ಕಣಿವೆ, ಅ. ೫: ಮಳೆ ಕೊರತೆಯ ನೀರಿನ ಅಭಾವದ ನಡುವೆಯೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಕೃಷಿಕರು ಈ ಬಾರಿ ಕೈಗೊಂಡಿರುವ ಭತ್ತದ ನಾಟಿಯ ಗದ್ದೆಗಳಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆರವು ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಭತ್ತದ ನಾಟಿ ಮಾಡಿದ ತಿಂಗಳ ಬಳಿಕ ಪೈರುಗಳು ಬೇರು ಬಿಟ್ಟು ಮೇಲೆ ಬೆಳೆಯುತ್ತಿದ್ದಂತೆಯೇ ಒಮ್ಮೆ ಕಳೆ ಕಿತ್ತರೆ ಭತ್ತದ ಗದ್ದೆಗಳು ಕಳೆಗಟ್ಟುತ್ತವೆ. ಕಪ್ಪು ಬಣ್ಣಕ್ಕೆ ಹೊರಳಿ ಫಲವತ್ತತೆ ಮೈದುಂಬಿಕೊಳ್ಳುತ್ತವೆ. ಕಳೆ ಕಿತ್ತ ಬಳಿಕ ಎರಡನೇ ಸುತ್ತಿನ ರಸಾಯನಿಕ ಗೊಬ್ಬರವನ್ನು ಕೃಷಿಕರು ಗದ್ದೆಗೆ ಅಳವಡಿಸುತ್ತಾರೆ.