ಮಡಿಕೇರಿ, ಅ. ೧೦ : ದೇಶದ ಸನಾತನ ಧರ್ಮ, ಸಂಸ್ಕೃತಿ, ದೇಶದ ಚರಿತ್ರೆ ಅರಿಯದ ಈಗಿನ ತರುಣ ಪೋಷಕರು ತಮ್ಮ ಮಕ್ಕಳನ್ನು ಬೇಕಾಬಿಟ್ಟಿ ಬೆಳೆಸುತ್ತಿರುವದರಿಂದ ನಮ್ಮ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ ಎಂದು ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಜಿ. ಅನಂತ ಶಯನ ಅಭಿಪ್ರಾಯಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಸಾಹಿತಿ ಗೌರಮ್ಮ ಮಾದಮ್ಮಯ್ಯ ಅವರು ಬರೆದಿರುವ ಸಂಪೂರ್ಣ ಮಹಾಭಾರತ ಪ್ರಶ್ನೋ ತ್ತರ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಂಸ್ಕೃತಿಯ ಹಿನ್ನೆಲೆ ತಿಳಿಯದೇ ಇದ್ದರೆ ಅನರ್ಥ ವಾಗುತ್ತದೆ. ಇದರಿಂದಾಗಿ ಹೊರದೇಶ ದವರು ಕೂಡ ನಮ್ಮ ದೇಶದ ಸಂಸ್ಕೃತಿ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುವಂತಾ ಗುತ್ತದೆ ಎಂದು ಹೇಳಿದರು. ಗೌರಮ್ಮ ಅವರು ಅಧ್ಯಾತ್ಮಿಕ ಹಾಗೂ ಚಿಂತನ ಶೀಲವಾದ ಪುಸ್ತಕಗಳನ್ನು ಬರೆದಿ ದ್ದಾರೆ. ಈ ಪುಸ್ತಕ ಮನೆ ಮನೆಗೆ ತಲಪುವಂತಾಗಬೇಕು, ಶಾಲೆಗಳಲ್ಲೂ ಮಕ್ಕಳು ಓದಲು ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ; ನಮ್ಮ ಸಂಸ್ಕೃತಿ, ಆಚಾರ, ವಿಚಾರ ನಶಿಸುತ್ತಿರುವದಕ್ಕೆ ಇಂದಿನ ಯುವ ಪೀಳಿಗೆ ಕಾರಣ. ಅಂತಹವರನ್ನು ಎಚ್ಚರ ಗೊಳಿಸಲು, ಹಿಂದಿನ ಪರಂಪರೆ, ಸಂಸ್ಕೃತಿ, ಪದ್ಧತಿ ವೈಭವ ಪಡೆಯಲು ಈ ಪುಸ್ತಕ ಕಾರಣವಾಗಲಿದೆ ಎಂದು ಹೇಳಿದರು. ಮಕ್ಕಳಿಗೆ ಸಂಸ್ಕೃತಿ, ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವದನ್ನು ಈ ಪುಸ್ತಕ ತಿಳಿಸು ತ್ತದೆ. ಇದರಲ್ಲಿನ ೧೨೦೦ ಪ್ರಶ್ನೆಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಇದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಮಕ್ಕಳಿಗೆ ಓದುವ ಮನೋಭಾವ ಬಂದಾಗ ಮಾತ್ರ ಪುಸ್ತಕಕ್ಕೆ ಬೆಲೆ ಸಿಗಲಿದೆ. ಇದರಲ್ಲಿ ತಂದೆ ತಾಯಿಯ ಜವಾಬ್ದಾರಿ ಬಹಳಷ್ಟಿದೆ. ಎಳವೆಯ ಲ್ಲಿಯೇ ಒಳ್ಳೆಯದನ್ನು ಹೇಳಿಕೊಟ್ಟರೆ ಬೆಳೆಯುತ್ತಾ ಉತ್ತಮ ಪ್ರಜೆಗಳಾಗು ತ್ತಾರೆ. ಭಾಷೆ ಬೆಳೆದರೆ ಮಾತ್ರ ಸಂಸ್ಕೃತಿ ಬೆಳೆಯುತ್ತದೆ ಎಂದು ಹೇಳಿದರು.

ಲೇಖಕಿ ಗೌರಮ್ಮ ಮಾದ ಮ್ಮಯ್ಯ ಮಾತನಾಡಿ; ಮಹಾಭಾರತ ವನ್ನು ಓದಿ ಈ ಪುಸ್ತಕ ಬರೆದಿದ್ದು, ಇದು ಜನಸಾಮಾನ್ಯರಿಗೆ ಅರ್ಥ ಮಾಡಿಕೊ ಳ್ಳುವ ಪುಸ್ತಕವಾಗಿದೆ. ಏನು ಮಾಡಬ ಹುದೆಂದು ರಾಮಾಯಣ ಹೇಳಿಕೊಟ್ಟರೆ ಏನು ಮಾಡಬಾರದೆಂದು ಮಹಾಭಾರತ ತಿಳಿಸುತ್ತದೆ. ಗೀತೆ, ಬೈಬಲ್, ಕುರ್‌ಆನ್ ಇವುಗಳ ಸಂದೇಶವೂ ಒಂದೇ ಆಗಿದ್ದು, ಹೇಗೆ ಬದುಕಬೇಕೆಂಬದನ್ನು ತೋರಿಸಿ ಕೊಡುತ್ತದೆ ಎಂದು ಹೇಳಿ ದರು. ಈ ಪುಸ್ತಕವನ್ನು ಎಲ್ಲಾ ಶಾಲೆಗ ಳಿಗೆ ಉಚಿತವಾಗಿ ನೀಡಲಿದ್ದು, ವಿದ್ಯಾರ್ಥಿ ಗಳಿಗೆ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾ ಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಇದ್ದರು. ಮಾದಮ್ಮಯ್ಯ ಸ್ವಾಗತಿಸಿದರೆ, ಕಸಾಪ ಜಿಲ್ಲಾ ಕೋಶಾಧಿಕಾರಿ ಎಸ್.ಎಸ್. ಸಂಪತ್‌ಕುಮಾರ್ ವಂದಿಸಿದರು.