ಸೋಮವಾರಪೇಟೆ, ಅ. ೮: ಇಲ್ಲಿನ ಮಾನವ ಬಂಧುತ್ವ ವೇದಿಕೆ ಯಿಂದ ಜಿಲ್ಲಾ ಸಂಚಾಲಕರಾದ ಡಾ. ಸತೀಶ್ ಅಧ್ಯಕ್ಷತೆಯಲ್ಲಿ, ಸ್ಥಳೀಯ ನಿರೀಕ್ಷಣಾ ಮಂದಿರದಲ್ಲಿ ದಲಿತ ಸಂಘಟನೆಗಳ ಮುಖಂಡರನ್ನು ಒಳ ಗೊಂಡAತೆ ವಿಶೇಷ ಸಭೆ ನೆಡೆಯಿತು.
ದಲಿತಪರ ವಿವಿಧ ಸಂಘಟನೆ ಮುಖಂಡರು ಸೇರಿ ಮಾನವ ಬಂಧುತ್ವ ವೇದಿಕೆಯ ಮೂಲ ತತ್ವದ ಬಗ್ಗೆ ಚರ್ಚೆ-ಸಮಾಲೋಚನೆ ನಡೆಸಿದರು. ಮಾನವ ಬಂಧುತ್ವ ವೇದಿಕೆಯು ಎಲ್ಲಾ ಸಮುದಾಯ, ಸಮಾಜದ ಕಟ್ಟ ಕಡೆಯ ವ್ಯಕ್ತಿ ಮೂಢನಂಬಿಕೆಯಿAದ ಹೊರಬರಲು ಜಾಗೃತಿ ಮೂಡಿಸುವ ವೇದಿಕೆ. ಇದು ಯಾವುದೇ ಧರ್ಮ, ಜಾತಿಯ ಬಗ್ಗೆ ದೂಷಿಸುವ ಅಥವಾ ಧರ್ಮ, ಜಾತಿಗಳ ಮೇಲೆ ಪರಿಣಾಮ ಬೀರುವ ವೇದಿಕೆಯಲ್ಲ. ಉತ್ತಮ ಸಮಾಜ ನಿರ್ಮಾಣ ಮಾಡಲು ವೇದಿಕೆಯ ಮೂಲಕ ಬುನಾದಿ ಹಾಕಲಾಗಿದೆ. ಯುವಕರು ಬಂಧುತ್ವ ಹಾದಿ ತುಳಿದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ತೋಳೂರು ಶೆಟ್ಟಳ್ಳಿ ಗ್ರಾಮದ ಸುರೇಶ್ ಮಾತನಾಡಿ, ಹಲವಾರು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಚಾಲನೆಯಲಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈಗಿನ ಕಾಲಮಾನದಲ್ಲಿ ಎಲ್ಲಾ ಸಮುದಾಯದ ಯುವಕರು ರಾಜಕೀಯಕ್ಕೆ ಪ್ರೇರೇಪಿತರಾಗಿ, ಧರ್ಮ ಧರ್ಮಗಳ ನಡುವೆ ತಿಕ್ಕಾಟ ತರುವ ಸಂಘಟನೆಗಳಿಗೆ ಸೇರಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸುರೇಶ್ ಮಾತನಾಡಿ, ಹಲವಾರು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಚಾಲನೆಯಲಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈಗಿನ ಕಾಲಮಾನದಲ್ಲಿ ಎಲ್ಲಾ ಸಮುದಾಯದ ಯುವಕರು ರಾಜಕೀಯಕ್ಕೆ ಪ್ರೇರೇಪಿತರಾಗಿ, ಧರ್ಮ ಧರ್ಮಗಳ ನಡುವೆ ತಿಕ್ಕಾಟ ತರುವ ಸಂಘಟನೆಗಳಿಗೆ ಸೇರಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.