ಸೋಮವಾರಪೇಟೆ, ಅ. ೯: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರ ಅಧ್ಯಕ್ಷತೆಯಲ್ಲಿ, ಸ್ಥಳೀಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸಭೆ ನಡೆಯಿತು.

ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಗುರಿಯನ್ನು ನಿಗದಿಪಡಿಸಿರುವ ಬಗ್ಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಚರ್ಚಿಸಿದರು.

ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಕೂಲಿಕಾರರು ಹಾಗೂ ಕೆಲಸವಿಲ್ಲದ ಕುಟುಂಬಗಳಿಗೆ ಬೇಡಿಕೆ ಆಧಾರಿತ ಕಾಮಗಾರಿ ಯಾಗಿದೆ. ಕಳೆದ ವರ್ಷದವರೆಗೆ ಎನ್.ಎಂ.ಎA.ಎಸ್. ಇಲ್ಲದೇ ಇದ್ದು ದರಿಂದ ಸಾಮಾನ್ಯವಾಗಿ ಮಾನವ ದಿನಗಳ ಸೃಜನೆಗೋಸ್ಕರವಾಗಿ ಕೆರೆಗಳ ಹೂಳು ತೆಗೆಯುವ ಕಾಮಗಾರಿಗಳು, ಮಣ್ಣು, ಚರಂಡಿ, ನಾಲೆಗಳ ಹಾಗೂ ತೋಡುಗಳ ಹೂಳು ತೆಗೆಯುವ ಕಾಮಗಾರಿ ಮುಕ್ತಾಯಗೊಂಡಿದೆ. ಮುಂದಿನ ಕಾಮಗಾರಿಗಳ ಬಗ್ಗೆ ಯೋಚಿಸಬೇಕಿದೆ ಎಂದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು ಅಭಿಪ್ರಾಯಿಸಿದರು.

ಕೊಡಗು ಜಿಲ್ಲೆಯು ಭೌಗೋಳಿ ಕವಾಗಿ ಚಿಕ್ಕದಾಗಿದ್ದು, ಬೆಟ್ಟ ಗುಡ್ಡ, ಪ್ರದೇಶಗಳಿಂದ ಆವೃತ್ತ ವಾಗಿರುವುದರಿಂದ ಅಂತರ್ಜಲ, ಜಲ ಸಂರಕ್ಷಣೆ ಕಾಮಗಾರಿಗಳು, ಹಸಿ ರೀಕರಣ ಕಾಮಗಾರಿಗಳು ಹಾಗೂ ಇತರೆ ಮಾನವ ದಿನಗಳ ಸೃಜನೆ ಆಗು ವಂತಹ ಕಾಮಗಾರಿಗಳು ಈ ಜಿಲ್ಲೆಯಲ್ಲಿ ಕಷ್ಟ ಸಾಧ್ಯವಾಗಿರುತ್ತದೆ ಎಂದರು.

ಆದರೂ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ರೈತಾಪಿ ವರ್ಗದವರಿಗೆ ಸಿಗುವ ಸೌಲಭ್ಯಗಳು ಹಾಗೂ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಂಡಿರುವ ಕಾಮಗಾರಿ ಗಳನ್ನು ಕೈಗೊಳ್ಳಲು ಪ್ರೇರೇಪಿಸ ಲಾಗುತ್ತಿದೆ. ಜಿಲ್ಲೆಯಲ್ಲಿ ೨೦೧೮-೧೯ ಮತ್ತು ೨೦೧೯-೨೦ ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ರಸ್ತೆ ಚರಂಡಿ ಮತ್ತು ತಡೆಗೋಡೆಯಂತಹ ಕಾಮಗಾರಿಗಳ ಅವಶ್ಯಕತೆ ಇರುತ್ತದೆ. ಆದರೆ, ಇದಕ್ಕೆ ಮಾತ್ರ ಶೇ. ೬೦:೪೦ ರ ಪ್ರಮಾಣ ದಾಟಬಾರದೆಂಬ ನಿಯಮ ಇರುವುದರಿಂದ ಹಾಗೂ ನಿಯಮ ಮೀರಿದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗುತ್ತಿರು ವುದರಿಂದ ಸಮಸ್ಯೆಯಾಗಿದೆ ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ ಹೇಳಿದರು.

ಈ ಯೋಜನೆಯಲ್ಲಿ ಹಲವು ಕಾನೂನು ಕಟ್ಟುಪಾಡುಗಳಿದ್ದು, ಅವುಗಳನ್ನೆಲ್ಲಾ ಪಾಲನೆ ಮಾಡಲು ಕೊಡಗು ಜಿಲ್ಲೆಯಲ್ಲಿ ಸಾಧ್ಯವಾಗುತ್ತಿಲ್ಲ. ತಾವುಗಳು ಯೋಜನೆಗಳನ್ನು ಕಾನೂನು ಬದ್ಧವಾಗಿ ನಡೆಸಲು ಆದೇಶಿಸುತ್ತಿದ್ದು, ಈ ಯೋಜನೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಕಾರಿ ಗಳನ್ನು ಕಾನೂನಿನಲ್ಲಿ ಸಿಲುಕಿಕೊಳ್ಳು ವಂತೆ ಮಾಡಲಾಗುತ್ತಿದೆ. ಹೀಗಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಇತರೆ ಇಲಾಖೆಗಳ ಜವಾಬ್ದಾರಿಗಳನ್ನು ಇತ್ತೀಚೆಗೆ ಅತೀ ಹೆಚ್ಚು ನೀಡುತ್ತಿದ್ದು, ಕೆಲವು ಪಂಚಾಯಿತಿಗಳಲ್ಲಿ ಪಿ.ಡಿ.ಓ. ಗಳು ಇಲ್ಲದೇ ಒಬ್ಬರಿಗೆ ಎರಡು ಪಂಚಾಯಿತಿಗಳ ಹೆಚ್ಚುವರಿ ಪ್ರಭಾರವನ್ನು ನೀಡುತ್ತಿರುವುದರಿಂದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾ ಗಿದೆ. ಪಂಚಾಯಿತಿಗಳಿಗೆ ಯಾವುದೇ ಕೆಲಸಗಳ ಅನುಭವ ಇಲ್ಲದೆ ಇರುವವರನ್ನು, ಬಡ್ತಿಯೊಂದಿಗೆ ಲೆಕ್ಕ ಸಹಾಯಕರು ಹಾಗೂ ಗ್ರೇಡ್-೨ ಕಾರ್ಯದರ್ಶಿಗಳನ್ನಾಗಿ ನೇಮಿ ಸುತ್ತಿರುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆ ಸಮಸ್ಯೆಗಳನ್ನು ಪರಿಹರಿಸಿ ಸುಗಮವಾಗಿ ಅಭಿವೃದ್ಧಿ ಕೆಲಸ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್, ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಸದಸ್ಯ ಪರಮೇಶ್ ಮತ್ತಿತರರು ಇದ್ದರು.