*ಗೋಣಿಕೊಪ್ಪಲು, ಅ. ೪: ಬಾಳೆಲೆ ವರ್ತುಲದಲ್ಲಿ ಪೋಷಣಾ ಮಾಸಾಚರಣೆ ನಡೆಯಿತು. ಸುಮಾರು ೧೨ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ೬ ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಾಸನ, ಮಹಿಳಾ ಮತ್ತು ಮಕ್ಕಳ ಸಹಾಯಕ ಅಧಿಕಾರಿ ರೀತಾ, ನಿವೃತ್ತ ಅಧಿಕಾರಿ ಲೀಲಾವತಿ, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಜಾನಕಿ, ಸದಸ್ಯ ಸುಖೇಶ್ ಭೀಮಯ್ಯ, ಗ್ರೇಸಿ ಪ್ರಮೀಳಾ, ಆರೋಗ್ಯ ಸಿಬ್ಬಂದಿ ಗಳು, ಆಶಾ ಕಾರ್ಯಕರ್ತೆಯರು ಇದ್ದರು.