ಮದೆ, ಅ. ೬: ದೇವರಕೊಲ್ಲಿ ಬದ್ರಿಯಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಕಮಿಟಿ ಆಶ್ರಯದಲ್ಲಿ ಲೋಕ ಪ್ರವಾದಿ ಮುಹಮ್ಮದ್ ಮುಸ್ತಾಫಾ ಜನ್ಮ ದಿನದ ಅಂಗವಾಗಿ ಇಸ್ಕ್ ಹಾಗೂ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.

ಮಸೀದಿ ಅಧ್ಯಕ್ಷ ಹಂಸ ಕೆ. ಸಿ. ಧ್ವಜಾರೋಹಣ ನೆರವೇರಿಸಿದರು. ಮಸೀದಿ ಇಮಾಮಾರಾದ ಜಲೀಲ್ ಸಖಾಫಿ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಹನೀಫ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮದೆ ಗ್ರಾ.ಪಂ. ಸದಸ್ಯ ಈ.ಕೆ. ಸೈದಲವಿ ಭಾಗವಹಿಸಿ ಮಾತನಾಡಿದರು.

ಮಗ್ರಿಬ್ ನಮಾಜಿನ ನಂತರ ಉಮ್ಮರ್ ಸಖಾಫಿ ಕೊಂಡAಗೇರಿ, ಮುದರಿಸ್ ಸಿರಾಜುಲ್ ಹುದಾ ಕುಟ್ಯಾಡಿ ಹುಬ್ಬುರಸೂಲ್ ಪ್ರಭಾಷಣ ಮಾಡಿ ದುಆ ನೆರವೇರಿಸಿದರು. ಅಬ್ಬಾಸ್ ಹಾಜಿ ಉಚ್ಚಿಲ, ಜಾಬಿರ್ ನಿಜಾಮಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ಇದೇ ಸಂದರ್ಭ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವರಕೊಲ್ಲಿ ಬದ್ರಿಯಾ ಮಸ್ಜಿದ್ ಕಾರ್ಯದರ್ಶಿ ಮುಸ್ತಫಾ , ಮಾಜಿ ಅಧ್ಯಕ್ಷ ಅಶ್ರಫ್ ಸಿ.ಎ. ಮಾಜಿ ಕಾರ್ಯದರ್ಶಿ ಈ.ಕೆ.ನಾಸಿರ್, ನೂರುಲ್ ಇಸ್ಲಾಂ ಮಾಜಿ ಅಧ್ಯಕ್ಷ ಟಿ.ಬಿ.ಸಮೀರ್, ಕಾರ್ಯದರ್ಶಿ ಎಂ.ಎಸ್. ರಿಯಾಜ್, ಕೊಯನಾಡು ಜುಮ್ಮಾ ಮಸೀದಿ ಅಧ್ಯಕ್ಷ ಎಸ್.ಯು. ಅಬ್ದುಲ್ ರಜಾಕ್, ಕಾರ್ಯದÀರ್ಶಿ ಹಸೈನಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.