ಮಡಿಕೇರಿ, ಅ. ೯: ಹುಣಸೂರಿ ನಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಕೊಡಗು ಮೂಲದ ಯುವಕ ಸಾವನ್ನಪ್ಪಿ, ಜೊತೆಗಿದ್ದ ಐದು ಮಂದಿ ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ವೀರಾಜಪೇಟೆ ತಾಲೂಕಿನ ಕಡಂಗ ನಿವಾಸಿ ಕೋಲೆಯಂಡ ಗೌತಮ್ (೩೨) ಅಪಘಾತದಲ್ಲಿ ದುರ್ಮರಣಕ್ಕೀಡಾದ ಯುವಕ. ಗೌತಮ್‌ಗೆ ಇದೇ ತಾ.೨೨ರಂದು ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಗೆ ಸಂಬAಧಿಸಿ ದಂತೆ ಗೌತಮ್ ತನ್ನ ಕುಟುಂಬ ದೊಂದಿಗೆ ಮೈಸೂರಿನಲ್ಲಿ ಶಾಪಿಂಗ್ ಮುಗಿಸಿ ಹ್ಯೂಂಡಾಯಿ ಐ-೨೦ ಕಾರಿನಲ್ಲಿ ವಾಪಾಸಾಗುತ್ತಿದ್ದ ಸಂದರ್ಭ ಹುಣಸೂರು ಬಳಿ ಮೈಸೂರು ಕಡೆಗೆ ತೆರಳುತ್ತಿದ್ದ ಬೊಲೇರೊ ಪಿಕ್‌ಅಪ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಐ-೨೦ ಕಾರಿನ ಮುಂಬಾಗದಲ್ಲಿ ಕುಳಿತ್ತಿದ್ದ ಗೌತಮ್‌ಗೆ ತೀವ್ರ ಪೆಟ್ಟಾಗಿದ್ದು, ತುರ್ತು ಚಿಕಿತ್ಸೆಗೆ ಸ್ಥಳೀಯ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸ ಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

(ಮೊದಲ ಪುಟದಿಂದ) ಇನ್ನುಳಿದಂತೆ ಕಾರಿನಲ್ಲಿದ್ದ ತಾಯಿ ರಾಧ, ತಂಗಿ ಕುಶ್ಮೀತ, ಬಾವ ಪ್ರಸಾದ್, ಮಗು ಯೋಕ್ಷÀ (೫) ಮತ್ತು ಸೋದರ ಬಾವ ದಿಲನ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.