ಮಡಿಕೇರಿ, ಅ. ೭ : ಕನ್ನಡದ ಮೂಲ ನೆಲೆಯಾಗಿರುವ ಕರ್ನಾಟಕದಲ್ಲಿ ಕನ್ನಡ ಪುಸ್ತಕಗಳು ಬೇಡಿಕೆ ಕಳೆದುಕೊಳ್ಳುತ್ತಿವೆ ಎಂದು ಬೆಂಗಳೂರು ವೀರಲೋಕ ಪ್ರಕಾಶನದ ಅಧ್ಯಕ್ಷ ವೀರಕ ಪುತ್ರ ಶ್ರೀನಿವಾಸ್ ವಿಷಾದ ವ್ಯಕ್ತಪಡಿಸಿದರು.

ಬೆಂಗÀಳೂರು ವೀರಲೋಕ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ದೇಸಿ ಜಗಲಿ ಕಥಾ ಕಮ್ಮಟವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಏಳು ಕೋಟಿ ಕನ್ನಡಿಗರಿದ್ದಾರೆ. ಆದರೆ ಐವತ್ತು ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲು ಪರದಾಡಬೇಕಾದಂತಹ ಪರಿಸ್ಥಿತಿ ಉದ್ಭವಿಸಿದೆ. ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಸೂಕ್ತ ಪ್ರೋತ್ಸಾಹದ ಕೊರತೆ ಉಂಟಾಗಿದೆ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಶ್ರೀನಿವಾಸ್ ಈ ಹಿನ್ನೆಲೆಯಲ್ಲಿ ವೀರಲೋಕ ಪ್ರಕಾಶನ ಕನ್ನಡ ಬರಹಗಾರರ ಪುಸ್ತಕಗಳನ್ನು ಹೊರ ತರಲು ಮುಂದಾಗುವುದರೊAದಿಗೆ ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುವಂತೆ ಮಾಡಲು ತನ್ನನ್ನು ತೊಡಗಿಸಿಕೊಂಡಿದೆ. ಆ ಮೂಲಕ ಕನ್ನಡ ಬರಹಗಾರರನ್ನೂ ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಿದೆ. ಈ ದಿಸೆಯಲ್ಲಿ ಬೆಂಗಳೂರಿನಲ್ಲಿ ೩೦೦ ಕಡೆಗಳಲ್ಲಿ ಪುಸ್ತಕ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ, ಮೊಬೈಲ್ ಮೂಲಕ ಜನರಿಗೆ ವಿವಿಧ ಉತ್ಪನ್ನಗಳ ಮಾಹಿತಿ ನೀಡುವಂತೆ ಕನ್ನಡ ಪುಸ್ತಕಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಥಾ ಕಮ್ಮಟಗಳನ್ನು ಆಯೋಜಿಸ ಲಾಗುತ್ತಿದ್ದು, ಕೊಡಗಿನಲ್ಲಿ ಆಯೋಜನೆಗೊಂಡಿರುವ ಈ ಕಥಾ ಕಮ್ಮಟ ೧೫ನೇ ಕಾರ್ಯಕ್ರಮವಾಗಿದೆ ಎಂದು ಅವರು ಮಾಹಿತಿ ನೀಡಿದರು. ಮಕ್ಕಳು

(ಮೊದಲ ಪುಟದಿಂದ) ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ ಶ್ರೀನಿವಾಸ್ ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೇಖಕ, ಚಿಂತಕರಾದ ಡಾ. ಮೋಹನ್ ಪಾಳೇಗಾರ್ ಮಾತನಾಡಿ ಪ್ರಸ್ತುತ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಏಕಾಗ್ರತೆ ಎಂಬುದು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಏಕಾಗ್ರತೆಯನ್ನು ಕಲಿಸುವ (ಮೊದಲ ಪುಟದಿಂದ) ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ ಶ್ರೀನಿವಾಸ್ ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೇಖಕ, ಚಿಂತಕರಾದ ಡಾ. ಮೋಹನ್ ಪಾಳೇಗಾರ್ ಮಾತನಾಡಿ ಪ್ರಸ್ತುತ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಏಕಾಗ್ರತೆ ಎಂಬುದು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಏಕಾಗ್ರತೆಯನ್ನು ಕಲಿಸುವ ಮೂಡಿಸಿ; ಉಳಿಸಿ ಬೆಳೆಸಲು ಇಂತಹ ಕಮ್ಮಟಗಳ ಅವಶ್ಯಕತೆ ಇದೆ ಎಂದು ಹೇಳಿದರು.

ವೀರಲೋಕ ಪ್ರಕಾಶನದ ಕೊಡಗು ಜಿಲ್ಲಾ ಯೋಜನಾ ಸಂಘಟಕರಾದ ಬಿ.ಜಿ.ಅನಂತಶಯನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮನಸಾರೆ ಪ್ರತಿಯೊಬ್ಬರು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಭಾಷೆಯ ಉಳಿವಿಗೆ ಪಣ ತೊಡಬೇಕೆಂದು ನುಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ ಅವರು ಮಾತನಾಡಿ ಬರೆಯುವ ಕಥೆಗಳು ಸಮಾಜಕ್ಕೆ ಬೆಳಕು ತೋರುವಂತಿರಬೇಕೆ ಹೊರತು ಸಮಾಜದ ಅಶಾಂತಿಗೆ ಕಾರಣವಾಗಬಾರದು ಎಂದು ಹೇಳಿದರು. ಬರಹಗಾರರು ತರಬೇತುದಾರ ಪ್ರಭಾಕರ ಶಿಶಿಲ ಅವರು ಮಾತನಾಡಿ, ಈ ಎಲ್ಲಾ ಸಂಸ್ಥೆಗಳು ಸೇರಿ ಕೊಡಗಿನಲ್ಲಿ ಪುಸ್ತಕ ಭಂಡಾರ ಆರಂಭಿಸುವAತೆ ಸಲಹೆಯಿತ್ತರು.

ಸಾಹಿತಿಗಳಾದ ಸ್ಮಿತಾ ಅಮೃತರಾಜ್ ಮಾತನಾಡಿ, ಬದುಕನ್ನು ಪ್ರೀತಿಸಲು ಬರಹದಿಂದ ಮಾತ್ರ ಸಾಧ್ಯ ಎಂದರು. ಸುನೀತ ಲೋಕೇಶ್ ಮಾತನಾಡಿ ಬರವಣಿಗೆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಸಹನಾ ಕಾಂತಬೈಲು ಮಾತನಾಡಿ ಓದುವ ಹವ್ಯಾಸ ರೂಢಿಸಿಕೊಂಡರೆ ಬರವಣಿಗೆ ತಾನಾಗಿಯೆ ಉತ್ತಮಗೊಳ್ಳುತ್ತದೆ ಎಂದರು. ನೌಶಾದ್ ಮಾತನಾಡಿ ಮಕ್ಕಳು ಹೆಚ್ಚೆಚ್ಚು ಬರೆಯುವ ಹವ್ಯಾಸವನ್ನು ರೂಢಿಸಿ ಕೊಳ್ಳಬೇಕೆಂದರು.

ವೇದಿಕೆಯಲ್ಲಿ ಜಾನಪದ ಪರಿಷತ್ ಕೊಡಗು ಘಟಕದ ಉಪಾಧ್ಯಕ್ಷರುಗಳಾದ ಶೋಭಾ ಸುಬ್ಬಯ್ಯ, ಅಂಬೆಕಲ್ ಕುಶಾಲಪ್ಪ, ರವೀಂದ್ರ ರೈ, ಕಾರ್ಯದರ್ಶಿ ಉಜ್ವಲ್ ರಂಜಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಉಪಸ್ಥಿತರಿದ್ದರು. ಈ ಸಂದರ್ಭ ಪ್ರಭಾಕರ ಶಿಶಿಲ ಹಾಗೂ ಮೋಹನ್ ಪಾಳೇಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಜಯ್‌ಸೂದ್ ಪ್ರಾರ್ಥಿಸಿ, ಕಥಾ ಕಮ್ಮಟ ಸಹ ಸಂಚಾಲಕಿ ರೇವತಿ ರಮೇಶ್ ನಿರೂಪಿಸಿ, ಕಥಾ ಕಮ್ಮಟ ಸಂಚಾಲಕ ಎಸ್.ಎಸ್. ಸಂಪತ್‌ಕುಮಾರ್ ಸ್ವಾಗತಿಸಿದರು. ರವೀಂದ್ರ ರೈ ವಂದಿಸಿದರು.

ದೇಸಿ ಜಗಲಿ ಕಥಾ ಕಮ್ಮಟ ಎರಡು ದಿನಗಳ ಕಾಲ ನಡೆಯಲಿದ್ದು ಬರಹಗಾರರು ಹಾಗೂ ತರಬೇತುದಾರರಾದ ಬಿ. ಪ್ರಭಾಕರ ಶಿಶಿಲ ಅವರು ತರಬೇತಿ ನೀಡಲಿದ್ದಾರೆ.