ಹಾಸನ, ಅ. ೮: ಇಲ್ಲಿನ ಬಸ್ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಾರಕಾಸ್ತç ತೋರಿಸಿ ಬೆದರಿಸಿದ ದುಷ್ಕರ್ಮಿಯೊಬ್ಬ ಮೊಬೈಲ್ ಹಾಗೂ ಹಣ ದರೋಡೆ ಮಾಡಿರುವ ಘಟನೆ ವರದಿ ಆಗಿದೆ.
ಮಡಿಕೇರಿ ಮೂಲದ ಮಹದೇವ(೫೪) ಎಂಬವರು ದರೋಡೆಗೆ ಒಳಗಾಗಿರುವ ವ್ಯಕ್ತಿ.
ಮಡಿಕೇರಿಯಿಂದ ಹಾಸನದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದಾಗ ಶನಿವಾರ ರಾತ್ರಿ ಸುಮಾರು ೧೨ ಘಂಟೆಗೆ ಈ ಘಟನೆ ನಡೆದಿದೆ. ಹಾಸನದ ಬಸ್ ನಿಲ್ದಾಣದಲ್ಲಿ ಇಳಿದು ಕೆ.ಆರ್. ಪುರದಲ್ಲಿರುವ ಮಗಳ ಮನೆಗೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಹಿಂಬಾಲಿಸಿಕೊAಡು ಬಂದಿದ್ದಾನೆ. ರೈಲ್ವೇ ಗೇಟ್ ಸಮೀಪ ಬಂದಾಗ ಆತ ಚಾಕು ತೋರಿಸಿ ಮೊಬೈಲ್ ಹಾಗೂ ಕೈಯಲ್ಲಿದ್ದ ಸಾವಿರ ರೂಪಾಯಿ ಕಿತ್ತುಕೊಂಡಿದ್ದಾನೆ. ಅಷ್ಟರಲ್ಲಿ ಮಹದೇವ ಕೂಗಿಕೊಂಡಿದ್ದಾರೆ. ಸ್ಥಳೀಯರೊಬ್ಬರು ನೆರವಿಗೆ ಬರುವಷ್ಟರಲ್ಲಿಯೇ ಆರೋಪಿ ಓಡಿ ಪರಾರಿ ಆಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾಸನ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. -ಕೋವರ್ಕೊಲ್ಲಿ ಇಂದ್ರೇಶ್