ಸೋಮವಾರಪೇಟೆ, ಅ. ೯: ಕಳೆದ ಕೆಲ ವರ್ಷ ಗಳಿಂದ ಕಿಬ್ಬೆಟ್ಟ ಗ್ರಾಮದಲ್ಲಿ ನೆಲೆಸಿದ್ದ ವ್ಯಕ್ತಿಯೋ ರ್ವರು ನಿನ್ನೆ ದಿನ ಕುಸಿದುಬಿದ್ದು ಮೃತಪಟ್ಟಿದ್ದು, ಇವರ ವಿಳಾಸ ಪತ್ತೆಗೆ ಸೋಮವಾರಪೇಟೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಕಿಬ್ಬೆಟ್ಟ ಗ್ರಾಮದ ರಮೇಶ್ ಹಾಗೂ ಆಶಾ ದಂಪತಿ ಸೋಮೇಶ್ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದು, ಇವರೊಂದಿಗೆ ಮಾಧವನ್ ಎಂಬವರೂ ನೆಲೆಸಿದ್ದರು. ನಿನ್ನೆ ದಿನ ಬೆಳಿಗ್ಗೆ ೬.೩೦ರ ಸುಮಾರಿಗೆ ಮಾಧವನ್ ಅವರು ಮನೆಯ ಹೊರಭಾಗಕ್ಕೆ ಬಂದ ಸಂದರ್ಭ ದಿಢೀರ್ ಕುಸಿದುಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಾಧವನ್ ಅವರ ವಿಳಾಸ ಹಾಗೂ ಸಂಬAಧಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸುಮಾರು ೩೫ ರಿಂದ ೪೦ ವರ್ಷ ಪ್ರಾಯದ ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ (ದೂ:೦೮೨೭೬-೨೮೨೦೪೦) ಮಾಹಿತಿ ನೀಡುವಂತೆ ಠಾಣಾಧಿಕಾರಿ ರಮೇಶ್ಕುಮಾರ್ ಮನವಿ ಮಾಡಿದ್ದಾರೆ.