ಕುಶಾಲನಗರ, ಅ. ೪ : ಕಾರಿನಲ್ಲಿ ಗೋ ಮಾಂಸ ತುಂಬಿಸಿಕೊAಡು ಕೊಪ್ಪ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಮೂವರು ಯುವಕರನ್ನು ಬಂಧಿಸುವಲ್ಲಿ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಹಡಗನಹಳ್ಳಿ ಗ್ರಾಮದಿಂದ ಸ್ಯಾಂಟ್ರೋ ಕಾರ್ (ಕೆಎ೦೧ ಎಂಹೆಚ್ ೦೯೨೨) ನಲ್ಲಿ ಆರೋಪಿಗಳಾದ ನವಾಜ್, ಸಾಧಿಕ್, ನಿಜಾಮ್ ಎಂಬವರು ಅಂದಾಜು ೧೫೦ ಕೆಜಿಗೂ ಅಧಿಕ ಪ್ರಮಾಣದ ಮಾಂಸವನ್ನು ಕಾರಿನಲ್ಲಿ ತುಂಬಿಸಿ ಕುಶಾಲನಗರದ ಕಡೆಗೆ ಬರುತ್ತಿದ್ದ ಸಂದರ್ಭ ಕುಶಾಲನಗರ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಮೇರೆಗೆ ಸಂಜೆ ೭ ಗಂಟೆ ವೇಳೆಗೆ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಪಟ್ಟಣ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳು ಹೆಬ್ಬಾಲೆ ಮೂಲಕ ಕುಶಾಲನಗರಕ್ಕೆ ಬರಲು ಸಿದ್ಧತೆ ನಡೆಸಿದ್ದು ಈ ಸಂದರ್ಭ ಖಚಿತ ಮಾಹಿತಿ ದೊರೆತ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ತಂಡ ಹೆಬ್ಬಾಲೆಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದರು.

ಈ ಬಗ್ಗೆ ಸುಳಿವು ದೊರೆತ ಆರೋಪಿಗಳು ಹಡಗನಹಳ್ಳಿಯಿಂದ ಆವರ್ತಿ ಮೂಲಕ ಕುಶಾಲನಗರಕ್ಕೆ ಬರುತ್ತಿದ್ದ ವೇಳೆ ಪೊಲೀಸರ ವಶವಾಗಿದ್ದಾರೆ. ಗೋ ಮಾಂಸವನ್ನು ಕುಶಾಲನಗರದಲ್ಲಿ ಮಾರಾಟ ಮಾಡಲು ತಂದಿರುವುದಾಗಿ ಮಾಹಿತಿ ಲಭಿಸಿದೆ. -ಚಂದ್ರಮೋಹನ್