ಮಡಿಕೇರಿ ಅ. ೯: ಜನತೆಗೆ ಅತಿ ನಿಕಟವಾದ ಸೇವೆಯನ್ನು ಅಂಚೆ ಇಲಾಖೆ ನಿರ್ವಹಿಸುತ್ತಿದೆ ಎಂದು ‘ಶಕ್ತಿ’ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಮತ ವ್ಯಕ್ತಗೊಳಿಸಿದರು. ಅ. ೯ ರಂದು ೧೫೬ ರಾಷ್ಟçಗಳಲ್ಲಿ ಅಂಚೆ ದಿನವನ್ನು ಆಚರಿಸಲಾಗುತ್ತಿದೆ ಎಂದು ಕೊಡಗು ವಿಭಾಗ ಅಂಚೆ ಇಲಾಖೆಯ ಅಸಿಸ್ಟೆಂಟ್ ಸುಪರಿಂಟೆAಡೆAಟ್ ಆಫ್ ಪೋಸ್ಟ್÷್ಸ (ಎ.ಎಸ್.ಪಿ.ಒ) ಹೆಚ್. ಜೆ. ಸೋಮಯ್ಯ ತಿಳಿಸಿದರು. ಇಂದು ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಅಂಚೆ ದಿನ ಆಚರಣಾ ಕಾರ್ಯಕ್ರಮದಲ್ಲಿ ಇವರುಗಳು ಮಾತನಾಡುತ್ತಿದ್ದರು.
ಉದ್ಘಾಟನೆ ನೆರವೇರಿಸಿದ ಜಿ.ರಾಜೇಂದ್ರ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ “ಇಂದಿಗೂ ಅಂಚೆ ಅಣ್ಣ, ಇತ್ತೀಚೆಗಿನ ಬೆಳವಣಿಗೆಯಲ್ಲಿ ಅಂಚೆ ಅಕ್ಕ- ಇವರುಗಳ ಸೇವೆ ಜನಮನ್ನಣೆ ಪಡೆದಿದೆ. ಸ್ಪರ್ಧಾತ್ಮಕ ಯುಗದಲ್ಲಿ ಅಂಚೆ ಇಲಾಖೆ ಈಗಿನ ಕೆಲವು ವರ್ಷಗಳಲ್ಲಿ ಸುಧಾರಣೆಗೊಂಡು ಕಾರ್ಯ ನಿರ್ವಹಿಸುತ್ತಿದೆ. ತನ್ನ ಸಾಂಪ್ರದಾಯಿಕ ಅಸ್ತಿತ್ವದೊಂದಿಗೆ ಆಧುನೀಕೃತ ವ್ವವಸ್ಥೆಯತ್ತಲೂ ದಾಪುಗಾಲಿರಿಸಿದೆ. ಜನತೆ ಇಂದಿಗೂ ಅಂಚೆ ಇಲಾಖೆಯಲ್ಲಿ ಆರ್ಥಿಕ ವಹಿವಾಟು ನಡೆಸಲು ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಸಿಬ್ಬಂದಿ ವರ್ಗವೂ ಕೂಡ ಜನತೆಯೊಂದಿಗೆ ಕಲೆತು ನಿಸ್ವಾರ್ಥ ಸೇವೆ ಸಲ್ಲಿಸುತ್ತ್ತಿರುವುದೂ ಸ್ಮರಣೀಯ. ಅಂಚೆ ಇಲಾಖೆಯ ಕಾರ್ಡ್ಗಳ ಬಳಕೆ ಇಂದಿಗೂ ಅಧಿಕ ಜನಪ್ರಿಯತೆಯೊಂದಿಗೆ ಮುಂದುವರಿ ದಿದೆ. ಮುಂದೆಯೂ ತನ್ನ ಗ್ರಾಹಕ ರನ್ನು ಸೆಳೆಯುವತ್ತ ಗ್ರಾಹಕರನ್ನೇ ಕರೆದು ಸಂವಾದಗಳನ್ನು
(ಮೊದಲ ಪುಟದಿಂದ) ನಡೆಸುತ್ತಿದ್ದರೆ, ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮನದಟ್ಟು ಮಾಡಲು ಸಾಧ್ಯ ವಾಗುತ್ತದೆ” ಎಂದು ವಿಶ್ಲೇಷಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಹೆಚ್.ಜೆ. ಸೋಮಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತ “ ತಾ. ೧೦ ರಿಂದ ೧೩ ರವರೆಗೆ ರಾಷ್ಟಿçÃಯ ಅಂಚೆ ದಿನವನ್ನು ವಿವಿಧ ರೂಪದಲ್ಲಿ ಮಡಿಕೇರಿ ಯಲ್ಲಿಯೂ ಆಚರಿಸಲಾಗುತ್ತಿದೆ. ಅಂಚೆ ಸ್ಟಾö್ಯಂಪ್ಗಳ ಕುರಿತಾದ ಫಿಲೆಟೆಲಿಕ್ ದಿನ, ಮೈÃಲ್ ಮತ್ತು ಪಾರ್ಸೆಲ್ಗಳ, ಇನ್ಶುರೆನ್ಸ್ ಮತ್ತು ಪ್ರೀಮಿಯಂಗಳ, ೫ ಗ್ರಾಂಗಿAತ ಅಧಿಕವಿರುವ ವಸ್ತುಗಳನ್ನು ಪಾರ್ಸೆಲ್ ಎಂದು ಪರಿಗಣಿಸಿ ತುರ್ತು ರವಾನೆ ಮಾಡುವ ವಿಚಾರಗಳ ಬಗ್ಗೆ ಈ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ. ದೇಶದಲ್ಲಿ ೧,೫೯,೨೫೧ ಅಂಚೆ ಕಚೇರಿಗಳಿದ್ದು ರೈಲ್ವೇ ಇಲಾಖೆ ಬಳಿಕ ಅಂಚೆ ಇಲಾಖೆ ಬೃಹತ್ ಸಂಸ್ಥೆ ಯಾಗಿ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದೆ” ಎಂದು ಮಾಹಿತಿಯಿತ್ತರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬಿ.ಎಸ್.ಸುದÀರ್ಶನ್ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ೧೮೭೪ ರಲ್ಲಿ ಪ್ರಾರಂಭಗೊಡು ವಿಶ್ವ ಅಂಚೆ ದಿನವನ್ನು ಆಚರಿಸಿದ್ದು ಇದುವರೆಗೂ ಈ ಅಂಚೆ ದಿನ ಆಚರಿಸಲ್ಪಡುತ್ತ್ತಿದೆ ಎಂದು ಮಾಹಿತಿಯಿತ್ತರು.
ಸಭೆಯಲ್ಲಿ ಪ್ರಬಾರ ಪೋಸ್ಟ್ ಮಾಸ್ಟರ್ ಎ.ಎಂ. ನರಸಿಂಹ, ಮಡಿಕೇರಿ ಅಂಚೆ ಉಪ ವಿಭಾಗದ ಇನ್ಸ್ಪೆಕ್ಟರ್ ಆಫ್ ಪೋಸ್ಟ್÷್ಸ ಬಿ.ಡಿ. ಮಂಜುನಾಥ್, ಐಪಿಪಿ ಮೇನೇಜರ್ ಬಿಪಿನ್ ಉಪಸ್ಥಿತರಿದ್ದರು.
ಜಾಜಿ ಪ್ರ್ರಾರ್ಥನೆ, ಬಿ.ಎಂ. ಗೀತಾ ಸ್ವಾಗತ, ಸಿ.ಎಲ್. ಮಹೇಶ್ ವಂದ ನಾರ್ಪಣೆ, ಹೆಚ್. ಎಸ್. ಅನುಪಮ ಕಾರ್ಯಕ್ರಮ ನಿರೂಪಣೆ ನಡೆಸಿದರು.