ಗೋಣಿಕೊಪ್ಪ ವರದಿ, ಅ. ೫: ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಕಿಡಿಗೇಡಿಗಳು ಕರಿಮೆಣಸು ಬಳ್ಳಿಗಳನ್ನು ಕಡಿದು ನಾಶ ಮಾಡಿದ್ದಾರೆ. ಪೊನ್ನಂಪೇಟೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಕಾಫಿ ಬೆಳೆಗಾರ ಕಾಯಮಾಡ ಕಿರಣ್ ಎಂಬವರಿಗೆ ಸೇರಿರುವ ತೋಟವನ್ನು ಕಾಯಮಾಡ ರನ್ನುಮುದ್ದಪ್ಪ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡು ಕೃಷಿ ಮಾಡುತ್ತಿದ್ದರು. ಗುರುವಾರ ತೋಟಕ್ಕೆ ತೆರಳಿದ ಸಂದರ್ಭ ಮೆಣಸು ಫಸಲು ಉದುರಿರುವುದು ಪತ್ತೆಯಾಗಿದೆ. ಸುಮಾರು ೨೧ ಬಳ್ಳಿ ನಾಶ ಮಾಡಿದ್ದು, ೧೦ ವರ್ಷದ ಬಳ್ಳಿಯಾಗಿವೆ. ಸುಮಾರು ೧.೫ ಕ್ವಿಂಟಾಲ್ ಫಲಸು ನಷ್ಟವಾಗಿದ್ದು, ಬಳ್ಳಿ ನಾಶವಾಗಿರುವುದರನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕೃಷಿಕರಾದ ಮುದ್ದಪ್ಪ ನೋವು ವ್ಯಕ್ತಪಡಿಸಿದ್ದಾರೆ.