ಮಡಿಕೇರಿ, ಅ. ೯: ೬೬/೧೧ಕೆವಿ ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧೨ ರಾಜಾಸೀಟು ಫೀಡರ್‌ನಲ್ಲಿ ದಸರಾ ಹಬ್ಬದ ಪ್ರಯುಕ್ತ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ತಾ. ೧೦ ರಂದು ಬೆಳಿಗ್ಗೆ ೧೦ರಿಂದ ಸಂಜೆ ೫.೩೦ ಗಂಟೆಯ ವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಮಂಗಳೂರು ರಸ್ತೆ, ರಾಜಸೀಟ್, ಇಂದಿರಾ ಗಾಂಧಿ, ರೇಸ್‌ಕೇರ್ಸ್ ರಸ್ತೆ, ಗಾಳಿಬೀಡು, ಡೈರಿ ಫಾರಂ, ಜ್ಯೋತಿನಗರ, ಹೊಸಬಡಾವಣೆ, ಮುಳಿಯ, ವಿದ್ಯಾನಗರ, ಎಫ್‌ಎಂಸಿ ಕಾಲೇಜು, ಐಟಿಐ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.