ಮಡಿಕೇರಿ, ಅ. ೬: ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ತಾ. ೮ ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ ಚದುರಂಗ ಆಟ ಪಂದ್ಯಾವಳಿ ನಡೆಯಲಿದೆ.
ತಾ. ೮ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ ೪.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
೭ ರಿಂದ ೯ ವರ್ಷದೊಳಗಿನವರಿಗೆ ೭ ಟ್ರೋಫಿಗಳು, ೧೧ ರಿಂದ ೧೩ ವರ್ಷದೊಳಗಿನವರಿಗೆ ೯ ಟ್ರೋಫಿಗಳು ಹಾಗೂ ಯುವಕರಿಗೆ ಉತ್ತಮ ಆಟಗಾರರಿಗೆ (ಹುಡುಗರಿಗೆ ೧, ಹುಡುಗಿಯರಿಗೆ ೧) ಟ್ರೋಫಿ ಇರುತ್ತದೆ.
ಚೆಸ್ ಆಟಗಾರರು ತಮ್ಮ ಸ್ವಂತ ಚೆಸ್ ಸೆಟ್ಗಳನ್ನು ತರಬೇಕು. ಪ್ರವೇಶ ಶುಲ್ಕ ರೂ. ೩೦೦, ಆಟಗಾರರು ತಾ. ೮ ರಂದು ಬೆಳಿಗ್ಗೆ ೯.೩೦ ರೊಳಗೆ ಹಾಜರಿರಬೇಕು. ೧ನೇ ಸುತ್ತು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ. ನೋಂದಣಿಗೆ ಅಗತ್ಯವಿರುವ ದಾಖಲೆಗಳಾದ ಹೆಸರು, ಜನ್ಮ ದಿನಾಂಕದ ಪ್ರಮಾಣಪತ್ರ, ಆಧಾರ್ ಕಾರ್ಡ್, ಶಾಲೆಯ ಹೆಸರು ಮತ್ತು ಶುಲ್ಕ ಪಾವತಿಯ ಸ್ಕಿçÃನ್ಶಾಟ್, ವಿವರಗಳನ್ನು ೬೩೬೧೬೪೩೦೨೪ ಗೆ ವಾಟ್ಸಾಪ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ೬೩೬೧೬೪೩೦೨೪ ನ್ನು ಸಂಪರ್ಕಿಸಬಹುದು.