ನಾಪೋಕ್ಲು, ಅ. ೯: ಸಿಡಿಲು ಬಡಿದು ಮನೆಯ ವಿದ್ಯುತ್ ಮೀಟರ್ ಬೋರ್ಡು ವೈರ್ ಸುಟ್ಟು ಹೋಗಿ ಮನೆ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿಗೆ ಸಮೀ ಪದ ಅಜ್ಜಿಮುಟ್ಟ ಎಂಬಲ್ಲಿ ನಡೆದಿದೆ. ಭಾನುವಾರ ನಾಪೋಕ್ಲು ವ್ಯಾಪ್ತಿಯಲ್ಲಿ ಸಂಜೆ ಭಾರೀ ಗುಡುಗು ಸಹಿತ ಮಳೆಯಾಗಿದೆ. ಈ ಸಂದರ್ಭ ಅಜ್ಜಿಮುಟ್ಟ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಮನೆ ಸಮೀಪದ ಕರೆಂಟ್ ಕಂಬಕ್ಕೆ ಸಿಡಿಲು ಬಡಿದ ಕಾರಣ ಕಂಬ ಜಖಂಗೊAಡಿದ್ದು ಅವರ ಮನೆಗೆ ಅಳವಡಿಸಿದ್ದ ಮೀಟರ್ ಬೋರ್ಡ್ ವೈರ್ ಗಳು ಹಾಗೂ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಮನೆಯಲ್ಲಿದ್ದ ಶಿವಪ್ಪ ಅವರ ಪತ್ನಿ ಹಾಗೂ ಸೊಸೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸ್ವಲ್ಪಮಟ್ಟಿಗೆ ಕಿವಿಯ ಸಮಸ್ಯೆಯಾಗಿದೆ. ಸಿಡಿಲಿನ ರಭಸಕ್ಕೆ ಶಿವಪ್ಪನವರ ಮನೆ ಸಮೀಪದ ಅಂತೋನಿ ಎಂಬವರ ಮನೆಗೆ ಅಳವಡಿಸಿದ್ದ ಇನ್ವರ್ಟರ್ ಕೂಡ ಸುಟ್ಟು ಹೋಗಿದೆ. -ದುಗ್ಗಳ