ಕುಶಾಲನಗರ, ಅ. ೮: ಹಳೆ ವಿದ್ಯಾರ್ಥಿ ಸಂಘಗಳು ಕೇವಲ ನಾಮಕಾವಸ್ತೆಗೆ ಉಳಿಯದೆ ರಚ ನಾತ್ಮಕ ಕೆಲಸ ಕಾರ್ಯಗಳ ಮೂಲಕ ಭವಿಷ್ಯದ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ನೀಡುವಂತಾಗಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ಉಪ ಪ್ರಾಂಶುಪಾಲ ಪರಮೇಶ್ವರಪ್ಪ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇ ಜಿನ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಗಳ ಟ್ರಸ್ಟ್ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿರಿಯ ವಿದ್ಯಾರ್ಥಿಗಳು ಬದುಕಿನ ಏಳುಬೀಳು ಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವಂತಾಗಬೇಕು ಎಂದರು.
ಹಳೆ ವಿದ್ಯಾರ್ಥಿಗಳ ಟ್ರಸ್ಟ್ ಗೌರವ ಅಧ್ಯಕ್ಷ ವಿ.ಎಸ್. ಆನಂದ್ ಕುಮಾರ್ ಮಾತನಾಡಿ, ತಾವು ಕಲಿತ ಶಾಲೆಯ ಬಗ್ಗೆ ಮರೆಯದೆ ಶಾಲೆಯ ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಬೇಕು. ಕಲಿತ ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.
ಶಿಕ್ಷಕ ಉ ರಾ ನಾಗೇಶ್ ಮಾತ ನಾಡಿ, ಸಮಾಜಮುಖಿ ಕಾರ್ಯ ಗಳಲ್ಲಿ ವಿದ್ಯಾರ್ಥಿ ಸಂಘಗಳು ಕ್ರಿಯಾಶೀಲವಾಗಿ ತೊಡಗಿಕೊಳ್ಳು ವುದು ಕೂಡ ಶಿಕ್ಷಣ ಕಲಿಸಿದ ಸಂಸ್ಕಾ ರದ ಫಲವಾಗಿರುತ್ತದೆ ಎಂದರು. ಹಳೆಯ ವಿದ್ಯಾರ್ಥಿಗಳ ಉತ್ಸಾಹ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವAತಾಗಬೇಕು ಎಂದರು.
ಈ ಸಂಧರ್ಭ ಹಳೆ ವಿದ್ಯಾ ರ್ಥಿಗಳ ಟ್ರಸ್ಟ್ ಅಧ್ಯಕ್ಷ ಕೆ ಜೆ ಶಿವರಾಜ್, ಉಪಾಧ್ಯಕ್ಷೆ ದಿವ್ಯ, ಪ್ರಧಾನ ಕಾರ್ಯದರ್ಶಿ ಆದಂ ಎಸ್, ಕಾನೂನು ಸಲಹೆಗಾರರಾದ ಶರತ್ ಕುಮಾರ್, ಸಂಘಟನಾ ಕಾರ್ಯ ದರ್ಶಿ ರವಿ, ನಿರ್ದೇಶಕರಾದ ಹನೀಫ್, ಗಣೇಶ್, ರಿನೀತಾ, ಲಕ್ಷಿö್ಮ, ಮತ್ತಿತರರು ಇದ್ದರು.