ಕೂಡಿಗೆ, ಅ. ೮: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಬಾರಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಅರೆ ಮಲೆನಾಡು ಪ್ರದೇಶವಾದ ಕುಶಾಲನಗರ ತಾಲೂಕಿನ ೬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೮ ಉಪ ಗ್ರಾಮಗಳಲ್ಲಿ ಮಳೆ ಆಶ್ರಯದಲ್ಲಿ ಬೆಳೆಯುವ ಮೆಕ್ಕೆಜೋಳದ ಬೆಳೆಯು ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಜೋಳ ಬೆಳೆಯು ಹಿಂದಿನ ಸಾಲಿನಂತೆ ಸಮರ್ಪಕವಾದ ಬೆಳೆಯು ಬಾರದೆ ಮೆಕ್ಕೆಜೋಳದ ತೇನೆಯಲ್ಲಿ ಕಾಳು ಕಟ್ಟುವಿಕೆಯು ಇಲ್ಲದೆ ಬೆಳೆಯು ಕುಂಠಿತಗೊAಡಿದೆ. ಇದರ ಜೊತೆಯಲ್ಲಿ ಕಳೆದ ಸಾಲಿಗಿಂತ ಈ ಬಾರಿ ಬೆಲೆಯಲ್ಲಿ ಬಾರಿ ಕುಸಿತ ಕಂಡುಬರುತ್ತಿದೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಸಿದ್ದಲಿಂಗಪುರ, ಅಳುವಾರ, ತೊರೆನೂರು, ಹೆಬ್ಬಾಲೆ, ಶಿರಂಗಾಲ ಸೀಗೆಹೊಸೂರು, ಮಲ್ಲೇನಹಳ್ಳಿ, ಚಿಕ್ಕತ್ತೂರು ಗ್ರಾಮಗಳು ಸೇರಿದಂತೆ ಅನೇಕ ಉಪ ಗ್ರಾಮಗಳಲ್ಲಿ ವರ್ಷಂಪ್ರತಿಯAತೆ ಈ ಸಾಲಿನ ಜೂನ್ ತಿಂಗಳಲ್ಲಿ ಬಿದ್ದ ಮಳೆಗೆ ಭೂಮಿಯನ್ನು ಸಿದ್ದತೆ ಮಾಡಿ ಮೆಕ್ಕೆಜೋಳದ ಬೇಸಾಯವನ್ನು ಮಾಡಲಾಗಿತ್ತು, ಅದರೆ ಕಳೆದ ಮೂರು ತಿಂಗಳುಗಳಿAದ ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಬೆಳೆಯ ಬೆಳವಣಿಗೆಗೆ ಸರಿಯಾದ ಹದ ಇಲ್ಲದೆ ಜೋಳದ ಕಾಳುಗಳನ್ನು ಕಟ್ಟಿರುವುದಿಲ್ಲ. ಇದರಿಂದಾಗಿ ಮೆಕ್ಕೆಜೋಳದ ಬೆಳೆಯು ಈ ವ್ಯಾಪ್ತಿಯಲ್ಲಿ ಕಳೆದ ಸಾಲಿಗಿಂತ ಶೇಕಡಾ ೫೦ ರಷ್ಟು ಕಡಿಮೆಯಾಗಿದೆ.
ಬೆಲೆಯಲ್ಲಿಯೂ ಕಡಿಮೆ..
ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಿರುವ ಪ್ರದೇಶದಲ್ಲಿ ಈಗಾಗಲೇ ಮೆಕ್ಕೆಜೋಳದ ಬೆಳೆಯು ಕಟಾವಿಗೆ ಬಂದಿದ್ದು , ಅನೇಕ ರೈತರು ಜೋಳ ಬೆಳೆಯನ್ನು ಕಟಾವು ಮಾಡಲು ಸಿದ್ದರಾಗಿರುತ್ತಾರೆ, ಆದರೆ ಕಳೆದ ಸಾಲಿಗಿಂತ ಬೆಲೆಯೂ ಬಾರಿ ಕಡಿಮೆಯಾಗಿದೆ.
ಕಳೆದ ಸಾಲಿನಲ್ಲಿ ಮೆಕ್ಕೆಜೋಳದ ಬೆಲೆಯು ಒಂದು ಕ್ವಿಂಟಾಲ್ಗೆ ೨,೫೦೦ ರೂ. ಗಳಿತ್ತು, ಅಂದರೆ ಈ ಸಾಲಿನಲ್ಲಿ ಕೇವಲ ೨೦೦೦ ರೂಗಳಷ್ಟು ಇದೆ .ಇದರಿಂದಾಗಿ ಮಳೆಯ ಹಿನ್ನಡೆಯಲ್ಲಿ ಬೆಳೆಯು ಕಡಿಮೆ. ಇದರ ಜೊತೆಗೆ ಬೆಲೆಯು ಕಡಿಮೆಯಾಗಿದೆ.
ಸರಕಾರ ಇತರೆ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿರುವಂತೆ ಮೆಕ್ಕೆಜೋಳದ ಬೆಳೆಗೂ ಬೆಂಬಲ ಬೆಲೆಯನ್ನು ನೀಡುವಂತೆ ಈ ಭಾಗದ ರೈತರ ಆಗ್ರಹವಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ