ಶನಿವಾರಸಂತೆ, ಅ. ೮: ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘ ಸ್ಥಾಪನೆಯಾಗಿ ೨೫ ವರ್ಷಗಳಾಗಿವೆ. ಹಲವಾರು ಸಾರ್ವಜನಿಕ ಕೆಲಸ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಲು ಪ್ರಯತ್ನ, ಆರೋಗ್ಯ ಶಿಬಿರ ಇತ್ಯಾದಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು ಕೋವಿಡ್ ಸಂದರ್ಭ ಸ್ಥಗಿತಗೊಂಡಿತ್ತು. ಇದೀಗ ಸಂಘಕ್ಕೆ ಪುನಶ್ಚೇತನ ನೀಡಿ, ನೂತನ ಸಮಿತಿ ರಚನೆ ಮಾಡಿದ್ದೇವೆ ಎಂದು ಕೊಡ್ಲಿಪೇಟೆಯ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಕೈಗಾರಿಕಾ ಸ್ಥಾನೀಯ ಸಂಸ್ಥೆಯ ಗೌರವಧ್ಯಕ್ಷ ಎಚ್.ಸಿ.ಯತೀಶ್ ಕುಮಾರ್ ಹೇಳಿದರು.

ನೂತನ ಸಂಘ ರಾಜಕೀಯ ರಹಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಪಟ್ಟಣದ ವರ್ತಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ನಿರ್ಧರಿಸಿದೆ. ಕೊಡ್ಲಿಪೇಟೆ-ಹಾಸನ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣವಾಗಿ ೧೦ ವರ್ಷಗಳಾದರೂ ೧ ಕಿ.ಮೀ. ರಸ್ತೆಗೆ ಉದ್ಘಾಟನೆಯ ಸೌಭಾಗ್ಯ ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಆಗುತ್ತಿಲ್ಲ. ರಾಷ್ಟಿçÃಯ ಹೆದ್ದಾರಿಯಾದರೆ ಪುರಾತನ ಮನೆಗಳಿಗೆ ಇ-ಸ್ವತ್ತು ಅಗತ್ಯವಾಗಿ ಕೊಡಿಸಬೇಕು. ಸಣ್ಣ ವ್ಯಾಪಾರಸ್ಥರೆ ಅಧಿಕ ಸಂಖ್ಯೆಯಲ್ಲಿದ್ದು ಸಾಲ-ಸೌಲಭ್ಯ ದೊರೆಯುತ್ತಿಲ್ಲ.ಬಸ್ ನಿಲ್ದಾಣವಿಲ್ಲ. ವಾಹನ ನಿಲುಗಡೆ ವ್ಯವಸ್ಥೆಯಾಗಲೀ ಏಕಮುಖ ಸಂಚಾರವಾಗಲಿ ಇಲ್ಲವೇ ಇಲ್ಲ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸಂಘ ಕೊಡ್ಲಿಪೇಟೆ ವಿದ್ಯಾಸಂಸ್ಥೆಗೆ ರೂ. ೩ ಲಕ್ಷ ಕೊಡುಗೆ ನೀಡಿದೆ. ಮುಂದಿನ ನವೆಂಬರ್ ೮ ರಂದು ವಾರ್ಷಿಕ ಮಹಾಸಭೆ ನಡೆಯಲಿದ್ದು ವರ್ತಕರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.

ಗೌರವಧ್ಯಕ್ಷ ಹೆಚ್.ಸಿ. ಯತೀಶ್ ಕುಮಾರ್, ಅಧ್ಯಕ್ಷ ಬಿ.ಕೆ. ಯತೀಶ್, ಉಪಾಧ್ಯಕ್ಷರಾದ ಕೆ.ಬಿ. ಸುಬ್ರಮಣ್ಯಾಚಾರ್ ಹಾಗೂ ಹೆಚ್.ಜೆ. ಪ್ರವೀಣ್ ಇದ್ದರು.

ನೂತನ ಸಮಿತಿಗೆ ಆಯ್ಕೆ: ಅಧ್ಯಕ್ಷ ಬಿ.ಕೆ. ಯತೀಶ್, ಗೌರವಧ್ಯಕ್ಷ ಹೆಚ್.ಸಿ. ಯತೀಶ್, ಉಪಾಧ್ಯಕ್ಷರಾಗಿ ಕೆ.ಬಿ. ಸುಬ್ರಮಣ್ಯಾಚಾರ್, ಹೆಚ್.ಜೆ. ಪ್ರವೀಣ್, ಡಿ.ವಿ. ದಿನೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ದಿವಾಕರ್, ಸಹಕಾರ್ಯದರ್ಶಿ ಕೆ.ಎಂ. ವಹಾಬ್, ಜಿಲ್ಲಾ ನಿರ್ದೇಶಕ ಜಿ.ಆರ್. ಸುಬ್ರಮಣ್ಯ, ನಿರ್ದೇಶಕರಾಗಿ ಹೆಚ್.ಎಂ. ರಾಜಶೇಖರ್, ಮಂಗಲ್ ಜಿ. ಹಾಗೂ ಅಶೋಕ್ ಆಯ್ಕೆಯಾಗಿದ್ದಾರೆ.