ಮಡಿಕೇರಿ, ಅ. ೬: ನಗರದ ಅಶೋಕಪುರ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ ವಿಸರ್ಜನೋತ್ಸವ ತಾ. ೭ ರಂದು (ಇಂದು) ನಡೆಯಲಿದೆ.
ಗಣೇಶ ಮೂರ್ತಿಗೆ ಸಂಜೆ ೬ ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ರೂ. ೮ ಲಕ್ಷ ವೆಚ್ಚದಲ್ಲಿ ಈ ಬಾರಿ ಮಂಟಪ ನಿರ್ಮಿಸಲಾಗುತ್ತಿದ್ದು, ‘ಗಣಪತಿಯಿಂದ ನರಹಂತಕ ದೇವಾಂತಕ ರಾಕ್ಷಸನ ಸಂಹಾರ’ ಎಂಬ ಕಥಾ ಹಂದರವನ್ನು ಪ್ರದರ್ಶಿಸಲಾಗುತ್ತಿದೆ.
ಮೊದಲು ಫೀ.ಮಾ. ಕಾರ್ಯಪ್ಪ ವೃತ್ತ (ಸುದರ್ಶನ್ ಸರ್ಕಲ್) ದಲ್ಲಿ ಮಂಟಪದ ಪ್ರದರ್ಶನದ ಬಳಿಕ ಜನರಲ್ ತಿಮ್ಮಯ್ಯ ವೃತ್ತ, ಪೊಲೀಸ್ ಠಾಣೆ, ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ ಪ್ರದರ್ಶನದ ನಂತರ ಗೌರಿಕೆರೆಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು.
ದಿಂಡಿಗಲ್ನ ಪ್ರಭಾವಳಿ, ಮಡಿಕೇರಿಯ ಇವೆಂಟ್ ಟೆಕ್ ಸಂಸ್ಥೆಯ ಅವಿನ್ ತಂಡದ ಲೈಟಿಂಗ್ಸ್, ಫೈಯರ್ ವರ್ಕ್ ಹಾಗೂ ಸೌಂಡ್ಸ್, ೨೦ಕ್ಕೂ ಹೆಚ್ಚು ಕಲಾಕೃತಿಗಳು ಮಂಟಪದಲ್ಲಿ ಇರಲಿವೆ. ಮಂಟಪ ನಿರ್ಮಾಣ ಲಾರೆನ್ಸ್, ರಾಘವೇಂದ್ರ, ಗೌತಮ್ ಮಾಡಲಿದ್ದು, ಕಲಾಕೃತಿ ತಂಡದಲ್ಲಿ ಪ್ರಜ್ವಲ್, ರಾಜೇಶ್, ಭರತ್, ಲತೇಶ್, ಆಕಾಶ್, ಅಖಿಲೇಶ್, ನಿಮಿತ್, ವರುಣ್, ಕೌಶಿಕ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಮಿತಿಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.