ಮಡಿಕೇರಿ, ಅ. ೫: ಕಾವೇರಿ ಚಂಗ್ರಾAದಿಯ ತೀರ್ಥೋದ್ಭವ ಸಂದರ್ಭ ಭಾಗಮಂಡಲದಿAದ ತಲಕಾವೇರಿಗೆ ಪಾದಯಾತ್ರೆ ಮೂಲಕ ಬರುವವರಿಗೆ ಪೊನ್ನಂಪೇಟೆಯಿAದ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಹಾಗೂ ಕೊಡವ ರೈಡರ್ಸ್ ಕ್ಲಬ್ ತಿಳಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅಖಿಲ ಕೊಡವ ಸಮಾಜ ಯೂತ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಅಕ್ಟೋಬರ್ ೧೦ರ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿದ್ದು ಅಕ್ಟೋಬರ್ ೧೭ರ ತೀರ್ಥೋದ್ಭವದ ಸಂದರ್ಭ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಪೊನ್ನಂಪೇಟೆಯಿAದ ಭಾಗಮಂಡಲದವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಏರ್ಪಡಿಸಲಾಗಿದೆ.

ಪ್ರತಿವರ್ಷ ಕೊಡವ ಯುವಕ ಯುವತಿಯರನ್ನು ಮಾತ್ರವಲ್ಲ ಅವರ ಪೋಷಕರನ್ನು ಸೇರಿದಂತೆ ಭಾಗಮಂಡಲದಿAದ ತಲಕಾವೇರಿಗೆ ನಡೆಯಲು ಆಸಕ್ತಿ ಇರುವವರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತಿದ್ದು, ತಲಕಾವೇರಿಯಲ್ಲಿ ಕರೆದುಕೊಂಡು ಹೋಗಿ ಬರುವವರೆಗೂ ಅವರ ಬಸ್ ವ್ಯವಸ್ಥೆ ಮಾತ್ರವಲ್ಲ ಊಟ, ತಿಂಡಿ, ಕಾಫಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ನಾವೇ ನೋಡಿಕೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗ ಹಾಗೂ ಕೊಡವ ಜನಾಂಗ ಆಗಮಿಸುವ ಮೂಲಕ ಕಾವೇರಿ ಮಾತೆಯ ಸೇವೆ ಮಾಡಬೇಕಿದೆ.

ಪೊನ್ನಂಪೇಟೆ ಬಸ್ಸು ನಿಲ್ದಾಣದಿಂದ ೧೭ರಂದು ಮಧ್ಯಾಹ್ನ ೧.೩೦ರಿಂದ ೨ ಗಂಟೆ ಸಮಯದಲ್ಲಿ ಬಸ್ಸು ಹೊರಡಲಿದ್ದು, ವಾಹನ ಸೌಕರ್ಯ ಇರುವವರು ಕೂಡ ನಮ್ಮೊಂದಿಗೆ ಸೇರಿಕೊಳ್ಳಬಹುದಾಗಿದೆ. ಈಗಾಗಲೇ ಮೂರು ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು ಭಕ್ತರ ಬೇಡಿಕೆಗೆ ಅನುಗುಣವಾಗಿ ದಾನಿಗಳ ಸಹಾಯದಿಂದ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ. ಬಸ್ಸು ಪೊನ್ನಂಪೇಟೆ, ಗೋಣಿಕೊಪ್ಪ, ವೀರಾಜಪೇಟೆ, ಕದನೂರು ಮಾರ್ಗವಾಗಿ ತೆರಳಿ ಭಾಗಮಂಡಲ ತಲುಪಲಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೯೮೮೦೯೬೭೫೭೩, ೯೯೭೨೩೩೨೮೨೧, ೯೯೪೫೮೮೩೦೮೦ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.