ಮಡಿಕೇರಿ, ಅ. ೧೦: ಮಡಿಕೇರಿಯ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾ ಯಣ ಗುರುಗಳ ಜಯಂತ್ಯೋತ್ಸವ ಮಹಾಸಭೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಗರದ ಬಾಲಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಶಂಕರ ಪೂಜಾರಿ ಮಾತನಾಡಿ, ಬಹಳ ವರ್ಷಗಳ ಹಿಂದೆ ನಮ್ಮ ಸಮುದಾಯವು ಮೇಲ್ವರ್ಗದವರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಶಿಕ್ಷಣದ ಕೊರತೆಯಾಗಿತ್ತು. ಆದರೆ ಪ್ರಸಕ್ತ ದಿನಗಳಲ್ಲಿ ಬಾಂಧವರು ಸುಶಿಕ್ಷಿತರಾಗುತ್ತಿದ್ದಾರೆ ಎಂದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದ ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಪಿ. ರಮೇಶ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಸಂತರಾಗಿರಲಿಲ್ಲ. ಅವರು ಅಧ್ಯಾತ್ಮಿಕ, ಧಾರ್ಮಿಕ ಶಕ್ತಿಯಾಗಿದ್ದರು ಎಂದರು.
ಬಿಲ್ಲವ ಸಮಾಜದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿ ಸಂಘದ ಅಭಿವೃದ್ಧಿಗೆ ಸರ್ವರೂ ಕೈಜೋಡಿಸಿದಾಗ ಮಾತ್ರ ಪ್ರಗತಿ ಸಾಧ್ಯವೆಂದು ಅವರು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ಬಿ.ಎಸ್. ಲೀಲಾವತಿ ಮಾತನಾಡಿ, ಸಂಘದ ಏಳಿಗೆಗಾಗಿ ದುಡಿದವರನ್ನು ಸ್ಮರಿಸಿದರು.
ಸಂಘದ ಹಿರಿಯ ಸದಸ್ಯರಾದ ಬಿ.ಎ. ಎಲ್ಯಣ್ಣ ಪೂಜಾರಿ ಉಡೋತ್ಮೊಟ್ಟೆ ಮತ್ತು ವಾಸು ಪೂಜಾರಿ ಚೇರಂಬಾಣೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸ ಲಾಯಿತು.
ಈ ಕಾರ್ಯಕ್ರಮದಲ್ಲಿ ೧೦ನೇ ತರಗತಿಯಿಂದ ಉನ್ನತ ವ್ಯಾಸಂಗ ದವರೆಗಿನ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸ ಲಾಯಿತು. ಸುಮಾರು ೨೫ ವಿದ್ಯಾರ್ಥಿಗಳು ಪುರಸ್ಕಾರ ಪಡೆದು ಕೊಂಡರು. ಬಡ ವಿದ್ಯಾರ್ಥಿ ಗಳಿಗೂ ಆರ್ಥಿಕ ನೆರವನ್ನು ನೀಡಲಾಯಿತು.
ಕಾರ್ಯಕ್ರಮದ ನಿಮಿತ್ತ ಎಲ್.ಕೆ.ಜಿ.ಯಿಂದ ೪ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ೫ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಮತ್ತು ಮಹಿಳೆಯರಿಗೆ ಹೂವುದಾನಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೂ ಬಿ.ಎಸ್. ಲೀಲಾವತಿ ಯವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಮಂಜುಳಾ ಆನಂದ್ ಮತ್ತು ಜಯಶ್ರೀ ಪ್ರಾರ್ಥಿಸಿದರು. ಖಜಾಂಚಿ ಬಿ.ಕೆ. ಮಹೇಶ್ ವಂದಿಸಿದರು. ಬಿ.ಎಸ್. ಜಯಪ್ಪ ಕಡಗದಾಳು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಹಿರಿಯ ಸದಸ್ಯರುಗಳು ಮಾಜಿ ಅಧ್ಯಕ್ಷರುಗಳು, ಕಾರ್ಯದರ್ಶಿ ಬಿ.ಕೆ. ಮನೋಹರ ಮತ್ತಿತರರು ಇದ್ದರು.