ಕುಶಾಲನಗರ, ಅ. ೪: ಕುಶಾಲ ನಗರ ಗೌಡ ಸಮಾಜದ ವತಿಯಿಂದ ಅಂದಾಜು ೪ ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಕಲ್ಯಾಣ ಮಂಟಪ ನಿರ್ಮಾಣ ಮಾಡ ಲಾಗುವುದು ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ತಿಳಿಸಿದ್ದಾರೆ.

ಗೌಡ ಸಮಾಜದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಕುಶಾಲನಗರ ಮಡಿಕೇರಿ ರಸ್ತೆಯ ಬಸವನಹಳ್ಳಿ ಬಳಿ ಸಮಾಜದ ಹೆಸರಿನಲ್ಲಿ ಎರಡು ಎಕರೆ ಪ್ರದೇಶದ ಜಾಗವನ್ನು ಖರೀದಿಸ ಲಾಗಿದ್ದು, ಯೋಜನೆ ರೂಪಿಸಲಾಗಿದೆ ಎಂದರು.

ಈ ಕಲ್ಯಾಣ ಮಂಟಪ ಆಧುನಿಕ ಶೈಲಿಯಲ್ಲಿ ಉತ್ತಮ ಮತ್ತು ಸಾಂಪ್ರ ದಾಯಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗುವುದು. ಜಾಗ ಖರೀದಿ ಸಲು ಸಮಾಜ ಬಾಂಧವರಿAದ ದೇಣಿಗೆ ರೂಪದಲ್ಲಿ ಹಣ ಪಡೆಯ ಲಾಗಿದೆ. ಸಮಾಜದ ಕೆಲವು ಪದಾಧಿ ಕಾರಿಗಳು ಸದಸ್ಯರು ಬಡ್ಡಿ ರಹಿತ ವಾಗಿಯೂ ಸಾಲ ನೀಡಿ ಸಹಕರಿಸಿ ದ್ದಾರೆ ಎಂದರು. ಎಲ್ಲರ ಸಹಕಾರದಿಂದ ಕೇವಲ ೨ ತಿಂಗಳಲ್ಲೇ ಜಾಗದ ನೋಂದಣಿ ಕಾರ್ಯ ಮುಗಿದಿದೆ ಎಂದು ವಿವರಿಸಿದರು.

ಸಂಘದ ಸದಸ್ಯರು ಮೃತ ಪಟ್ಟ ಸಂದರ್ಭ ಅವರ ತಿಥಿ ಕರ್ಮಾಂ ತರಕ್ಕೆ ಉಚಿತವಾಗಿ ಹಾಲ್ ಒದಗಿ ಸಲಾಗುತ್ತಿದೆ. ಕುಶಾಲನಗರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಸಮುದಾಯ ದವರು ವಾಸವಾಗಿದ್ದು, ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಿಲಿಕಾನ್ ಚೇಂಬರ್ ಹೊಂದಿರುವ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಗೌಡ ಸಮಾಜದ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯುವ ಸಂದರ್ಭ ಸಾರ್ವಜನಿಕರಿಗೆ ಕಿರಿ ಕಿರಿ ಆಗದಂತೆ ವಾಹನ ನಿಲುಗಡೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಸಮಾಜದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು