ಬಾಳೆಲೆ, ಅ. ೧೦: ಬಾಳೆಲೆ ಕಾಲೇಜು ಕ್ರೀಡಾಂಗಣದಲ್ಲಿ ಬಿರ್ಸಾಮುಂಡ ಸಮಿತಿ ವತಿಯಿಂದ ನಡೆದ ಹಗ್ಗಜಗ್ಗಾಟ ಮತ್ತು ತಟ್ಟೆಬಿಲ್ಲು ಸ್ಪರ್ದೆಗೆ ಇಂದು ಯರವ ಸಮುದಾಯದ ದೈವಾರಾಧಕ ಮುತ್ತ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮ ಬಿರ್ಸಾಮುಂಡ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ನರವೇರಿತು.
ಮುಖ್ಯ ಅತಿಥಿಗಳಾಗಿ ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಕ್ರಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಕೃಷ್ಣ ಗಣಪತಿ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚಕ್ಕೇರ ಅಯ್ಯಪ್ಪ, ನಿವ್ರತ್ತ ಯೋಧ ಕಾಳ, ಗಿರಿಜನ ಮುಖಂಡರುಗಳಾದ ಗಪ್ಪು, ಅಪ್ಪಾಜಿ, ತಟ್ಟಕೆರೆ ದಾಸಪ್ಪ, ಬಿರ್ಸಾಮುಂಡ ಸಮಿತಿಯ ಕಾರ್ಯದರ್ಶಿ ದಿನೇಶ್ ತಿತಿಮತಿ, ಸಂಚಾಲಕರಾದ ಮಾಚಿಮಾಡ ರವೀಂದ್ರ, ನಿರ್ದೇಶಕರಾದ ಮುರುಗೇಶ್, ಕಾಯರ ಕಿರಣ್ ಉಪಸ್ಥಿತರಿದ್ದರು.
ಬುಡಕಟ್ಟು ಸಾಮಾಜಿಕ ಹೋರಾಟಗಾರ ಗಪ್ಪು ಮಾತನಾಡಿ ಗಿರಿಜನ ಹಾಡಿಯ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಮುಖ್ಯವಾಹಿನಿಗೆ ಬರುವುದರೊಂದಿಗೆ ಕಾರಣಂತರಗಳಿAದ ಅರಿವಿಲ್ಲದೆ ಅಥವಾ ಅರಿವಿದ್ದೂ ಮತಾಂತರಗೊAಡವ ರನ್ನು ಮರಳಿ ಮಾತ್ರ ಧರ್ಮಕ್ಕೆ ಕರೆತಂದು ಬುಡಕಟ್ಟು ಜನರ ಶ್ರೀಮಂತ ಸಾಂಸ್ಕೃತಿಯನ್ನು ಉಳಿಸುವಂತೆ ಕರೆ ನೀಡಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬುಡಕಟ್ಟು ಮಹನೀಯರನ್ನು ಸನ್ಮಾನಿಸಲಾಯಿತು ಲೋಕೇಶ್ ನಾಟಿ ವೈದ್ಯರು, ಪಿ.ಸಿ.ಕಾಳ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆಗಾಗಿ, ಪಣಿಯ ರವರ ಮುತ್ತ ಮುತ್ತೂರು, ಸೋಮ, ಚಿಕ್ಕಣ್ಣ, ಸುಬ್ರಮಣಿ ದೈವಾರಾಧನೆ, ಪಿ.ಚಂದ ಸಮಾಜ ಸೇವೆ, ಬೆಂಡೆಕುತ್ತಿ ಮುತ್ತ ಕೃಷಿ ಮತ್ತು ತೋಟಗಾರಿಕೆ, ಗಪ್ಪು ಸಮಾಜಿಕ ಹೋರಾಟ ಗಾರ, ನೀಲಿ ನಾಟಿ ವೈದ್ಯರು, ಗೌರಮಣಿ ಕೊರೋನ ಸಂದರ್ಭದಲ್ಲಿನ ಸೇವೆಗಾಗಿ, ಸನ್ಮಾನಿಸಲಾಯಿತು.
ನಂತರ ನಡೆದ ಹಗ್ಗ ಜಗ್ಗಾಟ ಪುರುಷರ ಸ್ಪರ್ದೆಯಲ್ಲಿ ಲವೆಂತ್ ಮೈಲ್ ತಿತಿಮತಿ ಪ್ರಥಮ, ದ್ವಿತೀಯ ಕಾನೂರು ಬ್ರಹ್ಮಗಿರಿ ವಾರಿಯರ್ಸ್, ಮಹಿಳಾ ವಿಭಾಗದಲ್ಲಿ ಪ್ರಥಮ ಗೋಪಮ್ಮ ಫ್ರೆಂಡ್ಸ್ ತೋಮರ ಕೆದಮುಳ್ಳೂರು, ದ್ವಿತೀಯ ಲವೆಂತ್ ಮೈಲ್ ತಿತಿಮತಿ, ಮಹಿಳಾ ಮ್ಯುಸಿಕಲ್ ಚೇರ್ನಲ್ಲಿ ಪ್ರಥಮ ಸುಮಿತ್ರಾ, ದ್ವಿತೀಯ ಗೋಪಮ್ಮ, ತ್ರತೀಯ ಲಲಿತಾ ಸ್ಥಾನ ಪಡೆದುಕೊಂಡರು. ತಟ್ಟೆ ಬಿಲ್ಲು ಸ್ಪರ್ದೆ ಪ್ರದೇಶಕ್ಕೆ ಮಾತ್ರ ಏರ್ಪಾಡಿಸಿದ್ದು ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಸಂಭ್ರಮಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಕಾಶ್ ವಹಿಸಿದ್ದರು, ಗಿರಿಜನ ಮುಖಂಡರಾದ ಕುಡಿಯರ ಗೋಪಮ್ಮ ನಿಟ್ಟೂರು ಕಾಳ, ಗೌರಮಣೆ, ಚಕ್ಕೇರ ಮನು ಕಾವೇರಪ್ಪ, ಅಳಮೇಂಗಡ ಬೋಸ್ ಮಂದಣ್ಣ, ಕೊಟ್ಟಂಗಡ ಮಧು ಮಂಜುನಾಥ್ ಹಾಜರಿದ್ದರು.