ಮಡಿಕೇರಿ, ಅ. ೫: ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇಂದು ಭಾಗಮಂಡಲ ಮತ್ತು ತಲಕಾವೇರಿ ಮಾರ್ಗದ ರಸ್ತೆಯ ಗುಣಮಟ್ಟ ಪರಿಶೀಲಿಸಿದರು. ರಸ್ತೆ ಅವ್ಯವಸ್ಥೆ ಕುರಿತು ಸೆ.೩೦ ರಂದು ‘ಶಕ್ತಿ’ಯಲ್ಲಿ ವಿಸ್ತೃತ ವರದಿ ಪ್ರಕಟವಾದ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.