ಮಡಿಕೇರಿ, ಅ. ೪: ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಗುರುವಾರ (ಇಂದು) ರುದ್ರಹವನ ನಡೆಯಲಿದೆ. ಬೆಂಗಳೂರಿನ ಮತ್ತಿಕೆರೆ ಶ್ರೀ ಪಂಚಮುಖಿ ದೇವಾಲಯದ ಪ್ರಮುಖರಾದ ವಿದ್ವಾನ್ ಗಣೇಶ್ ದೀಕ್ಷಿತ್ ಮತ್ತು ಅವರ ತಂಡದ ೩೦ ಮಂದಿ ವೈದಿಕರಿಂದ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಕಳೆದ ೨ ದಿನಗಳಿಂದ ಲೋಕ ಕಲ್ಯಾಣಕ್ಕಾಗಿ ಶ್ರೀ ರುದ್ರ ಪಾರಾಯಣ ನಡೆಯುತ್ತಿದೆ, ಸುವ್ಯಕ್ತ ಸಭಾದ ದೀಕ್ಷಿತ ಕುಟುಂಬದ ಸದಸ್ಯರಿಂದ ೩ನೇ ದಿನವಾದ ಗುರುವಾರ ಮಹಾರುದ್ರ ಹವನದೊಂದಿಗೆ ಸಮಾಪನ ಮಾಡಲಾಗುತ್ತದೆ. ಪೂರ್ವಾಹ್ನ ೧೧.೩೦ ಗಂಟೆಗೆ ಪೂರ್ಣಾಹುತಿ ಮಹಾಮಂಗಳಾರತಿ ನಡೆಯಲಿವೆ ಎಂದು ಗಣೇಶ ದೀಕ್ಷಿತ್ ತಿಳಿಸಿದ್ದಾರೆ. ತನ್ನ ಮನಸ್ಸಿನಲ್ಲಿ ಸಂಕಲ್ಪಿಸಿದAತೆ ಪ್ರತಿವರ್ಷವೂ ಬೇರೆ ಬೇರೆ ಪವಿತ್ರ ಸ್ಥಳಗಳಲ್ಲಿ ಇದೇ ರೀತಿಯ ಮಹಾ ರುದ್ರ ಹೋಮವನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದರು. ಜ್ಯೋತಿರ್ಲಿಂಗದಲ್ಲಿ ಪ್ರತೀ ವರ್ಷವೂ ಇಂತÀಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದಾಗಿಯೂ ಹೇಳಿದರು. ಮಡಿಕೇರಿ ವಿಜಯ ವಿನಾಯಕ ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣ ಉಪಾಧ್ಯಾಯ ಅವರು ಕೂಡ ಸಹಕರಿಸಿದ್ದಾರೆ. ಈ ಸಂದರ್ಭ ಕೊಡಗು ಮುಜರಾಯಿ ದೇವಾಲಯಗಳ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಹಾಗೂ ಮಡಿಕೇರಿ ಓಂಕಾರೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಮೊದಲಾದವರಿದ್ದರು.