ಸೋಮವಾರಪೇಟೆ, ಅ. ೯: ಒಕ್ಕ ಲಿಗ ಸಮುದಾಯದ ಯುವಕರು ಇನ್ನಷ್ಟು ಸಂಘಟಿತರಾಗಿ ಸಮುದಾ ಯವನ್ನು ಸಮಾಜದ ಮುಖ್ಯವಾಹಿ ನಿಗೆ ತರಬೇಕು. ಸಂಘಟನೆಯಲ್ಲಿ ಯುವ ಸಮುದಾಯ ಹೆಚ್ಚು ತೊಡ ಗಿಸಿಕೊಳ್ಳಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಕರೆ ನೀಡಿದರು.

ಪಟ್ಟಣದ ಒಕ್ಕಲಿಗರ ಸಮು ದಾಯ ಭವನದಲ್ಲಿ ನಡೆದ ಒಕ್ಕಲಿಗರ ಯುವ ವೇದಿಕೆಯ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಯುವ ಜನಾಂಗವು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಒಕ್ಕಲಿಗ ಜನಾಂಗದ ಬಡ ಹಿಂದುಳಿದವರ ಏಳಿಗೆಗೆ ಸಂಘಟನೆಯು ಶ್ರಮಿಸಬೇಕು. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆAದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಬಿ.ಸುರೇಶ್ ವಹಿಸಿ ಮಾತನಾಡಿ, ಯುವ ವೇದಿಕೆಯು ಯುವ ಜನಾಂಗದ ಸಂಘಟನೆ ಯೊಂದಿಗೆ ಒಕ್ಕಲಿಗ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ. ಕ್ರೀಡಾಕೂಟ ಗಳನ್ನು ಆಯೋಜಿಸುವ ಮೂಲಕ ಸಾಮರಸ್ಯ ವೃದ್ಧಿಗೆ ಕಾರ್ಯಪ್ರವೃತ್ತ ವಾಗಿದೆ. ವೇದಿಕೆಯ ವತಿಯಿಂದ ಸಹಕಾರ ಸಂಘ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾ. ಪಂ. ಉಪಾಧ್ಯಕ್ಷರಾಗಿ ಆಯ್ಕೆಯಾದ ನತೀಶ್ ಮಂದಣ್ಣ, ಐಗೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಕ್ಕೆ ಸದಸ್ಯರಾಗಿ ಆಯ್ಕೆಯಾದ ಕಿರಗಂದೂ ರಿನ ರೋಷನ್, ತಾಕೇರಿಯ ಕೀರ್ತಿ ಪೊನ್ನಪ್ಪ, ಸೋಮವಾರಪೇಟೆಯ ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಗುಂದದ ದಿವನ್ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂತಿ ಗ್ರಾಮದ ಲಕ್ಷಿö್ಮಕಾಂತ್ ಕೋಮಾರಪ್ಪ ಇವರು ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಿಕೆಯ ಗೌರವ ಅಧ್ಯಕ್ಷ ಬಿ.ಜೆ. ದೀಪಕ್, ಉಪಾಧ್ಯಕ್ಷ ಪೃಥ್ವಿ ಗೌಡಳ್ಳಿ, ಕಾರ್ಯದರ್ಶಿ ಯೋಗೇಂದ್ರ ಚೌಡ್ಲು, ಖಜಾಂಚಿ ಪ್ರೀತಮ್ ಹಾನಗಲ್, ಸಂಘಟನಾ ಕಾರ್ಯದರ್ಶಿ ಪ್ರಸಿ ಗೌಡಳ್ಳಿ, ಕೊಡಗು ಒಕ್ಕಲಿಗರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ದಿವಾಕರ್, ರಾಕೇಶ್, ಸುದೀಪ್, ದೇವರಾಜ್, ಗೌತಮ್, ಮೋಹಿತ್ ಸೇರಿದಂತೆ ನಿರ್ದೇ ಶಕರು, ಸದಸ್ಯರು ಇದ್ದರು.