ವೀರಾಜಪೇಟೆ, ಅ. ೪: ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರೆಹಮಾನ್ ಕರೆ ನೀಡಿದರು. ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಗ್ರಂಥಾಲಯ ಹಾಗೂ ಭಾಷಾ ಅಧ್ಯಯನ ವಿಭಾಗಗಳ ವತಿಯಿಂದ ಜರುಗಿದ ಪುಸ್ತಕ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಂದು ಮನೆಯಲ್ಲಿ ಪುಸ್ತಕಗಳನ್ನು, ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಮೂಡಬೇಕು. ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಇಂದು ವಾಟ್ಸಾಪ್, ಫೇಸ್ ಬುಕ್, ಇನ್ಸಾ÷್ಟಗ್ರಾಮ್ನ ಬಳಕೆಗಳು ಹೆಚ್ಚುತ್ತಿದ್ದು. ವಿದ್ಯಾರ್ಥಿಗಳು ಪತ್ರಿಕೆ ಕೊಂಡು ಓದಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದಿಸಿದರು. ಈ ಸಂದರ್ಭ ಕಾಲೇಜಿನ ಗ್ರಂಥಪಾಲಕರಾದ ಹಿಲ್ಡೆçಡ್ ಮೆನೇಜೆಸ್, ಲವೀನಾ ಹಾಗೂ ಕನ್ನಡ, ಆಂಗ್ಲ, ಹಿಂದಿ ವಿಭಾಗಗಳ ಪ್ರಾಧ್ಯಾಪಕರುಗಳು ಉಪನ್ಯಾಸಕಿಯರಾದ ಬೀನಾ ರೋಸಿ, ಶಶಿಕಲಾ ಉಪಸ್ಥಿತರಿದ್ದರು.