ಮಡಿಕೇರಿ: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩ರಿಂದ ೨೦೨೮ರವರೆಗಿನ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರಕ್ಕೆ ಕೊಡಂದೇರ ಬಾಂಡ್ ಗಣಪತಿ ಹಾಗೂ ಹಿಂದುಳಿದ ವರ್ಗ ಪ್ರವರ್ಗ ‘‘ಎ’’ ಸ್ಥಾನಕ್ಕೆ ಬಿ.ಪಿ. ದಿನೇಶ್ ಅವಿರೋಧವಾಗಿ ಆಯ್ಕೆಯಾದರು. ಉಳಿದ ಸಾಲಗಾರರ ಕ್ಷೇತ್ರದ ೬ ಸ್ಥಾನಕ್ಕೆ ೧೨ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರಿಂದ ಚುನಾವಣೆ ನಡೆಯಿತು. ಒಟ್ಟು ೪೦೧ ಮತಗಳಲ್ಲಿ ೩೮೭ ಮತಗಳು ಚಲಾವಣೆಯಾಗಿ ೧೩ ಮತಗಳು ಅಸಿಂಧು ಮತಗಳಾದವು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ರೀತಿಯಾಗಿದೆ. ಅಣ್ಣಯ್ಯ ಮುರುವಂಡ (೯೪ ಮತಗಳು), ಅಯ್ಯಪ್ಪ ಟಿ. ಮುರುವಂಡ (೨೮೦), ಉತ್ತಪ್ಪ ಬಿ. ಕೇಳಪಂಡ (೨೯೮), ಕೊಲ್ಲಿರ ಗೋಪಿ ಚಿಣ್ಣಪ್ಪ (೨೮೩), ಗಣಪತಿ ಯನ್. ಚೇಂದAಡ (೧೦೦), ಚಂಡೀರ ಯಸ್. ಬೋಪಣ್ಣ (೭೬), ದಿನೇಶ್ ಡಿ. ಪುಲಿಯಂಡ (೨೭೫), ಪ್ರಕಾಶ್ ವಿ. ದೊಡ್ಡಮನೆ (೬೨), ಭೀಮಯ್ಯ ಡಿ. ಕೊಕ್ಕಂಡ (೧೦೯), ಮಂದಣ್ಣ ಕೆ. ಸೋಮೆಯಂಡ (೨೫೮), ರಾಜೇಶ್ ಬಿ. ಕೊಂಗೇಪAಡ (೭೦), ಶ್ರೀನಿವಾಸ್ ಡಿ. ಹಂಚಿನಮನೆ (೨೬೮) ಮತಗಳನ್ನು ಪಡೆದುಕೊಂಡರು.

ಮಹಿಳಾ ಮೀಸಲು ೨ ಸ್ಥಾನಕ್ಕೆ ೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಇದಕ್ಕೆ ನಡೆದ ಚುನಾವಣೆಯಲ್ಲಿ ಗಂಗಮ್ಮ ಯಸ್. ಪಟ್ರಂಗಡ (೨೭೧), ರೂಪ ಜೆ. ಚೇಂದAಡ (೨೬೮) ಹಾಗೂ ಸುಶೀಲ ಎ. ಚೇಂದAಡ (೧೨೦) ಹಾಗೂ ಹಿಂದುಳಿದ ವರ್ಗ ಪ್ರವರ್ಗ ‘‘ಬಿ’’ಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಇದಕ್ಕೆ ನಡೆದ ಚುನಾವಣೆಯಲ್ಲಿ ಅಪ್ಪಯ್ಯ ಯಂ. ಕೇಳಪಂಡ (೩೪), ಗಣಪತಿ ಯಸ್. ತೀತಾಮಾಡ (೨೮೯) ಹಾಗೂ ರಜನೀಶ್ ಕೆ. ಬಯವಂಡ (೨೦) ಮತಗಳನ್ನು ಪಡೆದುಕೊಂಡರು.

೨೦೦೮ರಿAದ ೨೦೨೩ರವರೆಗೆ ಸುಮಾರು ೧೫ ವರ್ಷಗಳ ಕಾಲ ಸಂಘದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಸಂಘವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದೇನೆ. ಮುಂದೆಯೂ ಸಂಘದ ಸದಸ್ಯರಿಗೆ ಎಲ್ಲಾ ಸೇವೆ ಮತ್ತು ಸೌಲಭ್ಯವನ್ನು ನೀಡಲು ಶ್ರಮಿಸುವುದಾಗಿ ಬಾಂಡ್ ಗಣಪತಿ ಪ್ರತಿಕ್ರಿಯಿಸಿದರು. ಚುನಾವಣಾಧಿಕಾರಿಯಾಗಿ ಹಾತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನಾ ಕಾರ್ಯನಿರ್ವಹಿಸಿದರು.ಮಡಿಕೇರಿ: ಮಕ್ಕಂದೂರು ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶಾಂತೆಯAಡ ರವಿಕುಶಾಲಪ್ಪ ಆಯ್ಕೆಯಾಗಿದ್ದಾರೆ.

ಇಂದು ಸಂಘದ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವಿಕುಶಾಲಪ್ಪ ಅಧ್ಯಕ್ಷರಾಗಿ ಹಾಗೂ ಚೌಕಿಮನೆ ರಘು ತಿಮ್ಮಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಆಯ್ಕೆ ಪ್ರಕ್ರಿಯೆ ಸಂದರ್ಭ ನಿರ್ದೇಶಕರುಗಳಾದ ನಾಪಂಡ ರವಿ ಕಾಳಪ್ಪ, ಬಿ.ಎನ್. ರಮೇಶ್, ಬಿ.ಎಸ್. ವಿಮಲ, ಮಡ್ಲಂಡ ಸ್ವಾತಿ, ಕುಂಬುಗೌಡನ ಜಯಲಕ್ಷಿö್ಮ, ಬಿ.ಎಂ. ಸುನಂದ, ಹೆಚ್.ಎ. ಸುಧಾಕರ, ಬಿ.ಕೆ. ಜತ್ತಪ್ಪ ಇದ್ದರು.ಸಿದ್ದಾಪುರ : ಅಭ್ಯತ್‌ಮಂಗಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಕೆ. ಲೋಕೇಶ್ ಹಾಗೂ ಉಪಾಧ್ಯಕ್ಷರಾಗಿ ತೋಟಂಬೈಲು ಎ ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ನೂತನ ನಿರ್ದೇಶಕರ ಚುನಾವಣೆಯಲ್ಲಿ ೧೩ ಸ್ಥಾನಗಳ ಪೈಕಿ ವಿ ಕೆ ಲೋಕೇಶ್ ನೇತೃತ್ವದ ತಂಡ ಹನ್ನೆರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಗೆಲುವನ್ನು ಪಡೆದುಕೊಂಡಿತು. ಅಲ್ಲದೆ ಪ್ರತಿಸ್ಪರ್ಧಿ ಇಲ್ಲದೆ ಎದುರಾಳಿ ಬಣದಿಂದ ಒಂದು ಸ್ಥಾನವು ಅವಿರೋಧವಾಗಿ ಆಯ್ಕೆಗೊಂಡಿತ್ತು. ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ವಿ.ಕೆ. ಲೋಕೇಶ್ ಜಯಶೀಲರಾಗಿದ್ದರು. ಶುಕ್ರವಾರದಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಆಕಾಂಕ್ಷಿಗಳು ಇಲ್ಲದ ಹಿನ್ನೆಲೆಯಲ್ಲಿ ವಿ.ಕೆ. ಲೋಕೇಶ್ ಅಧ್ಯಕ್ಷರಾಗಿ ಹಾಗೂ ಕಳೆದ ಬಾರಿ ನಿರ್ದೇಶಕರಾಗಿದ್ದ ತೋಟಂಬೈಲು ಎ. ಪ್ರಸನ್ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ಪ್ರಸನ್ನ ಕೆ.ಎಂ., ಅಶೋಕ್ ಟಿ.ಸಿ., ಸುನಿಲ್ ಕುಮಾರ್ ವಿ.ಕೆ., ತೇಜಸ್ ಬಿ.ಎಂ., ಭಾನುಪ್ರಕಾಶ್, ಸುಪ್ರಿಮ್ ಕೆ.ಜೆ., ಅಚ್ಚಯ್ಯ ಪಿ.ಸಿ., ಸುಧರ್ಮ ಆರ್. ಹರಿಣಿ, ಎಂ. ಎನ್. ಧರ್ಮಲಿಂಗ, ಎಂ. ಪ್ರಮೀಳಾ, ಸಂಘದ ಕಾರ್ಯನಿರ್ವಾಹಣಾಧಿಕಾರಿ ಪುಟ್ಟಿಚಂಡ ಕಾರ್ಯಪ್ಪ, ಸಿಬ್ಬಂದಿಗಳಾದ ಸಿದ್ದು, ಹರ್ಷ ಹಾಜರಿದ್ದರು. ಚುನಾವಣಾ ಅಧಿಕಾರಿಯಾಗಿ ಕೆ. ಯು ಕರಣ್ ಕಾರ್ಯಪ್ಪ ಕಾರ್ಯನಿರ್ವಹಿಸಿದರು.ಗೋಣಿಕೊಪ್ಪಲು: ಪ್ರತಿಷ್ಠಿತ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನ ನೂತನ ಸಾಲಿನ ಅಧ್ಯಕ್ಷರಾಗಿ ಚಿರಿಯಪಂಡ ಕೆ. ಉತ್ತಪ್ಪ ೯ನೇ ಬಾರಿಗೆ ಹಾಗೂ ಕೋಳೆರ ದಯಾ ಚಂಗಪ್ಪ ಮೂರನೇ ಬಾರಿಗೆ ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಗೊಂಡರು.

೧೩ ನಿರ್ದೇಶಕರನ್ನೊಳಗೊಂಡ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಬ್ಯಾಂಕಿನ ಸಭಾಂಗಣದಲ್ಲಿ ನಡೆಸಲಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊAದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಎಂ.ಎಸ್. ಮೋಹನ್ ತಿಳಿಸಿದರು. ಈ ವೇಳೆ ನೂತನವಾಗಿ ಆಯ್ಕೆಗೊಂಡ ೧೩ ನಿರ್ದೇಶಕರುಗಳಿಗೆ ದೃಢೀಕರಣ ಪತ್ರವನ್ನು ವಿತರಿಸಲಾಯಿತು.

ಅಧ್ಯಕ್ಷರಾಗಿ ನೇಮಕಗೊಂಡ ಚಿರಿಯಪಂಡ ಕೆ. ಉತ್ತಪ್ಪ ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಗೆ ಸಂಘದ ಸದಸ್ಯರು ದುಡಿದಿದ್ದಾರೆ. ಅಭಿವೃದ್ಧಿಯತ್ತ ಸಾಗುತ್ತಿದೆ. ಸದಸ್ಯರ ಹಿತ ಕಾಪಾಡುವುದು ಆಡಳಿತ ಮಂಡಳಿಯ ಮೂಲ ಕರ್ತವ್ಯವಾಗಿದೆ. ಬ್ಯಾಂಕನ್ನು ಮತ್ತಷ್ಟು ವಿಸ್ತಾರಗೊಳಿಸಲು ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಸಕಾಲದಲ್ಲಿ ಸದಸ್ಯರಿಗೆ ಬೇಕಾದ ರಸಗೊಬ್ಬರಗಳನ್ನು ಇತರ ಸಾಲ ಯೋಜನೆಗಳನ್ನು ಸಮಪರ್ಕವಾಗಿ ಒದಗಿಸಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಪಡೆದ ಸಾಲವನ್ನು ಮರು ಪಾವತಿಸುವ ನಿಟ್ಟಿನಲ್ಲಿ ಸದಸ್ಯರುಗಳು ಕಾರ್ಯನ್ಮುಖವಾಗಬೇಕು ಎಂದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಕೋಳೆರ ದಯಾ ಚಂಗಪ್ಪ ಮಾತನಾಡಿ, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಸ್ವಾತಂತ್ರö್ಯ ಪೂರ್ವದಿಂದಲೂ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿದೆ. ಶೇ.೮೦ರಷ್ಟು ಸಾಲ ವಸೂಲಾತಿಯಲ್ಲಿ ಮುಂದಿದೆ. ಸದಸ್ಯರಿಗೆ ಹೆಚ್ಚಿನ ಡಿವಿಡೆಂಟ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿಗೆ ನೂತನವಾಗಿ ಆಯ್ಕೆಗೊಂಡಿರುವ ನಿದೇಶಕರು ಆಡಳಿತ ಮಂಡಳಿಯೊAದಿಗೆ ಕೈ ಜೋಡಿಸಿ ಉತ್ತಮ ರೀತಿಯಲ್ಲಿ ಬ್ಯಾಂಕನ್ನು ಅಭಿವೃದ್ದಿಯತ್ತ ಕೊಂಡೋಯ್ಯಲು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಬ್ಯಾಂಕಿನ ನಿರ್ದೆಶಕರುಗಳಾದ ಚೆಪ್ಪುಡೀರ ಎಂ. ಪೊನ್ನಪ್ಪ, ಚೆಪ್ಪುಡೀರ ಎಸ್.ಉತ್ತಪ್ಪ ಅಡ್ಡಂಡ ಕೆ. ಸುನೀಲ್ ಸೋಮಯ್ಯ, ಐನಂಡ ಕೆ.ಬೋಪಣ್ಣ, ಮೂಕಳೇರ ಬಿ. ರಮೇಶ್, ಎಂ.ಎ. ಶಾಜಿ ಅಚ್ಚುತ್ತನ್, ಹೆಚ್.ಎ. ಪ್ರಭು, ಮಂಜುಳ ಮೂಕಳೇರ ಪಿ. ಆಶಾ, ಮೂಕಳೆರ ಬೀಟಾ ಲಕ್ಷö್ಮಣ, ಪಿ.ಎ. ಅಜೀಜ್ ಸೇರಿದಂತೆ ಬ್ಯಾಂಕಿನ ವ್ಯವಸ್ಥಾಪಕ ಟಿ.ಪಿ. ಧಮೇಂದ್ರ ಭಾಗವಹಿಸಿದ್ದರು. ಬ್ಯಾಂಕಿನ ವ್ಯವಸ್ಥಾಪಕ ಟಿ.ಪಿ.ಧರ್ಮೆಂದ್ರ ಸ್ವಾಗತಿಸಿ, ವಂದಿಸಿದರು.ಅಮ್ಮತ್ತಿ : ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಐನಂಡ ಲಾಲ ಅಯ್ಯಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಕುಟ್ಟಂಡ ಸಿ. ಪೂಣಚ್ಚ ಮತ್ತು ನಿರ್ದೇಶಕರುಗಳಾಗಿ ಚೊವಂಡ ದೀತಿ ನಾಚಪ್ಪ, ಕುಂಞAಡ ನಿರು ನಾಣಯ್ಯ, ಪ್ರಜಿತ್ ಎನ್.ಎಸ್., ಕಾವಡಿಚಂಡ ಡೈಸನ್ ಕುಂಞಪ್ಪ, ಮುಕ್ಕಾಟೀರ ಸಂತೋಷ್ ಸೋಮಣ್ಣ, ಕುಟ್ಟಂಡ ಆಶಾ ಪೊನ್ನಮ್ಮ, ಲಕ್ಷೀ ಕಿರಣ್, ಐನಂಡ ಪ್ರಕಾಶ್ ಗಣಪತಿ, ಮುಕ್ಕಾಟೀರ ಸಂತೋಷ್, ನೆಲ್ಲಮಕ್ಕಡ ಕವಿತಾ ಅಪ್ಪಯ್ಯ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪ್ರಸ್ತುತ ಸಂಘವು ರೂ. ೧೦೦ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದ್ದು ಈ ವರ್ಷ ಸುಮಾರು ರೂ. ೫೦ ಲಕ್ಷ ಆದಾಯ ಗಳಿಸಿದೆ. ಮುಂದೆಯು ಕೂಡ ಹೆಚ್ಚಿನ ಸೇವೆಗಳನ್ನು ಸದಸ್ಯರಿಗೆ ಒದಗಿಸಲು ಆಡಳಿತ ಮಂಡಳಿಯ ಸರ್ವ ಸದಸ್ಯರ ಬೆಂಬಲದೊAದಿಗೆ ಶ್ರಮಿಸಲಾಗುವುದು ಎಂದರು.

ಈ ಸಂಧರ್ಭ ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಕುಟ್ಟಂಡ ವಿನು ಪೂವಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹೇಮಂತ್ ಕುಮಾರ್ ಅವಿರೋಧ ಆಯ್ಕೆ

ಕೂಡಿಗೆ: ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘ ನಿರ್ದೇಶಕರಾಗಿ ಕೆ.ಕೆ. ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಕೂಡಿಗೆ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಚುನಾವಣೆಯು ತಾ. ೧೨ ರಂದು ನಡೆಯಲ್ಲಿದ್ದು, ಇದರಲ್ಲಿ ಮೂರು ಗ್ರಾಮಗಳ ಕ್ಷೇತ್ರದ ಸಾಲಗಾರರ ವಿಭಾಗದಿಂದ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕರಾಗಿರುವ ಕೆ.ಕೆ. ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇವರ ವಿರುದ್ಧವಾಗಿ ಅನಂತ್ ಕುಮಾರ್ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಇಂದು ಚುನಾವಣಾ ಪ್ರಕ್ರಿಯೆಲ್ಲಿ ನಾಮಪತ್ರವನ್ನು ವಾಪಸ್ ಪಡೆಯುವ ಕೊನೆಯ ದಿನವಾಗಿತು. ಅನಂತ್ ಕುಮಾರ್ ನಾಮಪತ್ರವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷರಾಗಿ ಪ್ರಸನ್ನಕುಮಾರ್ ಪುನರಾಯ್ಕೆ

ಮುಳ್ಳೂರು : ಸಮೀಪದ ಆಲೂರುಸಿದ್ದಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್.ಜೆ. ಪ್ರಸನ್ನಕುಮಾರ್ ಪುನರಾಯ್ಕೆಗೊಂಡಿದ್ದಾರೆ. ಆಡಳಿತ ಮಂಡಳಿಯ ಹಿಂದಿನ ಅವಧಿಯಲ್ಲೂ ಪ್ರಸನ್ನಕುಮಾರ್ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಸಂಘದ ಆಡಳಿತ ಮಂಡಳಿಯ ೨೦೨೩-೨೮ನೇ ಅವಧಿಗೆ ಚುನಾವಣೆ ನಡೆಸಲಾಗಿತ್ತು. ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಸನ್ನಕುಮಾರ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಕೆ.ಜಿ.ಹೊನ್ನಪ್ಪ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನಾಪೋಕ್ಲು: ಪಾರಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ. ಪೂವಯ್ಯ, ಉಪಾಧ್ಯಕ್ಷರಾಗಿ ನಾಯಕಂಡ ಸಿ. ಚಂಗಪ್ಪ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಪೆಬ್ಬಾಟಂಡ ಎ. ಪೆಮ್ಮಯ್ಯ, ಬೊಳ್ಳಚೆಟ್ಟಿರ ಎಂ. ಸುರೇಶ್, ದೇವಜನ ಕೆ. ಪಳಂಗಪ್ಪ, ಬಿದ್ದಂಡ ಎ. ಪೆಮ್ಮಯ್ಯ, ನಾಯಕಂಡ ಟಿ. ಮುತ್ತಪ್ಪ, ಆಂಗೀರ ಎಂ. ಮಾದಪ್ಪ, ಬಲ್ಯಾಟಂಡ ಜಿ. ಕುಟ್ಟಯ್ಯ, ಅಪ್ಪನೆರವಂಡ ಎಂ. ನಯನ, ಮೇಡತನ ಎಸ್. ರಶ್ಮಿ, ಹೆಚ್.ಎಸ್. ರಾಜು, ಬಸಪ್ಪ ವೈ.ಬಿ. ಆಯ್ಕೆಯಾಗಿದ್ದಾರೆ.ಹೆಚ್.ಎಸ್. ರಾಜು, ಬಸಪ್ಪ ವೈ.ಬಿ. ಆಯ್ಕೆಯಾಗಿದ್ದಾರೆ.