ನಾಪೋಕ್ಲು, ಅ. ೫: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಲ್ಯಾಟಂಡ ಎ. ರಘು ತಮ್ಮಯ್ಯ ಎರಡನೆಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪರದಂಡ ಪ್ರಮಿಳಾ ಪೆಮ್ಮಯ್ಯ ಅವರನ್ನು ಆಯ್ಕೆಗೊಳಿಸಲಾಯಿತು.
ಸಂಘದಲ್ಲಿ ಸತತ ಎರಡು ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರಾಗಿ ಬಡಕಡ ಸುರೇಶ್ ಬೆಳ್ಯಪ್ಪ, ಅಲ್ಲಾರಂಡ ಸನ್ನು ಅಯ್ಯಪ್ಪ, ಕಲ್ಯಾಟಂಡ ಯತೀಶ್ ಬೋಪಣ್ಣ, ನಿಡುಮಂಡ ಹರೀಶ್ ಪೂವಯ್ಯ, ನಂಬಡಮAಡ ಬಿ. ಸುನಿತಾ, ಎ.ಎನ್. ಲಕ್ಷö್ಮಣ, ಪರದಂಡ ಕಸ್ತೂರಿ ಕರುಂಬಯ್ಯ, ಕೋಡಿಮಣಿಯಂಡ ಎಂ. ಬಿಜು ನಾಣಯ್ಯ, ಪಾಲೆ ಟಿ. ಕಾರ್ಯಪ್ಪ, ಕುಡಿಯರ ಬಿ. ಅಚ್ಚಯ್ಯ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಎಂ.ಎನ್. ಚೋಂದಕ್ಕಿ ಕಾರ್ಯನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಉಪಸ್ಥಿತರಿದ್ದರು.