ವೀರಾಜಪೇಟೆ, ಅ. ೬: ವೀರಾಜಪೇಟೆ ಸಮೀಪದ ಕಲ್ಲುಬಾಣೆಯ ಕಾಫಿ ತೋಟದಲ್ಲಿ ಬಾರಿ ಗಾತ್ರದ ಕಾಳಿಂಗ ಸರ್ಪ ಸೆರೆಯಾಗಿದ್ದು ಸ್ನೇಕ್ ಸತೀಶ್ ರಕ್ಷಣೆ ಮಾಡಿ ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಹಾವು ಕಾಣಿಸಿ ಕೊಂಡಿದ್ದು ಕಾರ್ಮಿಕರನ್ನು ಬೆಚ್ಚಿ ಬೀಳುವಂತೆ ಮಾಡಿತು.
ತೋಟದ ಸಿಬ್ಬಂದಿಯೊಬ್ಬರು ಹಾವುಗಳ ರಕ್ಷಣೆ ಮಾಡುತ್ತಿದ್ದ ಸ್ನೇಕ್ ಸತೀಶ್ ಹಾಗೂ ಅಮನ್ ಅವರಿಗೆ ಮಾಹಿತಿ ನೀಡಿದ್ದು, ಅವರು ಕಲ್ಲುಬಾಣೆಯ ಕಾಫಿ ತೋಟಕ್ಕೆ ತೆರಳಿ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.