ಮಡಿಕೇರಿ, ಅ. ೫: ಪರಿಸರ ಮಾಲಿನ್ಯ ಸೃಷ್ಟಿಗೆ ಕಾರಣವಾಗುತ್ತಿದ್ದ ಹೊಗೆಯುಕ್ತ ವಾಹನಗಳಿಗೆ ‘ಗುಜರಿ ಭಾಗ್ಯ’ ದೊರೆತಿದ್ದು, ರಾಜ್ಯದ ೧೫,೨೯೬ ವಾಹನಗಳ ಪೈಕಿ ಜಿಲ್ಲೆಯ ೯೫ ವಾಹನಗಳು ಗುಜರಿ ಸೇರಲಿವೆ.
ಮಾಲಿನ್ಯ ತಡೆಗಟ್ಟುವ ಸಂಬAಧ ಕೇಂದ್ರ ಸರಕಾರ ಜಾರಿ ಮಾಡಿರುವ ‘ಸ್ಕಾçö್ಯಪಿಂಗ್’ ನೀತಿಯನ್ನು ರಾಜ್ಯ ಸರಕಾರ ಮಡಿಕೇರಿ, ಅ. ೫: ಪರಿಸರ ಮಾಲಿನ್ಯ ಸೃಷ್ಟಿಗೆ ಕಾರಣವಾಗುತ್ತಿದ್ದ ಹೊಗೆಯುಕ್ತ ವಾಹನಗಳಿಗೆ ‘ಗುಜರಿ ಭಾಗ್ಯ’ ದೊರೆತಿದ್ದು, ರಾಜ್ಯದ ೧೫,೨೯೬ ವಾಹನಗಳ ಪೈಕಿ ಜಿಲ್ಲೆಯ ೯೫ ವಾಹನಗಳು ಗುಜರಿ ಸೇರಲಿವೆ.
ಮಾಲಿನ್ಯ ತಡೆಗಟ್ಟುವ ಸಂಬAಧ ಕೇಂದ್ರ ಸರಕಾರ ಜಾರಿ ಮಾಡಿರುವ ‘ಸ್ಕಾçö್ಯಪಿಂಗ್’ ನೀತಿಯನ್ನು ರಾಜ್ಯ ಸರಕಾರ ಸೃಷ್ಟಿಯಾಗುತ್ತದೆ. ಜೊತೆಗೆ ಹಳೆ ವಾಹನಗಳಿಂದ ಅಪಘಾತ ಪ್ರಮಾಣವೂ ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಸರಕಾರ ವಿದೇಶಗಳಲ್ಲಿ ಇರುವ ನೀತಿಯಿಂದ ಭಾತದಲ್ಲಿಯೂ ‘ಸ್ಕಾçö್ಯಪಿಂಗ್’ ನೀತಿಯನ್ನು ಜಾರಿಗೊಳಿಸಿದೆ. ಈ ನೀತಿಯ ಪ್ರಕಾರ ೧೫ ವರ್ಷಕ್ಕಿಂತ ಮೇಲ್ಪಟ್ಟ ವಾಣಿಜ್ಯ ಹಾಗೂ ೨೦ ವರ್ಷ ಮೇಲ್ಪಟ್ಟ ಪ್ರಯಾಣಿಕರ ವಾಹನಗಳನ್ನು ಸರಕಾರವೂ ಹಂತಹAತವಾಗಿ ಗುಜರಿಗೆ ಹಾಕುವ ಚಿಂತನೆ ನಡೆಸಿದೆ.
ಇದಕ್ಕೂ ಮುನ್ನ ೧೫ ವರ್ಷ ಮೇಲ್ಪಟ್ಟ ಸರಕಾರಿ ವಾಹನಗಳನ್ನು ಗುಜರಿಗೆ ಹಾಕಲು ಕರ್ನಾಟಕ ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ೫ ಸಾವಿರ ವಾಹನಗಳನ್ನು ಸ್ಕಾçö್ಯಪ್ಗೆ ಹಾಕಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರಕ್ಕೆ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ಆರಂಭಿಕವಾಗಿ ರೂ. ೧೦೦ ಕೋಟಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬೆಂಗಳೂರಿನ ದೇವನಹಳ್ಳಿಯಲ್ಲಿ ಇದಕ್ಕಾಗಿ ಬೃಹತ್ ಸ್ಕಾçಪಿಂಗ್ ಯಾರ್ಡ್ ಅನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯ ೯೫ ವಾಹನಗಳು
ಮಡಿಕೇರಿಯ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ನೊಂದಾವಣಿಗೊAಡ ಜಿಲ್ಲೆಯ ೯೫ ಸರಕಾರಿ ವಾಹನಗಳನ್ನು ಗುಜರಿಗೆ ಹಾಕಲು ಪಟ್ಟಿ ಮಾಡಲಾಗಿದೆ ಎಂದು ಆರ್.ಟಿ.ಓ. ನಾಗರಾಜ್ ಆಚಾರ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸೋಮವಾರಪೇಟೆ, ಮಡಿಕೇರಿ ಡಿವೈಎಸ್ಪಿ, ಪಶು ಆರೋಗ್ಯ ಇಲಾಖೆ, ಸೋಮವಾರಪೇಟೆ ತಾಲೂಕು ಪಂಚಾಯಿತಿ, ಅಗ್ನಿಶಾಮಕ ದಳ, ಆರೋಗ್ಯಾಧಿಕಾರಿಗಳು, ಪಿಡಬ್ಲೂö್ಯಡಿ ಇಂಜಿಯರ್ಗಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕರು, ತೋಟಗಾರಿಕೆ ಇಲಾಖೆ ಅಧಿಕಾರಿಗಳ, ಸಂಚಾರಿ ಆರೋಗ್ಯ ಸೇವೆ, ಜಿ.ಪಂ. ಮುಖ್ಯ ಕಾರ್ಯಪಾಲಕ, ಟೆಲಿಕಾಂ ಅಧಿಕಾರಿ, ರೇಷ್ಮೆ ಇಲಾಖೆ, ಸಿವಿಲ್ ನ್ಯಾಯಾಧೀಶರು, ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ವೈದ್ಯಕೀಯ ಶಸ್ತçಚಿಕಿತ್ಸಕ, ಐಟಿಡಿಪಿ ಇಲಾಖೆ ಅಧಿಕಾರಿ, ನಗರಸಭೆ ಆಯುಕ್ತ, ತಹಶೀಲ್ದಾರ್ಗಳ, ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಯ ಅಧೀನದಲ್ಲಿದ್ದ ಹೊಗೆಯುಕ್ತ ೯೫ ವಾಹನಗಳನ್ನು ಗುಜರಿಗೆ ಹಾಕಲು ಪಟ್ಟಿ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.