ಸಂಪಾಜೆ, ಅ. ೫: ಚೆಂಬು ಗ್ರಾಮದ ದಬ್ಬಡ್ಕ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೆರವಿಗಾಗಿ ಸಂಪಾಜೆ ಪಯಸ್ವಿನಿ ಸೊಸೈಟಿಯಿಂದ ಒಂದು ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡ ಲಾಯಿತು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಸಲಹೆಯನ್ನು ಪರಿಗಣಿಸಿ ಸೊಸೈಟಿ ಅಧ್ಯಕ್ಷ ಅನಂತ್ ಊರುಬೈಲು ಅವರು ಈ ಕೊಡುಗೆಯ ವ್ಯವಸ್ಥೆ ಮಾಡಿದ್ದರು. ಗಾಂಧಿ ಜಯಂತಿ ಸಮಾರಂಭದಲ್ಲಿ ಸೊಸೈಟಿ ನಿರ್ದೇಶಕಿ ಮನೋರಮಾ ಬೊಳ್ತಾಜೆ ಅವರು ಶಾಲಾ ಮುಖ್ಯ ಶಿಕ್ಷಕಿ ಅವರಿಗೆ ಕೊಡುಗೆಯನ್ನು ಹಸ್ತಾಂತರಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಗಿರೀಶ್, ಶಾಲಾ ಸಮಿತಿ ಅಧ್ಯಕ್ಷ ಭವಾನಿ ಕುಮಾರ್ ಮತ್ತು ಪುಂಡರೀಕ ಉಪಸ್ಥಿತರಿದ್ದರು.