ಮಡಿಕೇರಿ, ಅ. ೬ : ವಿಶ್ವ ಹಿಂದೂ ಪರಿಷತ್ ಪ್ರಾರಂಭಗೊAಡು ೬೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಷಷ್ಠಿಪೂರ್ತಿ ಆಚರಣೆ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಶೌರ್ಯ ಜಾಗರಣಾ ರಥವು ಇಂದು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿತು. ನಗರದ ಸುದರ್ಶನ ವೃತ್ತದಲ್ಲಿ ರಥವನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿ ಕೊಳ್ಳಲಾಯಿತು. ನಂತರ ಜ. ತಿಮ್ಮಯ್ಯ ವೃತ್ತದಲ್ಲಿ ವೇದ ಮಂತ್ರ ಪಠಣದೊಂದಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆ ಕಡೆಗೆ ಬೀಳ್ಕೊಡಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಹಾಗೂ ಪ್ರಮುಖರಾದ ಚಿ.ನಾ ಸೋಮೇಶ್ ಅವರುಗಳು ಪರಿಷತ್‌ನ ಸ್ಥಾಪನೆ, ರಥಯಾತ್ರೆಯ ಧ್ಯೇಯೋದ್ದೇಶಗಳ ಬಗ್ಗೆ ಹೇಳಿದರು. ಈ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಖೇಶ್, ಪ್ರಮುಖರಾದ ಸಂಪತ್‌ಕುಮಾರ್, ರಮೇಶ್ ಹೊಳ್ಳ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರಾಧ್ಯಕ್ಷ ಮನು ಮಂಜುನಾಥ್, ವಿ.ಹಿಂ.ಪA. ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಚುನಾಯಿತ ಪ್ರತಿನಿಧಿಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗಿಗಳಾಗಿದ್ದರು.

ಸುಂಟಿಕೊಪ್ಪದಲ್ಲಿ ಸ್ವಾಗತ

ಸುಂಟಿಕೊಪ್ಪ : ಬಜರಂಗದಳದ ವತಿಯಿಂದ ಆಯೋಜಿಸಲಾಗಿರುವ ಶೌರ್ಯ ಜಾಗರಣಾ ರಥಯಾತ್ರೆಗೆ ಸುಂಟಿಕೊಪ್ಪದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

(ಮೊದಲ ಪುಟದಿಂದ) ಶುಕ್ರವಾರದಂದು ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಆಗಮಿಸಿದ ಸಂದರ್ಭ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಭಜರಂಗದಳದ ಕಾರ್ಯಕರ್ತರು ಸ್ವಾಗತಕೋರಿ ಪಟ್ಟಣದ ಮುಖ್ಯಬೀದಿಯಲ್ಲಿ ಚಂಡೆಯೊAದಿಗೆ ಶೌರ್ಯ ಜಾಗರಣಾ ರಥದೊಂದಿಗೆ ಮೆರವಣಿಗೆ ಸಮೇತ ಆಗಮಿಸಿ ಕನ್ನಡ ವೃತ್ತದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗದ್ದೆಹಳ್ಳದವರೆಗೆ ತೆರಳಿ ಮಡಿಕೇರಿಯತ್ತ ಬಿಳ್ಕೊಡಲಾಯಿತು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ವಿಶ್ವ ಹಿಂದೂ ಪರಿಷತ್À ಮಾಜಿಕಾರ್ಯದರ್ಶಿಗಳಾದ ಚಿ.ನಾ. ಸೋಮೇಶ್, ಡಿ.ನರಸಿಂಹ, ಪಟ್ಟೆಮನೆ ಉದಯಕುಮಾರ್, ಪಿ.ಆರ್. ಸುನಿಲ್ ಕುಮಾರ್, ಧನು ಕಾವೇರಪ್ಪ, ಪಿ.ಆರ್. ಸುಕುಮಾರ್, ಬಿ.ಕೆ. ಮೋಹನ್, ಸೋಮಯ್ಯ, ಕನಿಶ್, ಪಟ್ಟೆಮನೆ ಗಿರೀಶ್, ಎಂ.ಆರ್. ಶಶಿಕುಮಾರ್, ಸುನಿಲ್, ವಾಸು, ನಾಗೇಶ್ ಪೂಜಾರಿ ಮತ್ತಿತರರು ಇದ್ದರು.