ಮಡಿಕೇರಿ, ಅ. ೩: ರೋಟರಿ ಮಡಿಕೇರಿಯಿಂದ ನೇಶನ್ ಬಿಲ್ಡರ್ ಅವಾರ್ಡ್ ಎಂಬ ಗೌರವ ಸನ್ಮಾನವನ್ನು ಸಂತ ಜೋಸೆಫರ ಶಾಲಾಶಿಕ್ಷಕಿ ಗರ್ಟೂಡ್ ಟಿ.ಜಿ., ಕೊಡಗು ವಿದ್ಯಾಲಯದ ಪೊನ್ನಮ್ಮ ಪಿ.ಎಸ್, ಮತ್ತು ಚೆಂಬು ಸರಕಾರಿ ಶಾಲೆಯ ಕಾಮಾಕ್ಷಿ ಪಿ.ಎಸ್. ಅವರಿಗೆ ರೋಟರಿ ಸಭಾಭವನ ದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉತ್ತಮ ಸಮಾಜ ನಿರ್ಮಾಣದ ಗುರಿಯೇ ಧ್ಯೇಯ ಎಂಬ ಮಾತುಗಳನ್ನು ಸನ್ಮಾನ ಸ್ವೀಕರಿಸಿದ ಶಿಕ್ಷಕಿಯರು ಹಂಚಿಕೊAಡರು. ರೋಟರಿ ಅಧ್ಯಕ್ಷೆ ಗೀತಾ ಗಿರೀಶ್ ಕಾರ್ಯದರ್ಶಿ ಶರತ್ ಎಂ.ಕೆ., ರೋಟರಿ ಪದಾಧಿಕಾರಿಗಳು ಮತ್ತು ಸದಸ್ಯರು, ರೋಟರಿ ಮಿಸ್ಟಿ ಹಿಲ್ಸ್ನ ಅಧ್ಯಕ್ಷ ಪ್ರಮೋದ್ ರೈ, ಕಾರ್ಯದರ್ಶಿ ರತ್ನಾಕರ ರೈ, ಮಡಿಕೇರಿ ರೋಟರಿ ವುಡ್ಸ್ನ ಕಾರ್ಯದರ್ಶಿ ಹರೀಶ್ ಕಿಗ್ಗಾಲ್, ಇನ್ನರ್ ವೀಲ್ ಸದಸ್ಯೆಯರು, ಸಾಹಿತ್ಯ ಪರಿಷತ್ತಿನ ರಂಜಿತ್ ಮೊದಲಾದವರು ಹಾಜರಿದ್ದರು.