ಮಡಿಕೇರಿ, ಅ. ೧೧: ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌAಡ್ ಬಳಿಯಿರುವ ಶ್ರೀ ಕಾವೇರಿ ಭಕ್ತ ಮಂಡಳಿ ಇದರ ವತಿಯಿಂದ ೬೯ನೇ ವರ್ಷದ ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆ ತಾ. ೧೮ ರಂದು ನೆರವೇರಲಿದೆ.
ಅಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮದೊಂದಿಗೆ ಪ್ರಾರಂಭಗೊAಡು ಶ್ರೀ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ಜರುಗಲಿದೆ. ೧೨ ಗಂಟೆಗೆ ಅನ್ನದಾನದ ನಂತರ ಮಧ್ಯಾಹ್ನ ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆಯು ಮ್ಯಾನ್ಸ್ ಕಾಂಪೌAಡ್ ಬಳಿಯಿಂದ ಹೊರಟು ಜೂನಿಯರ್ ಕಾಲೇಜು ಮಾರ್ಗವಾಗಿ ಓಂಕಾರೇಶ್ವರ ದೇವಾಲಯ, ಜನರಲ್ ತಿಮ್ಮಯ್ಯ ವೃತ್ತ, ಶಾಂತಿನಿಕೇತನ, ಮರಳಿ ಜನರಲ್ ತಿಮ್ಮಯ್ಯ ವೃತ್ತ, ಗೌಳಿಬೀದಿ, ಕೊಹಿನೂರು ರಸ್ತೆ, ಎಸ್.ಬಿ.ಐ., ಪೇಟೆ ಶ್ರೀ ರಾಮ ಮಂದಿರ, ಚೌಕಿ, ಗಣಪತಿ ಬೀದಿ, ಬನ್ನಿ ಮಂಟಪ, ಮಹದೇವಪೇಟೆ, ಚೌಕಿ, ಸ್ಕಾ÷್ವಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಜೂನಿಯರ್ ಕಾಲೇಜು ಮಾರ್ಗವಾಗಿ ಮ್ಯಾನ್ಸ್ ಕಾಂಪೌAಡ್ ಬಳಿ ಸಂಪನ್ನಗೊಳ್ಳಲಿದೆ ಎಂದು ಶ್ರೀ ಕಾವೇರಿ ಭಕ್ತ ಮಂಡಳಿ ಇದರ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.