ಮಡಿಕೇರಿ, ಅ. ೯ : ಸಂವಿಧಾನದ ಆರ್ಟಿಕಲ್ ೨೪೪ ಖ/ತಿ ೬ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ೩ನೇ ಹಂತದ ಪಾದಯಾತ್ರೆಯ ಮುಂದುವರಿದ ಭಾಗವನ್ನು ದಕ್ಷಿಣ ಕೊಡಗಿನ ಕಿರ್ನಾಲ್‌ನಾಡ್ - ಗುಮ್ಮತ್ಮಾಡ್ ನಾಡ್ ಮಂದ್ (ಕರ‍್ಗೂರ್-ಬೆಸಗೂರ್) ಮತ್ತು ಪತ್ತ್ ಕಟ್‌ನಾಡ್ (ಬೆಕ್ಕೆಸೊಡ್ಲೂರ್-ಕಾನೂರ್) ಮಂದ್‌ನಲ್ಲಿ ನಡೆಸಿತು.

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆ ಆರಂಭಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ೯ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಕೊಡವರ ಸಾಂವಿಧಾನಿಕ ಭದ್ರತೆಗಾಗಿ ಹಕ್ಕೊತ್ತಾಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ಬೇಡಿಕೆ ಈಡೇರು ವವÀರೆಗೆ ಸಿಎನ್‌ಸಿ ಹೋರಾಟ ಮುಂದುವರೆಯಲಿದೆ ಎಂದರು.

ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷö್ಮ ಸಮಗ್ರ ಕುಲಶಾಸ್ತç ಅಧ್ಯಯನ, ಕೊಡವ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ "ಕಿರ್ಪಾನ್" ಗೆ ಸಮಾನವಾಗಿ ಸಂವಿಧಾನದ ೨೫ ಮತ್ತು ೨೬ನೇ ವಿಧಿಗಳಡಿಯಲ್ಲಿ ಕೊಡವರ "ಧಾರ್ಮಿಕ ಸಂಸ್ಕಾರ"ವೆAದು ರಕ್ಷಿಸುವುದು, ಮಾತೃ ಭಾಷೆ ಕೊಡವ ತಕ್ಕ್ ಅನ್ನು ೮ನೇ ಶೆಡ್ಯೂಲ್‌ಗೆ ಸೇರಿಸುವುದು ಸೇರಿದಂತೆ ೯ ಬೇಡಿಕೆಗಳ ಕುರಿತು ನಾಚಪ್ಪ ವಿವರಿಸಿದರು.

ಕೋಡೆಂಗಡ ಪವಿತ್ರಾ ಸುರೇಶ್, ಚೆಪುö್ಪಡಿರ ಪೊನ್ನಪ್ಪ, ಚೆಪುö್ಪಡಿರ ಮನೋಜ್, ಕೋಡೆಂಗಡ ವಿಠಲ್, ಚೆಪುö್ಪಡಿರ ಡಿಕ್ಕಿ, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಪರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಬೊಟ್ಟಂಗಡ ಜಪುö್ಪ, ಕಿರ್ನಾಳ್‌ನಾಡ್ ಶರಿನ್, ಕಿರಿಯಮಾಡ ಶಾನ್, ಕಿರಿಯಮಾಡ ಸಫನ್, ಕಾಕಮಾಡ ದೀಕ್ಷಿತ್, ಚಿರಿಯಪಂಡ ಲೋಹಿತ್, ಚೇಮಿರ ಮನು, ಗದÀಂಗಡ ಚಿಪ್ನು, ಚೆಪುö್ಪಡಿರ ತಿಲಕ್, ಚೆಪುö್ಪಡಿರ ದೇವಯ್ಯ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ತಾ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನ್ನಾಡ್ ಈ ನಾಲ್ಕು ನಾಡು ಮಂದ್‌ಗಳಲ್ಲಿ (ಬಾಡಗರಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲೂಕು) ಪಾದಯಾತ್ರೆ ನಡೆಯಲಿದೆ.