ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚನೆ

ಬೆಂಗಳೂರು, ಅ. ೧೧: ತಮಿಳುನಾಡಿಗೆ ನೀರು ಹರಿಸದಿರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಮುಂದುವರೆದಿರುವAತೆಯೇ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೆ ಶಾಕ್ ನೀಡಿದೆ. ಮುಂದಿನ ೧೫ ದಿನಗಳ ಕಾಲ ಪ್ರತಿದಿನ ಮತ್ತೆ ತಮಿಳುನಾಡಿಗೆ ೩,೦೦೦ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ನವದೆಹಲಿಯಲ್ಲಿಂದು ನಡೆದ ಸಿಡಬ್ಲ್ಯೂಆರ್‌ಸಿಯ ೮೮ನೇ ಸಭೆಯಲ್ಲಿ ತಾ. ೧೬ ರಿಂದ ೩೧ ರವರೆಗೆ ಬಿಳಿಗುಂಡ್ಲುವಿನಿಲ್ಲಿ ನಿತ್ಯ ೩,೦೦೦ ಕ್ಯೂಸೆಕ್ಸ್ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು ನಿರ್ಧರಿಸಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ನೀರಿನ ಕೊರತೆಯಾಗಿದ್ದು, ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ವಾದಿಸಿದರು. ಅಕ್ಟೋಬರ್ ೧೦ ರವರೆಗೆ ನಾಲ್ಕು ಜಲಾಶಯಗಳಿಗೆ ಶೇ. ೫೦.೮೯೧ ರಷ್ಟು ಒಳಹರಿವಿನ ಕೊರತೆಯಾಗಿದ್ದು, ಅನಿಯಂತ್ರಿತ ನೀರಿನ ಹರಿವು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕ ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಆದರೆ, ಮುಂದಿನ ೧೫ ದಿನಗಳವರೆಗೆ ಕರ್ನಾಟಕ ೧೬,೦೦೦ ಕ್ಯೂಸೆಕ್ಸ್ (೨೦.೭೫ ಟಿಎಂಸಿ) ನೀರು ಬಿಡುಗಡೆ ಮಾಡಬೇಕೆಂದು ತಮಿಳುನಾಡು ವಾದಿಸಿತು. ಅಂತಿಮವಾಗಿ ಕರ್ನಾಟಕ ತನ್ನ ಜಲಾಶಯಗಳಿಂದ ಅಕ್ಟೋಬರ್ ೧೬ ರಿಂದ ೩೧ರವರೆಗೆ ಬಿಳಿಗುಂಡ್ಲುವಿನಲ್ಲಿ ೩,೦೦೦ ಕ್ಯೂಸೆಕ್ಸ್ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು ಸಿಡಬ್ಲ್ಯೂಆರ್‌ಸಿ ತೀರ್ಮಾನ ಮಾಡಿತು.

ಡಿ.ಕೆ. ಶಿವಕುಮಾರ್ ಕಾಲಿಗೆ ಬಿದ್ದ ಶಾಸಕ ಮುನಿರತ್ನ

ಬೆಂಗಳೂರು, ಅ. ೧೧: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಕ್ಷೇತ್ರದ ಕೆಲಸ ಮಾಡಲು ಬಹಳ ಕಷ್ಟವಾಗುತ್ತಿದೆ, ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ಕಡಿತ ಮಾಡಿ ಬೇರೆ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನ ಸೌಧ ಮುಂದೆ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತಿದ್ದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಂಬಳದ ಕರೆ ಪೂಜೆ ಕಾರ್ಯಕ್ರಮ ಬಳಿ ಬಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಾಲಿಗೆ ನಮಸ್ಕರಿಸಿ ಮನವಿ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಚುನಾವಣಾ ಫಲಿತಾಂಶ ಬಂದ ದಿನದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಬೆಂಬಲಿಗರಿAದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿದೆ. ಅನುದಾನ ಬೇರೆಡೆ ವರ್ಗಾವಣೆ ಮಾಡಿದರೂ ಒಂದೇ ಒಂದು ಮಾತು ಮಾತಾಡಿಲ್ಲ. ಎಲ್ಲಾ ಶಾಸಕರನ್ನು ನೋಡುವ ರೀತಿಯಲ್ಲೇ ನನ್ನನ್ನೂ ನೋಡಿ ಎಂದು ಮನವಿ ಮಾಡಿದರು.

ವಿದ್ಯುತ್ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ:ಬೊಮ್ಮಾಯಿ

ಚಿಕ್ಕಬಳ್ಳಾಪುರ, ಅ. ೧೧: ಸರ್ಕಾರ ರೈತರಿಗೆ ಏಳು ಗಂಟೆ ಥ್ರಿಫೆಸ್ ವಿದ್ಯುತ್ ನೀಡದಿದ್ದರೆ, ವಿದ್ಯುತ್ ಕಚೇರಿಗಳಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾಜಿ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ನಡೆದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರೆಂಟ್ ಕೊಡುವುದು ಸರ್ಕಾರದ ಕರ್ತವ್ಯ. ಅದು ಅವರದೇನು ಉಪಕಾರ ಅಲ್ಲ. ಈಗ ಇಂಧನ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಅಂತ ಅಧಿಕಾರಿಗಳನ್ನು ಕೇಳಿ ಹೇಳುತ್ತಾರೆ. ನಾನು ಅಧಿಕಾರದಲ್ಲಿದ್ದಾಗ ವಿದ್ಯುತ್ ಇಲಾಖೆಗೆ ಹತ್ತು ಸಾವಿರ ಕೊಟಿ ರೂಪಾಯಿ ನೀಡಿದ್ದೆ. ಪ್ರತಿದಿನ ಎರಡು ಗಂಟೆ ವಿದ್ಯುತ್ ನೀಡುತ್ತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಕಳೆದ ಮೂರು ತಿಂಗಳಲ್ಲಿ ಎರಡು ಪಟ್ಟು ವಿದ್ಯುತ್ ಶುಲ್ಕ ಹೆಚ್ಚಿಸಲಾಗಿದೆ. ಸರ್ಕಾರ ರೈತರಿಗೆ ನಿರಂತರವಾಗಿ ಏಳು ತಾಸು ಕರೆಂಟ್ ಕೊಡದಿದ್ದರೆ, ವಿದ್ಯುತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದರು.

ನಿಷೇಧಿತ ಪಿಎಫ್‌ಐ ಸಂಘಟನೆ ವಿರುದ್ಧ ೬ ರಾಜ್ಯಗಳಲ್ಲಿ ಎನ್‌ಐಎ ದಾಳಿ

ನವದೆಹಲಿ, ಅ. ೧೧: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ವಿರುದ್ಧ ರಾಷ್ಟಿçÃಯ ತನಿಖಾ ದಳ (ಎನ್‌ಐಎ) ದಾಳಿ ಮುಂದುವರೆದಿದ್ದು ಇಂದು ದೇಶದ ೬ ರಾಜ್ಯಗಳಲ್ಲಿ ಸಂಘಟನೆಗೆ ಸೇರಿದ ತಾಣಗಳ ಮೇಲೆ ದಾಳಿ ನಡೆಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಭೇಟಿ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲು ಪಿಎಫ್‌ಐ ಸಂಚು ರೂಪಿಸಿತ್ತು ಎಂದು ಆರೋಪಿಸಿ ಪಾಟ್ನಾದ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರಾಜಸ್ಥಾನದ ಟೋಂಕ್ ಜಿಲ್ಲೆ, ದೆಹಲಿ, ತಮಿಳುನಾಡಿನ ಮಧುರೈ ಸೇರಿದಂತೆ ಆರು ರಾಜ್ಯ ಗಳಲ್ಲಿನ ಪಿಎಫ್‌ಐ ಸಂಘಟನೆಗೆ ಸೇರಿದ ವ್ಯಕ್ತಿಗಳ ಮನೆ-ಕಟ್ಟಡಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ಮಹಾರಾಷ್ಟçದ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ಅಬ್ದುಲ್ ವಾಹಿದ್ ಶೇಖ್ ಅವರ ಮನೆಯಲ್ಲಿ ಎನ್‌ಐಎ ತಂಡ ಶೋಧ ನಡೆಸಿದೆ. ರಾಜಸ್ಥಾನದ ಟೋಂಕ್, ಕೋಟಾ ಮತ್ತು ಗಂಗಾಪುರ ಮತ್ತು ರಾಷ್ಟç ರಾಜಧಾನಿಯ ಹೌಜ್‌ಕಾಜಿ, ಬಲ್ಲಿಮಾರನ್‌ನಲ್ಲಿಯೂ ದಾಳಿ ನಡೆಸಲಾಯಿತು.

೬ ಅರಣ್ಯ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷö್ಮ ವಲಯ ಅಧಿಸೂಚನೆಗೆ ತಾತ್ವಿಕ ಸಮ್ಮತಿ

ಬೆಂಗಳೂರು, ಅ. ೧೧: ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ, ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿದಂತೆ ೬ ಅರಣ್ಯ ಪ್ರದೇಶಗಳಲ್ಲಿ ಪರಿಸರ ಸೂಕ್ಷö್ಮ ಪ್ರದೇಶ ಘೋಷಣೆ ಸಂಬAಧ ಸಂಪುಟಕ್ಕೆ ಶಿಫಾರಸು ಮಾಡುವ ಕುರಿತು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿಂದು ಉಪ ಸಮಿತಿ ಸಭೆ ತಾತ್ವಿಕ ಅನುಮೋದನೆ ನೀಡಿದೆ. ಭಾರತ ಸರ್ಕಾರ ೨೦೧೧ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಮತ್ತು ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಮಾರ್ಗಸೂಚಿಗಳನ್ವಯ ಈ ವಲಯದಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಚಟುವಟಿಕೆ ಮತ್ತು ನಿಷೇಧಿತ ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ ಮತ್ತು ಗೋದವರ್ಮನ್ ವಿರುದ್ಧ ಭಾರತ ಸರ್ಕಾರದ ರಿಟ್ ಅರ್ಜಿಗೆ ಸಂಬAಧಿಸಿದAತೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಅನುಸಾರ ಸಂರಕ್ಷಿತ ಪ್ರದೇಶಗಳಾದ ರಾಷ್ಟಿçÃಯ ಉದ್ಯಾನವನ ಮತ್ತು ವನ್ಯ ಜೀವಿ ಧಾಮಗಳ ಸುತ್ತಮುತ್ತ ಪರಿಸರ ಸೂಕ್ಷö್ಮ ಪ್ರದೇಶ ಎಂದು ಘೋಷಣೆ ಮಾಡುವುದು ಅಗತ್ಯವಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಸಭೆಯಲ್ಲಿ ಈ ಕೆಳಕಂಡ ೬ ಅರಣ್ಯಪ್ರದೇಶಗಳಲ್ಲಿ ಪರಿಸರ ಸೂಕ್ಷö್ಮ ಪ್ರದೇಶ ಘೋಷಣೆಯ ಸಂಬAಧ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬAಧ ಸಚಿವ ಸಂಪುಟದ ಸಭೆಗೆ ಸಲ್ಲಿಸಲು ತಾತ್ವಿಕ ಅನುಮೋದನೆ ನೀಡಲಾಯಿತು. ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ವಿಸ್ತೀರ್ಣ ೨೪೪.೧೫ ಚದರ ಕಿಲೋ ಮೀಟರ್ ಇದ್ದು, ಇದರಲ್ಲಿ ಒಟ್ಟು ೩೨೨.೬೯೫ ಚ.ಕಿ.ಮೀ. ಪರಿಸರ ಸೂಕ್ಷö್ಮ ಪ್ರದೇಶ (ಇ.ಎಸ್.ಝಡ್.) ಪ್ರಸ್ತಾಪಿಸಲಾಗಿದ್ದು, ಈ ಪೈಕಿ ೨೩.೮೦೪ ಚ.ಕಿ.ಮೀ. ಅರಣ್ಯ ಪ್ರದೇಶ ಮತ್ತು ೨೯೮.೮೯೦ ಚ.ಕಿ.ಮೀ. ಅರಣ್ಯೇತರ ಪ್ರದೇಶ ಸೇರಿದೆ. ಬುಕ್ಕಾಪಟ್ಟಣದಲ್ಲಿ ಚಿಂಕಾರ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ ೧೩೬.೧೧ ಚದರ ಕಿಲೋಮೀಟರ್ ಇದ್ದು, ಇದರ ಒಟ್ಟು ಪರಿಸರ ಸೂಕ್ಷö್ಮ ಪ್ರದೇಶ ೧೫೭.೦೮೬೨ ಚ.ಕಿ.ಮೀ. ಪ್ರಸ್ತಾಪಿಸಲಾಗಿದ್ದು, ಅರಣ್ಯ ಪ್ರದೇಶ ೧೮.೫೬೬೨ ಚ.ಕಿ.ಮೀ. ಆದರೆ, ಅರಣ್ಯೇತರ ಪ್ರದೇಶ ೧೩೮.೫೨ ಚ.ಕಿ.ಮೀ. ಎಂದು ತಿಳಿಸಲಾಯಿತು. ಕಾಮಸಂದ್ರ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ ೭೮.೬೨ ಚ.ಕಿ.ಮೀ. ಇದ್ದು, ಪರಿಸರ ಸೂಕ್ಷö್ಮ ಪ್ರದೇಶದ ವ್ಯಾಪ್ತಿ ೯೩.೨೭ ಚ.ಕಿ.ಮೀ. ಎಂದು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಅರಣ್ಯೇತರ ಇ.ಎಸ್.ಝಡ್. ವ್ಯಾಪ್ತಿ ೯೩.೨೭ ಆಗಿದೆ. ರಾಜೀವಗಾಂಧಿ ರಾಷ್ಟಿçÃಯ ಉದ್ಯಾನವನ (ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ)ದ ಒಟ್ಟು ವಿಸ್ತೀರ್ಣ ೬೪೩.೩೯ ಚ.ಕಿ.ಮೀ. ಆಗಿದ್ದು, ಇದರ ಪರಿಸರ ಸೂಕ್ಷö್ಮ ಪ್ರದೇಶ ೫೭೩.೯೭ ಪ್ರಸ್ತಾಪಿಸಲಾಗಿದ್ದು, ಇದರಲ್ಲಿ ೩೦೨.೩೬ ಅರಣ್ಯ ಮತ್ತು ೨೭೧.೬೧ ಅರಣ್ಯೇತರ ಪ್ರದೇಶವಿದೆ ಎಂದು ತಿಳಿಸಲಾಯಿತು. ಅದೇ ರೀತಿ ಅಣಶಿ ರಾಷ್ಟಿçÃಯ ಉದ್ಯಾನ ಮತ್ತು ದಾಂಡಿ ವನ್ಯಜೀವಿಧಾಮದಲ್ಲಿ ೬೬೯.೦೬ ಚ.ಕಿ.ಮೀ. ಪರಿಸರ ಸೂಕ್ಷö್ಮ ಪ್ರದೇಶ ಪ್ರಸ್ತಾಪಿಸಲಾಗಿದ್ದು, ೪೪೮.೮೧ ಚ.ಕಿ.ಮೀ ಅರಣ್ಯ ಮತ್ತು ೨೨೦.೨೫ ಅರಣ್ಯೇತರ ಪ್ರದೇಶವಾಗಿದೆ. ಕಾವೇರಿ ವಿಸ್ತರಿತ ವನ್ಯಜೀವಿ ಧಾಮದಲ್ಲಿ ೫೩.೩೯ ಚ.ಕಿ.ಮೀ. ಅರಣ್ಯ ವಿಸ್ತೀರ್ಣವಿದ್ದು, ಇದರಲ್ಲಿ ೧೪೫.೩೬೯ ಚ.ಕಿ.ಮೀ. ಪರಿಸರ ಸೂಕ್ಷö್ಮ ಪ್ರದೇಶ ಪ್ರಸ್ತಾಪಿಸಲಾಗಿದೆ. ಈ ಪೈಕಿ ೧೪೩.೬೬೩ ಅರಣ್ಯ ಮತ್ತು ೧.೭೦೬ ಚ.ಕಿ.ಮೀ. ಅರಣ್ಯೇತರ ಪ್ರದೇಶವಾಗಿದೆ ಎಂದು ತಿಳಿಸಲಾಯಿತು.