ಮಡಿಕೇರಿ, ಅ. ೧೧: ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ೩ನೇ ಹಂತದ ಪಾದಯಾತ್ರೆಯ ಮುಂದುವರಿದ ಭಾಗವನ್ನು ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ-ತೆರಾಲ್-ಬಿರುನಾಣಿಯ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನ್ನಾಡ್, ನಾಲ್ಕು ನಾಡು ಮಂದ್‌ಗಳಲ್ಲಿ ಪಾದಯಾತ್ರೆ ನಡೆಸಿತು.

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆ ನಡೆಸಿದ ನಾಚಪ್ಪ, ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಕೋರಿದರು.

ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಈ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಆದ್ದರಿಂದ ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ÷್ಮ, ಸಮಗ್ರ ಕುಲಶಾಸ್ತç ಅಧ್ಯಯನ ಆರಂಭಿಸಬೇಕು ಸೇರಿದಂತೆ ಒಟ್ಟು ೯ ಬೇಡಿಕೆಗಳ ಕುರಿತು ನಾಚಪ್ಪ ಹಕ್ಕೊತ್ತಾಯ ಮಂಡಿಸಿದರು.

ಪಾದಯಾತ್ರೆ ಮತ್ತು ಜಾಗೃತಿ ಸಭೆಯಲ್ಲಿ ಬೊಟ್ಟಂಗಡ ಗಿರೀಶ್, ಬೊಟ್ಟಂಗಡ ಸವಿತಾ ಗಿರೀಶ್, ಅಣ್ಣಳಮಡ ರೇಖಾ ಗಿರೀಶ್, ಕುಪ್ಪಣಮಡ ಬೇಬಿ ದೇವಯ್ಯ, ಬುಟ್ಟಿಯಂಡ ಸುನೀತ ಗಣಪತಿ, ನೆಲ್ಲಿರ ಮಧು, ನೆಲ್ಲಿರ ಮನು, ಅಣ್ಣಿರ ಪ್ರಸಾದ್, ಅಣ್ಣಿರ ಮುತ್ತಪ್ಪ, ಅಣ್ಣಿರ ಪೆಮ್ಮಯ್ಯ, ಅಣ್ಣಿರ ಪೊನ್ನಪ್ಪ, ಬಲ್ಯಮೀದೇರಿರ ಸಂಪತ್, ಅಣ್ಣಿರ ಕಾಶಿ, ಕುಪ್ಪುಡಿರ ಮುತ್ತಪ್ಪ, ಕಾಯಪಂಡ ಅಯ್ಯಪ್ಪ, ಕಾಯಪಂಡ ಪೆಮ್ಮಯ್ಯ, ಕಾಯಪಂಡ ಸುನಿಲ್, ಬಲ್ಯಮೀದೇರಿರ ಸುರೇಶ್, ಚಂಗನಮಾಡ ಮೊಣ್ಣಪ್ಪ, ಕಿಕನ್ಮಾಡ ಕಾರ್ಯಪ್ಪ, ಅಣ್ಣಳಮಡ ಗಿರೀಶ್, ಕಲ್ಕಂಡ ಪ್ರಕಾಶ್, ಮತ್ತಿತರರು ಪಾಲ್ಗೊಂಡಿದ್ದರು.