ಮಡಿಕೇರಿ, ಅ. ೫ : ಕೊಡಗು ವಿದ್ಯಾಲಯ ಶಾಲೆಯ ೯ ನೇ ತರಗತಿ ವಿದ್ಯಾರ್ಥಿ ಗೋಲ್ಡನ್ ಸಾರ್ಜೆಂಟ್ ಸುಹಿತ್ ಜಿ.ಎಸ್, ಸೆಪ್ಟೆಂಬರ್ ೧೯ ರಿಂದ ೩೦ರವರೆಗೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ತಳ ಸೈನಿಕ ಶಿಬಿರದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾನೆ.

ಈ ಶಿಬಿರದ ಆಯ್ಕೆಯ ಮೊದಲು ೩ ತಿಂಗಳ ತರಬೇತಿ ಆಯ್ಕೆಯ ಮಡಿಕೇರಿ, ಅ. ೫ : ಕೊಡಗು ವಿದ್ಯಾಲಯ ಶಾಲೆಯ ೯ ನೇ ತರಗತಿ ವಿದ್ಯಾರ್ಥಿ ಗೋಲ್ಡನ್ ಸಾರ್ಜೆಂಟ್ ಸುಹಿತ್ ಜಿ.ಎಸ್, ಸೆಪ್ಟೆಂಬರ್ ೧೯ ರಿಂದ ೩೦ರವರೆಗೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ತಳ ಸೈನಿಕ ಶಿಬಿರದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾನೆ.

ಈ ಶಿಬಿರದ ಆಯ್ಕೆಯ ಮೊದಲು ೩ ತಿಂಗಳ ತರಬೇತಿ ಆಯ್ಕೆಯ ಎನ್‌ಸಿಸಿ ಬೆಟಾಲಿಯನ್ ಕೆಡೆಟ್ ಸುಹಿತ್ ಹೇಳಿದ್ದಾರೆ.

ಎನ್‌ಸಿಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಕೊಡಗು ವಿದ್ಯಾಲಯದ ವತಿಯಿಂದ ಬ್ಯಾಂಡ್ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪೋಷಕರಾದ ಸುರೇಂದ್ರ ಮತ್ತು ಗೀತಾ ಸುರೇಂದ್ರÀ ಸಮ್ಮುಖದಲ್ಲಿ ಶಾಲಾ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತ ವ್ಯವಸ್ಥಾಪಕ ರವಿ ಪಿ. ಹಾಗೂ ಮೇಜರ್ ದಾಮೋದರ್ ಅವರು ವಿದ್ಯಾರ್ಥಿ ಸುಹಿತ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸುರೇಂದ್ರ ಅವರು ಮಾತನಾಡಿ ತಮ್ಮ ಮಗನ ಸಾಧನೆ ಹಾಗೂ ಅದಕ್ಕೆ ಕಾರಣಕರ್ತರಾದ ಶಾಲೆಯ ಪರಿಶ್ರಮವನ್ನು ಶ್ಲಾಘಿಸಿದರು. ಇಲ್ಲಿನ ಶಿಕ್ಷಕ ವೃಂದ ಪ್ರತಿ ಮಕ್ಕಳ ಗುಪ್ತ ಪ್ರತಿಭೆಯನ್ನು ಹೊರತೆಗೆದು ಅವರ ಸಮಗ್ರ ಬೆಳವಣಿಗೆಗೆ ಕಾರಣರಾಗಿದ್ದಾರೆ ಹಾಗೂ ಇದನ್ನು ಕಳೆದ ೯ ವರ್ಷಗಳಿಂದ ಕಾಣುತ್ತಾ ಬಂದಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಶಿಕ್ಷಕರು, ಶಾಲೆಯ ವಿದ್ಯಾರ್ಥಿಗಳು , ಶಿಕ್ಷಕ - ಶಿಕ್ಷಕೇತರ ವರ್ಗದವರು ಪಾಲ್ಗೊಂಡಿದ್ದರು.