ಸೋಮವಾರಪೇಟೆ, ಅ. ೯: ತಾಲೂಕು ಕಚೇರಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಧೂಳು ಹಿಡಿಯುತ್ತಿರುವ ಜಾಗದ ದುರಸ್ತಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ತಪ್ಪಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವುದಾಗಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷv ೆಯಲ್ಲಿ ನಡೆದ ದುರಸ್ತಿ ಕಡತಗಳ ವಿಲೇವಾರಿ ಹಾಗೂ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಭಾಗವಹಿಸಿ, ಕಂದಾಯ, ಸರ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಾಗದ ದುರಸ್ತಿಗಾಗಿ ಬಡ ರೈತರು ಕಳೆದ ಅನೇಕ ವರ್ಷಗಳಿಂದ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಚಾತಕಪಕ್ಷಿ ಯಂತೆ ಕಾಯುತ್ತಿದ್ದರೂ ಈವರೆಗೆ ದುರಸ್ತಿ ಭಾಗ್ಯ ಕಂಡಿಲ್ಲ. ತಾಲೂಕು ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬಗತಿ ತೋರು ತ್ತಿರುವುದರಿಂದ ಬಡವರು ಇಂದಿಗೂ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಸಭೆಯಲ್ಲಿದ್ದವರು ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು.

ತಾಕೇರಿ ಗ್ರಾಮದ ಒಂದೇ ಸರ್ವೆ ನಂಬರ್‌ನಲ್ಲಿ ಹತ್ತಾರು ದುರಸ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ರಿಯಲ್ ಎಸ್ಟೇಟ್ ಕುಳಗಳಿಗೆ ಸೇರಿದ ಕಡತ ಗಳು ಒಂದೇ ವಾರದಲ್ಲಿ ದುರಸ್ತಿ ಯಾಗಿವೆ. ಆದರೆ ಕಳೆದ ೬ ವರ್ಷಗಳ ಹಿಂದೆ ನೀಡಿರುವ ಬಡ ರೈತರ ಅರ್ಜಿಗಳು ಇಂದಿಗೂ ವಿಲೇವಾರಿ ಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉಪವಿಭಾಗಾಧಿಕಾರಿಗಳ ಕಚೇರಿಯತ್ತ ಬೆರಳು ತೋರಿಸುತ್ತಾರೆ. ಅಲ್ಲಿ ವಿಚಾರಿಸಿದರೆ ಮ್ಯಾಚಿಂಗ್ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಅದೇ ಸರ್ವೆ ನಂಬರ್‌ನಲ್ಲಿ ರಿಯಲ್ ಎಸ್ಟೇಟ್‌ನವರು, ಹಣವಂತರ ಕಡತಗಳು ವಿಲೇವಾರಿಯಾಗಿವೆ ಎಂದು ಬಗ್ಗನ ಅನಿಲ್, ಬಿ. ಬಿ. ಸತೀಶ್ ಸೇರಿದಂತೆ ಇತರರು ದೂರಿದರು.

ತಾಲೂಕು ಕಚೇರಿಯಲ್ಲಿ ಮಧ್ಯ ವರ್ತಿಗಳ ಹಾವಳಿ ಹೆಚ್ಚಾಗಿದೆ. ಇವರುಗಳ ಮೂಲಕ ಬರುವ ಕಡತ ಗಳು ತಕ್ಷಣ ವಿಲೇವಾರಿಯಾಗುತ್ತಿವೆ. ರೈತರು ನೇರವಾಗಿ ಬಂದು ಅರ್ಜಿ ನೀಡಿದರೆ ಇಲ್ಲಸಲ್ಲದ ಸಬೂಬು ಗಳನ್ನು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಈ ಹಿಂದೆಯೂ ಶಾಸಕರು ಎಚ್ಚರಿಕೆ ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ. ಕೇವಲ ಎಚ್ಚರಿಕೆ ನೀಡಿದರಷ್ಟೇ ಸಾಲದು; ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಬಿ.ಬಿ. ಸತೀಶ್ ಒತ್ತಾಯಿಸಿದರು. ದುರಸ್ತಿ ಕಡತಗಳ ವಿಲೇವಾರಿಗೆ ಬಹುತೇಕ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂತು.

ಸಾರ್ವಜನಿಕರ ದೂರುಗಳನ್ನು ಆಲಿಸಿದ ಶಾಸಕ ಮಂಥರ್‌ಗೌಡ ಅವರು, ಹಣ ಪಡೆದಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿ ದರೆ ಕಠಿಣ ಕ್ರಮ ಕೈಗೊಳ್ಳಲಾಗು ವುದು. ಕಳೆದ ೨೦ ವರ್ಷಗಳಿಂದಲೂ ಇದೇ ಸಮಸ್ಯೆಯಿದೆ. ಇದೀಗ ಶಾಸಕರು ಬದಲಾಗಿದ್ದಾರೆ. ಸರ್ಕಾರ ಬದಲಾಗಿದೆ. ಜನ ಸಾಮಾನ್ಯರಿಂದ ಹಣ ಕೇಳಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಅನೇಕ ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಡತಗಳ ಬಗ್ಗೆ ವಿವರ ನೀಡಬೇಕು. ಸಕಾರಣವಿಲ್ಲದೆ ಕಡತಗಳನ್ನು ಉಳಿಸಿಕೊಂಡಿರುವ ಕೇಸ್ ವರ್ಕರ್, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಚೇರಿ ಯಲ್ಲಿ ಬ್ರೋಕರ್‌ಗಳಿಗೆ ಅವಕಾಶ ನೀಡಿ ದರೆ ಸಹಿಸುವುದಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಯಾವುದೇ ಲಂಚವಿಲ್ಲದೆ ಮಾಡಿಕೊಡಬೇಕು. ಮುಂದೆ ಇಂತಹ ದೂರುಗಳು ಬಂದರೆ ಕ್ಷಮಿಸುವುದಿಲ್ಲ ಎಂದು ಮಂಥರ್‌ಗೌಡ ಖಡಕ್ ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಕಚೇರಿಯಿಂದ ಬರುವ ಕಡತಗಳನ್ನು ಉಳಿಸಿಕೊಂಡು ಕಾಲಹರಣ ಮಾಡಬಾರದು ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿ ದರು. ಸಭೆಯಲ್ಲಿ ಜಿಲ್ಲಾ ಉಪವಿಭಾ ಗಾಧಿಕಾರಿ ಯತೀಶ್ ಉಲ್ಲಾಳ್, ತಾಲೂಕು ತಹಶೀಲ್ದಾರ್ ಎನ್.ಎಸ್. ನರಗುಂದ್, ಸರ್ವೆ ಇಲಾಖಾಧಿಕಾ ರಿಗಳು, ಕಂದಾಯ ಇಲಾಖಾಧಿಕಾ ರಿಗಳು ಉಪಸ್ಥಿತರಿದ್ದರು.