ಮಡಿಕೇರಿ, ಅ. ೪ : ಪೌರಕಾರ್ಮಿಕರ ವತಿಯಿಂದ ಮಡಿಕೇರಿ ನಗರಸಭೆ ಎದುರು ಪ್ರತಿಭಟನೆ ಹಮ್ಮಿಕೊಂಡು ನಗರಸಭೆ ವಿರುದ್ಧ ಘೋಷಣೆ ಕೂಗಲಾಯಿತು. ಪೌರಕಾರ್ಮಿಕರ ಹಾಜರಾತಿ ಪುಸ್ತಕದಲ್ಲಿನ ಲೋಪ, ಪೌರಕಾರ್ಮಿಕರ ದಿನಾಚರಣೆ ಆಚರಣೆ ಆಗದಿರುವ ಬಗ್ಗೆ ಹಾಗೂ ಪೌರಕಾರ್ಮಿಕರಿಗೆ ಮಡಿಕೇರಿ, ಅ. ೪ : ಪೌರಕಾರ್ಮಿಕರ ವತಿಯಿಂದ ಮಡಿಕೇರಿ ನಗರಸಭೆ ಎದುರು ಪ್ರತಿಭಟನೆ ಹಮ್ಮಿಕೊಂಡು ನಗರಸಭೆ ವಿರುದ್ಧ ಘೋಷಣೆ ಕೂಗಲಾಯಿತು. ಪೌರಕಾರ್ಮಿಕರ ಹಾಜರಾತಿ ಪುಸ್ತಕದಲ್ಲಿನ ಲೋಪ, ಪೌರಕಾರ್ಮಿಕರ ದಿನಾಚರಣೆ ಆಚರಣೆ ಆಗದಿರುವ ಬಗ್ಗೆ ಹಾಗೂ ಪೌರಕಾರ್ಮಿಕರಿಗೆ ಹಾಜರಾಗಿದ್ದರು ಸಹ ನಗರಸಭೆಯ ಅಧಿಕಾರಿಯೋರ್ವರು ಹಾಜರಾತಿ ಪುಸ್ತಕದಲ್ಲಿ ಗೈರು ಹಾಜರು ಎಂದು ನಮೂದಿಸಿ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.

ಸೆಪ್ಟೆಂಬರ್ ೨೩ ರಂದು ಆಚರಿಸಬೇಕಿದ್ದ ಪೌರಕಾರ್ಮಿಕರ ದಿನವನ್ನು ಮಡಿಕೇರಿ ನಗರಸಭೆ ವತಿಯಿಂದ ಅಕ್ಟೋಬರ್ ಆದರೂ ಆಚರಿಸಿಲ್ಲ. ಈ ಬಗ್ಗೆ ನಾವು ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ಕಡೆಗಣನೆ ಮಾಡಲಾಗುತ್ತಿದೆ. ನಗರವನ್ನು ಸ್ವಚ್ಛವಾಗಿರಿಸಲು ಪಣ ತೊಡುವ ಕಾರ್ಮಿಕರಿಗೆ ಸೂಕ್ತವಾದ ಆಹಾರ ವ್ಯವಸ್ಥೆ ಇಲ್ಲದಾಗಿದ್ದು, ಇಂದಿರಾ ಕ್ಯಾಂಟೀನ್‌ನಲ್ಲಿ ದೊರಕುವ ಆಹಾರ ಕಳಪೆಯಾಗಿದ್ದು ಅದನ್ನು ಸೇವಿಸಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿರುವುದಾಗಿಯೂ ಅವರು ಆರೋಪಿಸಿದರು.

ಮನೆಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಆರೋಪ

ಹೆಸರು ಹೇಳಲು ಇಚ್ಚಿಸದ ಪೌರಕಾರ್ಮಿಕರೋರ್ವರು, ಕೆಲ ಪೌರಕಾರ್ಮಿಕರನ್ನು ಸಂಬಳವೂ ನೀಡದೆ ಜಿಲ್ಲೆಯಲ್ಲಿನ ಕೆಲ ಅಧಿಕಾರಿಗಳ ಮನೆಯ ಕೆಲಸಕ್ಕೆ ಬಳಸಿಕೊಳ್ಳು ತ್ತಿರುವುದಾಗಿಯೂ ಆರೋಪಿಸಿದರು.