ಕಣಿವೆ, ಅ. ೮: ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಾಷ್ಟಿçÃಯ ಹೆದ್ದಾರಿ ಹಾಗೂ ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರ ಜೀವಕ್ಕೆ ಸಂಚಕಾರ ತರುವಂತಹ ಹಾಗೂ ವಾಹನಗಳ ದುರಸ್ತಿಗೆ ಕಾರಣವಾಗುತ್ತಿರುವ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದರೂ ಕೂಡ ಸಂಬAಧಪಟ್ಟವರು ಇತ್ತ ಗಮನಿಸದೇ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕುಶಾಲನಗರದ ರಾಷ್ಟಿçÃಯ ಹೆದ್ದಾರಿಯ ಗಂಧದ ಕೋಟೆ ಬಳಿ ಅರ್ಧ ಅಡಿಗಳಿಗೂ ಆಳದ ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಅಷ್ಟೇ ಅಲ್ಲ ದ್ವಿಚಕ್ರ ಸವಾರರಿಗೆ ಈ ಗುಂಡಿಗಳು ಮರಣ ಗುಂಡಿಗಳಾಗಿ ಮಾರ್ಪಟ್ಟಿವೆ. ರಾಷ್ಟಿçÃಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ಅಪರಿಚಿತ ಅನೇಕ ಸವಾರರು ಇಲ್ಲಿನ ಗುಂಡಿಗಳ ಒಳಗೆ ವಾಹನಗಳನ್ನು ದಾಟಿಸುವ ಭರದಲ್ಲಿ ಆಯತಪ್ಪಿ ಅವಘಡಗಳಿಗೆ ತುತ್ತಾಗುತ್ತಿದ್ದಾರೆ.
ಹಾಗೆಯೇ ಇದೇ ಹೆದ್ದಾರಿಯ ತಾವರೆಕೆರೆ ಬಳಿಯ ರಸ್ತೆಯ ಅಂಚಿನಲ್ಲಿ ಪ್ರಪಾತದ ಮಾದರಿಯಲ್ಲಿ ಐದಾರು ಮೀಟರ್ಗಳ ದೂರ ರಸ್ತೆ ಅಪಾಯವನ್ನು ಆಹ್ವಾನಿಸಿದಂತಿದೆ.
ಎದುರು ಬರುವ ವಾಹನಗಳಿಗೆ ದಾರಿ ಬಿಡಲು ಹೋಗುವ ಸವಾರರು ಇಲ್ಲಿ ಅವಘಡಗಳಿಗೆ ತುತ್ತಾಗುವಂತಾಗಿದೆ. ಇನ್ನು ರಾಜ್ಯ ಹೆದ್ದಾರಿಯ ಕೂಡಿಗೆ ರಸ್ತೆಯ ಕೂಡ್ಲೂರು ಮಾವಿನ ತೋಟದ ಬಳಿ ಕಾವೇರಿ ನದಿಯ ಏತ ನೀರಾವರಿ ಕಾಲುವೆ ಹಾಯ್ದು ಹೋದ ಮಾರ್ಗದಲ್ಲಿ ಬಹಳಷ್ಟು ಗುಂಡಿಗಳು ಉಂಟಾಗಿದ್ದು ವಾಹನಗಳ ಅವಘಡ ಹೆಚ್ಚಾಗಿದೆ. ಅನೇಕ ದ್ವಿಚಕ್ರ ವಾಹನಗಳ ಸವಾರರು ಇಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ರಾತ್ರಿ ವೇಳೆ ಸಾಗುವ ವಾಹನಗಳು ಇಲ್ಲಿನ ಗುಂಡಿಗಳನ್ನು ಕಂಡು ಹಾಕುವ ಅಚಾನಕ್ ಬ್ರೇಕಿನ ಶಬ್ಧಕ್ಕೆ ರಸ್ತೆಯಂಚಿನ ವಾಸಿಗಳು ನೆಮ್ಮದಿಯಲ್ಲಿ ನಿದ್ರಿಸಲಾಗದ ದುಸ್ಥಿತಿ ಉಂಟಾಗಿದೆ ಎಂದು ಇಲ್ಲಿನ ನಿವಾಸಿ ರಾಜೀವ್, ರಾಧಾಕೃಷ್ಣ, ಶಿಕ್ಷಕಿ ಭಾರತಿ, ಸುಮ, ನಾಗರಾಜು ಮೊದಲಾದವರು ಶಕ್ತಿ ಯೊಂದಿಗೆ ದೂರಿಕೊಂಡಿದ್ದಾರೆ.
ಕೂಡಲೇ ರಾಜ್ಯ ಹಾಗೂ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.