ವೀರಾಜಪೇಟೆ, ಅ. ೮: ತಾಲೂಕು ಆಸ್ಪತ್ರೆಯ ಪ್ರಬಾರ ವೈದ್ಯಾಧಿಕಾರಿ ಯಾಗಿದ್ದ ಡಾ ಹೇಮಪ್ರಿಯಾ ಅವರಿಂದ ವೈದ್ಯಾಧಿಕಾರಿಯಾಗಿ ಡಾ. ವಿಶ್ವನಾಥ್ ಸಿಂಪಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಆಸ್ಪತ್ರೆ ಹಾಗೂ ರೋಗಿಗಳ ಘನತೆಗೆ ಚ್ಯುತಿ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭ ವಿಶ್ವನಾಥ್ ಅವರು ತಂದೆ ಪುಂಡಲೀಕಾ ಸಿಂಪಿ, ತಾಯಿ ಶಾರದ ಸಿಂಪಿ ಅವರ ಹೆಸರಿನಲ್ಲಿ ಆಸ್ಪತ್ರೆಯ ಅಭಿವೃದ್ಧಿಗೊಸ್ಕರ ಐವತ್ತು ಸಾವಿರ ರೂಪಾಯಿಗಳನ್ನು ಪ್ರತಿ ವರ್ಷ ದೇಣಿಗೆ ನೀಡುವುದಾಗಿ ಘೋಷಣೆ ತಾಯಿ ಶಾರದ ಸಿಂಪಿ ಅವರ ಹೆಸರಿನಲ್ಲಿ ಆಸ್ಪತ್ರೆಯ ಅಭಿವೃದ್ಧಿಗೊಸ್ಕರ ಐವತ್ತು ಸಾವಿರ ರೂಪಾಯಿಗಳನ್ನು ಪ್ರತಿ ವರ್ಷ ದೇಣಿಗೆ ನೀಡುವುದಾಗಿ ಘೋಷಣೆ ತಾಯಿ ಶಾರದ ಸಿಂಪಿ ಅವರ ಹೆಸರಿನಲ್ಲಿ ಆಸ್ಪತ್ರೆಯ ಅಭಿವೃದ್ಧಿಗೊಸ್ಕರ ಐವತ್ತು ಸಾವಿರ ರೂಪಾಯಿಗಳನ್ನು ಪ್ರತಿ ವರ್ಷ ದೇಣಿಗೆ ನೀಡುವುದಾಗಿ ಘೋಷಣೆ ವೈದ್ಯರಿಲ್ಲದೆ ರೋಗಿಗಳು ಪರದಾಡಬೇಕಾಗಿತ್ತು. ವೀರಾಜಪೇಟೆ ಆಸ್ಪತ್ರೆಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ತಮಗೆ ಎಷ್ಟೆ ಕಷ್ಟ ಆದರು ರೋಗಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ವೈದ್ಯರುಗಳನ್ನು ಉಳಿಸಿಕೊಳ್ಳ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.

ಈ ವಿಚಾರವನ್ನು ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತಂದು ವೈದ್ಯಾಧಿಕಾರಿಯ ಕೊರತೆಯನ್ನು ನೀಗಿಸಲಾಗಿದೆ. ಸಾರ್ವಜನಿಕರು ವೈದ್ಯರುಗಳ ಸೇವೆಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ರಕ್ಷಾಸಮಿತಿ ಸದಸ್ಯರುಗಳಾದ ಮಂಡೇಟಿರ ಅನಿಲ್, ಶೀಭಾ ಪೃಥ್ವಿನಾಥ್, ವಿ.ಆರ್. ಕಿಶೋರ್, ಶಬೀರ್, ಪುರಸಭೆ ಸದಸ್ಯರುಗಳಾದ ಸಿ.ಕೆ. ಪೃಥ್ವಿನಾಥ್, ಸುನೀತಾ ಜೂನಾ, ರಜನಿಕಾಂತ್, ಮಹಮದ್ ರಾಫಿ, ಜಲೀಲ್, ವೀರಾಜಪೇಟೆ ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಬರೀಶ್, ಮತ್ತಿತರರು ಉಪಸ್ಥಿತರಿದ್ದರು.