ಜೆರುಸಲೇಂ, ಅ. ೭ : ಶನಿವಾರ ಹಮಾಸ್ ಉಗ್ರಗಾಮಿಗಳಿಂದ ಇಸ್ರೇಲ್ ಮೇಲೆ ನಡೆದ ರಾಕೆಟ್ ಯುದ್ಧ ಹಾಗೂ ಗುಂಡಿನ ದಾಳಿಯಲ್ಲಿ ನೂರಾರು ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಗಾಯ ಗೊಂಡಿದ್ದಾರೆ.

ಇಸ್ರೇಲ್ ಗಡಿಯ ತಂತಿಯನ್ನು ಭೇದಿಸಿ ಇಸ್ರೇಲ್ ದೇಶದೊಳಕ್ಕೆ ಪ್ರವೇಶಿಸಿದ ಹಮಾಸ್ ಉಗ್ರಗಾಮಿಗಳು ಕಂಡ ಕಂಡಲ್ಲಿ ಗುಂಡಿನ ಮಳೆಗೈ ಯಲು ಆರಂಭಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಉಗ್ರಗಾಮಿಗಳು ಇಸ್ರೇಲ್‌ನ ಟ್ಯಾಂಕರ್ ಅನ್ನು ಆವರಿಸಿ ಅದರಲ್ಲಿದ್ದ ಇಸ್ರೇಲ್ ಸೈನಿಕರÀನ್ನು ಎಳೆದು ಅವರ ಮೇಲೆ ಕ್ರೂರ ರೀತಿಯಲ್ಲಿ ಹಿಂಸೆ ಮಾಡಲು ಆರಂಭಿಸಿದರು. ಜೀಪು ಹಾಗೂ ಬೈಕುಗಳಲ್ಲಿ ಒಳ ನುಗ್ಗಿದ ಉಗ್ರಗಾಮಿಗಳು ಮಹಿಳೆಯರು ಮಕ್ಕಳು ಸೇರಿದಂತೆ

(ಮೊದಲ ಪುಟದಿಂದ) ಹಲವರನ್ನು ಗುಂಡಿಕ್ಕಿ ಕೊಂದರಲ್ಲದೆ, ಅತ್ಯಂತ ಕ್ರೂರ ರೀತಿಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು ೪೦ ಮಂದಿಯನ್ನು ಒತ್ತೆಯಾಳುಗಳಾಗಿ ತಮ್ಮ ತಮ್ಮ ವಾಹನದೊಳಕ್ಕೆ ತುಂಬಿ ಇಸ್ರೇಲ್ ಗಡಿಯನ್ನು ದಾಟಿದರು. ದಾಳಿಯ ಯಾವುದೇ ಮುನ್ಸೂಚನೆ ಅರಿಯದ ಇಸ್ರೇಲ್ ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು ಮತ್ತೆ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದೆ. ಅಮೇರಿಕಾ ಇಂಗ್ಲೆAಡ್ ಸೇರಿದಂತೆ ಭಾರತ ಉಗ್ರಗಾಮಿಗಳ ದಾಳಿಯನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸಿದ್ದು ಇಸ್ರೇಲ್ ಗೆ ತಮ್ಮ ಬೆಂಬಲವನ್ನು ಸೂಚಿಸಿವೆ.

ದಾಳಿಯಲ್ಲಿ ಶಾರ್ ಹನೆಗೆವ್ ಪ್ರಾದೇಶಿಕ ಮಂಡಳಿಯ ಮುಖ್ಯಸ್ಥ ಓಫಿರ್ ಲೀಬ್‌ಸ್ಟೆöÊನ್ ಮೃತಪಟ್ಟಿದ್ದು, ಭಯೋತ್ಪಾದಕರ ದಾಳಿ ಸಂದರ್ಭ ಪಟ್ಟಣವನ್ನು ರಕ್ಷಿಸಲು ತೆರಳಿದ ಓಫೀರ್ ಕೊಲ್ಲಲ್ಪಟ್ಟಿದ್ದಾರೆ. ಕೌನ್ಸಿಲ್‌ನ ಉಪ ಮುಖ್ಯಸ್ಥ ಯೋಸ್ಸಿ ಕೆರೆನ್ ಅವರು ಲೀಬ್‌ಸ್ಟೆöÊನ್ ಸಾವಿನ ನಂತರ ಮಧ್ಯಂತರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಂತರ ಪ್ಯಾರಾಗ್ಲೈಡರ್‌ಗಳನ್ನು ಬಳಸಿ ಭೂಮಿ, ಸಮುದ್ರ ಮತ್ತು ವಾಯುಮಾರ್ಗದಲ್ಲಿ ಇಸ್ರೇಲ್‌ಗೆ ಪ್ರವೇಶಿಸಿದ ಗಾಜಾ ಉಗ್ರರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

"ಇದು ಪ್ಯಾರಾಗ್ಲೈಡರ್, ಸಮುದ್ರ ಮತ್ತು ನೆಲದ ಮೂಲಕ ನಡೆದ ಸಂಯೋಜಿತ ದಾಳಿಯಾಗಿದೆ ಎಂದು ಸೇನಾ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ಯಾಲೇಸ್ತೀನ್ ಉಗ್ರಗಾಮಿಗಳು ಅನೇಕ ಇಸ್ರೇಲಿಯನ್ನರನ್ನು ಬಂಧಿಸಿದ್ದಾರೆ. ಹಾಗೆಯೇ ಉತ್ತರ ಇಸ್ರೇಲ್, ವೈರಿಗಳಾದ ಲೆಬನಾನ್ ಮತ್ತು ಸಿರಿಯಾ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್‌ಗೆ ಸಾವಿರಾರು ಮಿಲಿಟರಿಗಳನ್ನು ಕಳುಹಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತೀಯ ಸ್ಥಳೀಯ ಕಾಲಮಾನ ಇಂದು ಬೆಳಿಗ್ಗೆ ಸುಮಾರು ೧೦:೩೦ ಕ್ಕೆ ಗಾಜಾದಿಂದ ಕನಿಷ್ಟ ೨,೨೦೦ ರಾಕೆಟ್‌ಗಳನ್ನು ಹಾರಿಸಲಾಯಿತು, ಆದರೆ ಹಮಾಸ್ ಉಗ್ರಗಾಮಿಗಳು ಈ ಸಂಖ್ಯೆಯನ್ನು ೫,೦೦೦ ಕ್ಕಿಂತ ಹೆಚ್ಚು ಎಂದಿರುವುದಾಗಿ ವಕ್ತಾರರು ತಿಳಿಸಿದ್ದಾರೆ.

ದಾಳಿಯ ನಂತರ, ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯ ಮೇಲೆ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದವು. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ಲಾಮಿಕ್ ಹಮಾಸ್‌ನ ಅನಿರೀಕ್ಷಿತ ದಾಳಿಯ ನಂತರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ರಾಷ್ಟçವು ಯುದ್ಧದ ಸ್ಥಿತಿಯಲ್ಲಿದೆ. ಇದಕ್ಕೆ ಶತ್ರುಗಳು ಭಾರೀ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.