ಮಡಿಕೇರಿ, ಅ. ೫: ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯು ಇತ್ತೀಚೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಜನನಿ ಆರೋಗ್ಯ ಕೇಂದ್ರದ ಡಾ.ನವೀನ್ ಎಂ.ಎಸ್, ಡಾ. ರಾಜೇಶ್ವರಿ ಬಿ.ಕೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪುರುಷರ ವಿಭಾಗ ಸಿಂಗಲ್ಸ್ನಲ್ಲಿ ಪಿ.ಎಲ್.ಮಂಜುನಾಥ್ ಪ್ರಥಮ, ಕೋರನ ಕುಮರೇಶ್ ದ್ವಿತೀಯ, ಡಬಲ್ಸ್ನಲ್ಲಿ ಡೇರಿಕ್ ಹಾಗೂ ರಚನ್ ಪೊನ್ನಪ್ಪ ಪ್ರಥಮ, ಪಿ.ಎಲ್ ಮಂಜುನಾಥ್ ಹಾಗೂ ರಾಮ್ ಜೀವ್ ದ್ವಿತೀಯ, ಮಹಿಳೆಯರ ವಿಭಾಗ ಸಿಂಗಲ್ಸ್ನಲ್ಲಿ ನಮಿತಾ ಪೊನ್ನಪ್ಪ ಪ್ರಥಮ, ರೀನಾ ಅನಿಲ್ ದ್ವಿತೀಯ, ಮಹಿಳೆಯರ ವಿಭಾಗ ಡಬಲ್ಸ್ ಸ್ವಾತಿ ತಂಗಮ್ಮ ಹಾಗೂ ನಮಿತ ಪೊನ್ನಪ್ಪ ಪ್ರಥಮ, ವಚನ್ ಎಂ.ಎಸ್ ಹಾಗೂ ಸಿಂಚನ ಎಂ.ಎ ದ್ವಿತೀಯ, ವೆಟರನ್ಸ್ ಸಿಂಗಲ್ ಬಿ.ಎಲ್ ಹರೀಶ್ ಪ್ರಥಮ, ಅಜರ್ ವಾಸಿಮ್ ದ್ವಿತೀಯ, ಡಬಲ್ಸ್ ರಾಮ್ ಜೀವ್ ಹಾಗೂ ಬಿ.ಎಲ್ ಹರೀಶ್ ಪ್ರಥಮ, ಪ್ರವೀಣ್ ಹಾಗೂ ಆಸಿಫ್ ದ್ವಿತೀಯ ಸ್ಥಾನ ಪಡೆದರು.

ಮಹಿಳೆಯರ ವೆಟರನ್ಸ್ ವಿಭಾಗ ಸಿಂಗಲ್ಸ್ ಸ್ವಾತಿ ತಂಗಮ್ಮ ಪ್ರಥಮ, ಪುಷ್ಪ ಕಿರಣ್ ದ್ವಿತೀಯ, ೧೪ ವರ್ಷ ಒಳಗಿನ ಬಾಲಕರ ಸಿಂಗಲ್ಸ್ ವಿಭಾಗ ಲಿತಿಶ್ ಕೆ. ಪ್ರಥಮ, ಐಜಾನ್ ವಾಸಿಮ್ ದ್ವಿತೀಯ, ೧೪ ವರ್ಷ ಒಳಗಿನ ಹುಡುಗಿಯರ ಸಿಂಗಲ್ಸ್ ವಿಭಾಗ ಸಿಂಚನ ಎಂ.ಎ ಪ್ರಥಮ, ವಚನ್ ಎನ್.ಎಸ್ ದ್ವಿತೀಯ, ೧೮ ವರ್ಷ ಕೆಳಗಿನ ಬಾಲಕರ ಸಿಂಗಲ್ ವಿಭಾಗ ಸಹಾದ್ ಎಸ್. ಪ್ರಥಮ, ಪ್ರಜ್ವಲ್ ಎಚ್.ಎನ್ ದ್ವಿತೀಯ, ೧೮ ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗ ಫಿದಾ ಕೆ.ಎಚ್. ಪ್ರಥಮ, ಖ್ಯಾತಿ ಕಾವೇರಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.