*ಗೋಣಿಕೊಪ್ಪ, ಅ. ೫: ವೀರಾಜಪೇಟೆ ತಾಲೂಕು ಸಹಕಾರಿ ನೌಕರರ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ. ೪.೯ ಲಕ್ಷ ಲಾಭಾಂಶ ಹೊಂದಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ಕಾಳಯ್ಯ ಹೇಳಿದರು.

ಗೋಣಿಕೊಪ್ಪಲು ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ೩೯ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು ೩೨೮ ಜನ ಸದಸ್ಯರಿದ್ದಾರೆ. ಸಂಘದ ಒಟ್ಟು ಪಾಲು ಬಂಡವಾಳ ರೂ. ೧೮.೧೩ ಲಕ್ಷ ಇದೆ. ನಿರಖು ಠೇವಣಿ, ಪಿಗ್ಮಿ ಠೇವಣಿ ರೂ. ೨.೫೬ ಕೋಟಿ ಹೊಂದಿದೆ. ಸದಸ್ಯರಿಗೆ ಸಾಲದ ರೂಪದಲ್ಲಿ ರೂ. ೨.೩೦ ಕೋಟಿ ನೀಡಲಾಗಿದೆ. ಒಟ್ಟು ಕ್ಷೇಮನಿಧಿ ಹಾಗೂ ಇತರ ನಿಧಿಗಳು ಸೇರಿ ರೂ. ೧೨.೨೧ ಲಕ್ಷವಾಗಿರುತ್ತದೆ. ಸದಸ್ಯರಿಗೆ ಶೇ. ೧೦ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ನರಸಿಂಹ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಬಿ ದರ್ಜೆ ಹೊಂದಿದೆ. ಸಂಘದ ಕಟ್ಟಡ ನಿರ್ಮಾಣಕ್ಕೆ ಗೋಣಿಕೊಪ್ಪಲುವಿನಲ್ಲಿ ಜಾಗ ಖರೀದಿಗೆ ಚಿಂತಿಸಲಾಗಿದೆ. ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ರೂ. ೨೫ ಸಾವಿರ ನೀಡಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ಎಂ.ಎA. ಉತ್ತಪ್ಪ, ನಿರ್ದೇಶಕರಾದ ಎ.ಪಿ. ಪೂಣಚ್ಚ, ಜೆ.ಸಿ. ಜೋಯಪ್ಪ, ಎ.ಜಿ. ವಿಜಯ, ಹೆಚ್.ಡಿ. ಪೂವಯ್ಯ, ಕೆ.ಎಂ. ಸೋಮಯ್ಯ, ಪಿ.ಎನ್. ಉಷಾ ಕುಮಾರಿ, ಎಂ.ಎಸ್. ಕಾವೇರಮ್ಮ, ಬಿ.ಎಸ್. ಮಾಲಾ ಇದ್ದರು.