳ ಕಾಲದ ಅವಧಿ (ಕಿರು ಸಂಕ್ರಮಣ) ತನಕ ಸ್ಥಳೀಯರು ತಮ್ಮ ಅನುಕೂಲದಂತೆ ಕ್ಷೇತ್ರಕ್ಕೆ ಆಗಮಿಸಿ ಪೂಜೆ-ಪದ್ಧತಿ ನೆರವೇರಿಸುತ್ತಿದ್ದರು. ಇದರಿಂದಾಗಿ ತೀರ್ಥೋದ್ಭವದ ವೇಳೆ ತಮಿಳುನಾಡು, ಕೇರಳ, ಮಂಡ್ಯದAತಹ ಕಡೆಗಳಿಂದ ಆಗಮಿಸುವ ಭಕ್ತರು - ಪ್ರವಾಸಿಗಳ ಸಂಖ್ಯೆ ಸ್ಥಳೀಕರಿಗಿಂತ ಹೆಚ್ಚಿರುತ್ತಿತ್ತು. ಆದರೆ ಇದೀಗ ಈ ವಿಚಾರದಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ಇದೀಗ ಎಲ್ಲಾ ಭಕ್ತರ ನಡುವೆ ವಿಶೇಷವಾಗಿ ಸ್ಥಳೀಯರಾದ ಯುವಕ-ಯುವತಿಯರು ಭಕ್ತಿ ಭಾವದೊಂದಿಗೆ ಸಾಂಪ್ರದಾಯಿಕ ನೆಲೆಗಟ್ಟಿನ ಐತಿಹ್ಯದೊಂದಿಗೆ ಮುಂದೆ ಬರುತ್ತಿರುವುದು ಗೋಚರಿಸುತ್ತಿದೆ. ಅದರಲ್ಲೂ ವಿಶೇಷವಾಗಿ ‘ತಲಕಾವೇರಿಕ್ ತಿಂಗಕೋರ್ ಮೊಟ್ಟ್’ ಎಂಬ ಧ್ಯೇಯದೊಂದಿಗೆ ಸಂಘಟನೆಯೊAದು ಕೆಲ ವರ್ಷಗಳಿಂದ ಅಸ್ತಿತ್ವಕ್ಕೆ ಬಂದಿದೆ. ಈ ಸಂಘಟನೆ ಸತತ ೩೩ ತಿಂಗಳು ಕ್ಷೇತ್ರಕ್ಕೆ ಸೇವೆ ಸಲ್ಲಿಸಿದೆ. ಈ ಸಂಘಟನೆಯವರು ಪ್ರತಿ ತಿಂಗಳು ತಲಕಾವೇರಿ-ಭಾಗಮಂಡಲಕ್ಕೆ ಆಗಮಿಸುತ್ತಿರುವುದೂ ಕೂಡ ಭಕ್ತರನ್ನು ಸೆಳೆಯಲು ಮತ್ತೊಂದು ಕಾರಣವಾಗಿದೆ. ಕ್ಷೇತ್ರಕ್ಕೆ ಹೆಚ್ಚು ಸಂಖ್ಯೆಯಲ್ಲಿ ಧಾರ್ಮಿಕತೆಯೊಂದಿಗೆ ಪಾಲ್ಗೊಳ್ಳುವಂತೆ ಸಂದೇಶಗಳೂ ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ವಿವಿಧ ಕೊಡವ ಸಮಾಜ, ಸಂಘ-ಸAಸ್ಥೆಗಳ ತೊಡಗಿಸಿಕೊಳ್ಳುವಿಕೆ ಇದೆಯಾದರೂ ಪಾದಯಾತ್ರೆಯಲ್ಲಿ ಯಾವುದೇ ಬ್ಯಾನರ್ ಇರುವುದಿಲ್ಲ. ಇದು ಇಡೀ ಜನಾಂಗದ ಸೇವೆ ಎಂಬAತೆ ಪರಿಗಣಿಸಲ್ಪಡುತ್ತಿರುವುದು ವಿಶೇಷವಾಗಿದೆ. ಏನೇ ಇರಲಿ ಕಾವೇರಿ ಇಲ್ಲಿನ ಮೂಲನಿವಾಸಿಗಳಿಗೆ ಕುಲದೇವತೆಯಾಗಿದ್ದು ಇನ್ನಿತರ ಎಲ್ಲರಿಗೂ ಆರಾಧ್ಯ ದೈವ. ನಾಡಿನ ಜೀವ ನದಿಯಾಗಿದೆ. ರಾಜ್ಯ ಸೇರಿದಂತೆ ಪರರಾಜ್ಯಗಳಿಗೂ ಅನ್ನದಾತೆ ಜೀವದಾತೆಯಾಗಿರುವ ಕಾವೇರಿ ಮಾತೆಯ ಆರಾಧನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿ... ಶಾಂತಿ ಸಾಮರಸ್ಯದ ವಿಚಾರವಾಗಿ ಮುಂದುವರಿಯು ವುದರೊಂದಿಗೆ ದೇಶಕ್ಕೆ ಮಾದರಿಯಾಗಲಿ ಎಂಬುದು ಸರ್ವರ ಆಶಯ.
- ಕಾಯಪಂಡ ಶಶಿ ಸೋಮಯ್ಯ