ವೀರಾಜಪೇಟೆ, ಅ. ೯: ಪೆಟ್ರೋಲ್ ಹಾಗೂ ಡಿಸೇಲ್ ವಾಹನಗಳು ಹೊರಸೂಸುವ ಹೊಗೆ ಪರಿಸರದ ಮೇಲೆ ಪರಿಣಾಮ ಬೀರುವುದರಿಂದ ವಿದ್ಯುತ್ಚಾಲಿತ ವಾಹನಗಳು ಪರಿಸರ ಸ್ನೇಹಿಯಾಗಿವೆ ಎಂದು ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ (ಫೆಡರೇಶನ್)ದ ಅಧ್ಯಕ್ಷ ವಾಟೇರಿರ ಬೋಪಣ್ಣ ಹೇಳಿದರು.
ಸಂಸ್ಥೆಯ ವತಿಯಿಂದ ಆರ್ಜಿ ಗ್ರಾಮದಲ್ಲಿ ನಿರ್ಮಾಣಗೊಂಡ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಘಟಕವನ್ನು ಲೋಕಾರ್ಪಣೆ ಮಾಡಿ ಈ ವಿದ್ಯುತ್ ಚಾರ್ಜಿಂಗ್ ಘಟಕವನ್ನು ಆಡಳಿತ ಮಂಡಳಿಯ ಸರ್ವ ಸದಸ್ಯರ ತೀರ್ಮಾನದಂತೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಬೆಂಗಳೂರಿನ ಬೋಲ್ಟ್ಅರ್ಥ್ ಸಂಸ್ಥೆಯು ಘಟಕವನ್ನು ಸ್ಥಾಪಿಸಿದ್ದು ಅಂದಾಜು ೧೩ ಲಕ್ಷ ವ್ಯಯವಾಗಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಚಾರ್ಜ್ ಮಾಡಲಾಗುವುದು.
ಸಂಸ್ಥೆಯಲ್ಲಿ ಅಂದಾಜು ೫೨೦೦ ಸದಸ್ಯರಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಆರ್ಜಿ ಶಾಖೆಯ ಬಳಿ ಇಂಡಿಯನ್ ಆಯಿಲ್ ಕಂಪನಿಯ ಪೆಟ್ರೋಲ್ಪಂಪ್ ಘಟಕವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭ ಉಪಾಧ್ಯಕ್ಷ ಟಿ.ಎಂ. ಕಾವೇರಪ್ಪ, ನಿರ್ದೇಶಕರುಗಳಾದ ಎಂ.ಕೆ ಭೀಮಯ್ಯ, ಕೆ.ಎಂ ಪೂವಯ್ಯ, ಕೆ.ಎ ಬಿದ್ದಪ್ಪ, ಎಸ್.ಕೆ ಮಂದಣ್ಣ, ಕೆ.ಕೆ ಮಂದಣ್ಣ, ಎಂ.ಕೆ ಕಾವೇರಪ್ಪ, ಎಂ.ಎA ಕುಟ್ಟಪ್ಪ, ಸಿ.ಈ ಗಿರೀಶ್ ಪೂಣಚ್ಚ, ಕೆ.ಆರ್ ವಿನೋದ್, ಕೆ.ಜಿ ಲತಾ, ವೀಣಾ ಮಹೇಶ್, ಹೆಚ್.ಬಿ ಮರಿಯಪ್ಪ, ಹೆಚ್.ಎಸ್ ಚೆನಿಯಾ, ವ್ಯವಸ್ಥಾಪಕ ಚಂದ್ರಕಾAತ್ ಉಪಸ್ಥಿತರಿದ್ದರು.